ನವದೆಹಲಿ: Xiaomi   ಭಾರತದಲ್ಲಿ ಮಿ 11 ಅಲ್ಟ್ರಾ ಫೋನ್ ಅನ್ನು (Mi 11 Ultra) ಬಿಡುಗಡೆ ಮಾಡಿದೆ. ಭಾರತದಲ್ಲಿ Mi 11 Ultra ಬೆಲೆ ಸುಮಾರು 70, 000 ರೂಪಾಯಿಗಳಾಗಿರಬಹುದು. ಈ ಫೋನ್ 50 ಎಂಪಿ ಕ್ಯಾಮೆರಾ, ಸ್ನಾಪ್‌ಡ್ರಾಗನ್ 888 ಪ್ರೊಸೆಸರ್ ಸೇರಿದಂತೆ ಇತ್ತೀಚಿನ ವೈಶಿಷ್ಟ್ಯಗಳನ್ನು ಹೊಂದಿದೆ.


COMMERCIAL BREAK
SCROLL TO CONTINUE READING

ಪವರ್ ಫುಲ್ ಕ್ಯಾಮೆರಾ :
ಈ ಸ್ಮಾರ್ಟ್‌ಫೋನ್‌ನಲ್ಲಿ (Smartphone) ಅತಿದೊಡ್ಡ ಕ್ಯಾಮೆರಾ ಸೆನ್ಸಾರ್ ಸಹ ಕಂಡುಬರುತ್ತದೆ. ಮತ್ತು ಹಿಂಭಾಗದಲ್ಲಿ ಸೆಕೆಂಡರಿ ಡಿಸ್ಪೇ ಇದೆ. ಫೋನ್‌ನಲ್ಲಿ ಮೂರು ರಿಯರ್ ಕ್ಯಾಮರಾಗಳನ್ನು ನೀಡಲಾಗಿದೆ. 50 ಮೆಗಾಪಿಕ್ಸೆಲ್ ಪ್ರೈಮರಿ ಲೆನ್ಸ್, 48 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಮತ್ತು 5 ಎಕ್ಸ್ ಪೆರಿಸ್ಕೋಪ್ ಲೆನ್ಸ್ಅನ್ನು ಒಳಗೊಂಡಿದೆ. Mi 11 ಅಲ್ಟ್ರಾ 6.81-ಇಂಚಿನ 2K WQHD + ಡಿಸ್ಪ್ಲೇ ಹೊಂದಿದ್ದು, ಇದು 3,200 × 1,440 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ರಕ್ಷಣೆಗಾಗಿ ಅದರ ಮೇಲೆ ಗೊರಿಲ್ಲಾ ಗ್ಲಾಸ್ ಅಳವಡಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ ಆಧಾರಿತ MIUI 12 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. 50 ಎಂಪಿ ಪ್ರೈಮರಿ ಸೆನ್ಸಾರ್, 48 ಎಂಪಿ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 48 ಎಂಪಿ ಟೆಲಿಫೋಟೋ ಲೆನ್ಸ್ ಹೊಂದಿರುವ ಎಂ 11 ಅಲ್ಟ್ರಾ ಸ್ಮಾರ್ಟ್‌ಫೋನ್‌ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಕಂಪನಿ ನೀಡಿದೆ. 20 ಎಂಪಿ ಸೆಲ್ಫಿ ಕ್ಯಾಮೆರಾ (camera) ನೀಡಲಾಗಿದೆ.


ಇದನ್ನೂ ಓದಿ : Realme 8 5G Price in India: ಕೈಗೆಟಕುವ ದರದಲ್ಲಿ 5G ಸ್ಮಾರ್ಟ್‌ಫೋನ್‌ ಬಿಡುಗಡೆ, ಅದರ ವೈಶಿಷ್ಟ್ಯ ತಿಳಿಯಿರಿ


ಇತರ ವೈಶಿಷ್ಟ್ಯಗಳು ಮತ್ತು ಬೆಲೆಗಳು :
Xiaomi ಯ ಈ ಫೋನ್ ನಲ್ಲಿ  5 G, 4G VoLTE, Wi-Fi 6, Bluetooth 5.1, GPS, NFC   ಮತ್ತು ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಅನ್ನು ನೀಡಲಾಗಿದೆ. ಫೋನ್‌ನಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ (Finger print) ಅಳವಡಿಸಲಾಗಿದೆ. ಫೋನ್ 5000mAh ಬ್ಯಾಟರಿ, 67W ವೈರ್ ಮತ್ತು ವೈರ್‌ಲೆಸ್ ಚಾರ್ಜಿಂಗ್ (wireless charging) ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಹೊಂದಿದೆ. ಮಿ 11 ಅಲ್ಟ್ರಾ ಸ್ಮಾರ್ಟ್‌ಫೋನ್‌ನ ಬೆಲೆ 69,999 ರೂ. ಇದರಲ್ಲಿ 12 Gb RAM  ಮತ್ತು 256 GB ಸ್ಟೋರೇಜ್ ವೇರಿಯೆಂಟ್ ಗಳು ಲಭ್ಯವಿರುತ್ತವೆ. ಮಿ 11 ಅಲ್ಟ್ರಾ ಹಿಂದೆ 1.1 ಇಂಚುಗಳಷ್ಟು ಸಣ್ಣ ಸ್ಕ್ರೀನ್ ಯಿದೆ, ಇದು ಒಲೆಡ್ ಲೆನೇಲ್ ಕೂಡಾ ಇರಲಿದೆ. 


ಇದನ್ನೂ ಓದಿ : Google Chrome:ಕಡಿಮೆ ಡೇಟಾದೊಂದಿಗೆ ಪಡೆಯಿರಿ ಈ ಎಲ್ಲಾ ಲಾಭ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.