ನವದೆಹಲಿ: ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರಿಗಾಗಿ ಹೊಸ Mi Smart Band 6 ಅನ್ನು ಬಿಡುಗಡೆ ಮಾಡಲಾಗಿದೆ. ವಿಶೇಷ ಫಿಟ್‌ನೆಸ್ ಫ್ರೀಕ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು Xiaomi, ಈ ಹೊಸ ಸ್ಮಾರ್ಟ್ ಬ್ಯಾಂಡ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಸ್ಮಾರ್ಟ್ ಬ್ಯಾಂಡ್‌ನಲ್ಲಿ ವಿಶೇಷತೆ ಏನು ನೋಡೋಣ ..
Mi Smart Band 5 ರ ಅಪ್ಡೇಟೆಡ್ ವರ್ಷನ್ ಆಗಿದೆ :
ಮಾಹಿತಿಯ ಪ್ರಕಾರ, Mi Band 6 ಕಳೆದ ವರ್ಷ ಬಿಡುಗಡೆಯಾದ Mi Band 5ಯ ಅಪ್ಡೇಟೆಡ್ ವರ್ಷನ್ ಆಗಿದೆ. ನMi Smart Band 6 ದೊಡ್ಡಸ್ಕ್ರೀನ್ ಹೊಂದಿದೆ. ವರದಿಯ ಪ್ರಕಾರ, ಈ ಹೊಸ ಸ್ಮಾರ್ಟ್ ಬ್ಯಾಂಡ್‌ನ ಹಿಂದೆ, ಕಂಪನಿಯು ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.
ಇದನ್ನೂ ಓದಿ: Vi ಗ್ರಾಹಕರಿಗೆ ಒಳ್ಳೆಯ ಸುದ್ದಿ, ಪ್ರತಿ ರೀಚಾರ್ಜ್‌ನಲ್ಲಿ ಸಿಗಲಿದೆ 60 ರೂ.ವರೆಗೆ ಕ್ಯಾಶ್‌ಬ್ಯಾಕ್
Mi Smart Band 6 ಬೆಲೆ :
ಮಾಹಿತಿಯ ಪ್ರಕಾರ, Mi Smart Band 6 ರ ಬೆಲೆ 229 ಚೈನೀಸ್ ಯುವಾನ್ ಅಂದರೆ 2,500 ರೂಪಾಯಿಗಳು. Mi Smart Band 5 ಅನ್ನು ಕೂಡ ಕಂಪನಿಯು ಅದೇ ಬೆಲೆಯಲ್ಲಿ ಮಾರಾಟ (Sale) ಮಾಡುತ್ತಿದೆ. Mi Smart Band 6 NFC ವೆರಿಯೇಂಟ್ ಬೆಲೆ 279 ಚೈನೀಸ್ ಯುವಾನ್ ಅಂದರೆ ಸುಮಾರು 3000 ರೂಪಾಯಿಗಳು.
Mi Smart Band 6ನ ವೈಶಿಷ್ಟ್ಯಗಳು :
ಇದರಲ್ಲಿ 1.56 ಇಂಚಿನ AMOLED ಟಚ್ ಸ್ಕ್ರೀನ್ ಡಿಸ್ಪ್ಲೇ (Touch screen display) ನೀಡಲಾಗಿದೆ. ಇದು 326 ppi pixel ಡೆನ್ಸಿಟಿ ಮತ್ತು 450 nits ಬ್ರೈಟ್ ನೆಸ್ ಅನ್ನು ಹೊಂದಿದೆ. Mi Smart Band 6 ಉತ್ತಮ ಬ್ಯಾಟರಿ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಒಮ್ಮೆ ಚಾರ್ಜ್ (Charge) ಮಾಡಿದರೆ, ಅದು 14 ದಿನಗಳವರೆಗೆ ಚಾರ್ಜ್ ಇರುತ್ತದೆ ಎಂದು ಕಂಪನಿ ಹೇಳಿದೆ. ಅಲ್ಲದೆ, ಇದನ್ನು ಕೇವಲ ಎರಡು ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಫಿಟ್ನೆಸ್ ಬ್ಯಾಂಡ್ ವಾಟರ್ ಪ್ರೊಫ್ ಆಗಿದೆ.
ಇದನ್ನೂ ಓದಿ: ವಾಟ್ಸಾಪ್ ತರುತ್ತಿದೆ ಹೊಸ Features, Chatting ಆಗಲಿದೆ ಇನ್ನೂ ಅಹ್ಲಾದಕರ
Mi Smart Band 6 ೨೪ ಗಂಟೆಯೂ ಹೃದಯ ಬಡಿತವನ್ನುಮೋನಿಟಾರ್ ಮಾಡುತ್ತದೆ. ಈ ಸ್ಮಾರ್ಟ್ ಬ್ಯಾಂಡ್ ಸ್ಲೀಪ್-ಟ್ರ್ಯಾಕಿಂಗ್ (Sleep-Tracking) ಅನ್ನು ಸಹ ಒಳಗೊಂಡಿದೆ. ಅಲ್ಲದೆ, ಈ ಸ್ಮಾರ್ಟ್ ಬ್ಯಾಂಡ್‌ನಲ್ಲಿ 30 Sports Mode ಇದೆ. ಈ ಪೈಕಿ 6 Auto Fitness Tracking Modesಗಳನ್ನು ಸೇರಿಸಲಾಗಿದೆ. ಹೊಸ ಸ್ಮಾರ್ಟ್ ಬ್ಯಾಂಡ್ ಒಳಾಂಗಣ ಮತ್ತು ಹೊರಾಂಗಣ ಆಟಗಳನ್ನು ಟ್ರ್ಯಾಕ್ ಮಾಡಬಹುದು ಎಂದು ಕಂಪನಿ ಹೇಳಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.