ಈ ಸ್ಮಾರ್ಟ್ ಪೋನ್ ಮೇಲೆ 10,000 ರೂಪಾಯಿಗಳ ಬೆಲೆ ಕಡಿತ,..!

ಫೋನ್ 6.5 ಇಂಚಿನ ಫುಲ್ ಎಚ್ಡಿ ಪ್ಲಸ್ (1080 × 2340 ಪಿಕ್ಸೆಲ್) ಡಿಸ್ಪ್ಲೇ ಹೊಂದಿದೆ. Asus ROG Phone 3  ಸ್ಮಾರ್ಟ್‌ಫೋನ್ 6.59-ಇಂಚಿನ OLED HDR ಅಮೋಲೆಡ್ ಡಿಸ್ಪ್ಲೇ  ಹೊಂದಿದೆ.

Written by - Ranjitha R K | Last Updated : Apr 20, 2021, 06:42 PM IST
  • Asus ROG Phone 5 ಪೋನ್ ಮೇಲೆ 10 ಸಾವಿರ ರೂಪಾಯಿಗಳ ಕಡಿತ
  • ಫೋನ್ 6.5 ಇಂಚಿನ ಫುಲ್ ಎಚ್ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ
  • ಫೋನ್ 30 ವ್ಯಾಟ್ ವೇಗದ ಚಾರ್ಜಿಂಗ್ ಸಪೋರ್ಟ್ ನೊಂದಿಗೆ ಬರುತ್ತದೆ
ಈ ಸ್ಮಾರ್ಟ್ ಪೋನ್ ಮೇಲೆ 10,000 ರೂಪಾಯಿಗಳ ಬೆಲೆ ಕಡಿತ,..!

ನವದೆಹಲಿ : ಸ್ವಲ್ಪ ಸಮಯದ ಮೊದಲು Asus  ROG Phone 5  ಲಾಂಚ್  ಮಾಡಲಾಗಿತ್ತು. ಇದು ಸಾಕಷ್ಟು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಈಗ ಕಂಪನಿಯು ಹಿಂದಿನ ಫೋನ್ Asus ROG Phone 3 ಬೆಲೆಯಲ್ಲಿ ಕಡಿತಗೊಳಿಸಿದೆ.  ಈ ಫೋನ್ ಬಿಡುಗಡೆಯಾದ ನಂತರ ಎರಡನೇ ಬಾರಿಗೆ ಅದರ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಫೋನ್‌ನ 12 GB RAM+ 128 GB  ವೇರಿಯೆಂಟ್ ಬೆಲೆಯನ್ನು 10 ಸಾವಿರ ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದೆ.ಈಗ ಫೋನಿನ ಈ ಮಾಡೆಲ್ ಅನ್ನು 45,999 ರೂಗಳಿಗೆ ಖರೀದಿಸಬಹುದು. ಅದೇ ಸಮಯದಲ್ಲಿ, ಫೋನ್‌ನ 8 GB RAM ಮತ್ತು 128 GB ಸ್ಟೋರೇಜ್  ವೇರಿಯೆಮಟ್ ನ ಬೆಲೆಯನ್ನು ನಾಲ್ಕು ಸಾವಿರ ರೂಪಾಯಿಗಳವರೆಗೆ ಕಡಿಮೆ ಮಾಡಲಾಗಿದೆ. ಈಗ ಈ ಮಾಡೆಲ್ ಅನ್ನು 45,999 ರೂಗಳ ಬದಲು 41,999 ರೂಗಳಿಗೆ ಖರೀದಿಸಬಹುದು.

ಫೋನ್ ಡಿಸ್ ಪ್ಲೇ:
ಫೋನ್ 6.5 ಇಂಚಿನ ಫುಲ್ ಎಚ್ಡಿ ಪ್ಲಸ್ (1080 × 2340 ಪಿಕ್ಸೆಲ್) ಡಿಸ್ಪ್ಲೇ ಹೊಂದಿದೆ. Asus ROG Phone 3  ಸ್ಮಾರ್ಟ್‌ಫೋನ್ 6.59-ಇಂಚಿನ OLED HDR ಅಮೋಲೆಡ್ ಡಿಸ್ಪ್ಲೇ (Display) ಹೊಂದಿದೆ. ಈ ಡಿಸ್ಪ್ಲೇ  144 Hz ರಿಫ್ರೆಶ್ ರೇಟ್ ನೊಂದಿಗೆ ಬರುತ್ತದೆ. ಫೋನ್‌ಗೆ (Phone) ಪವರ್ ನೀಡಲು Snapdragon 865 Plus  ಪ್ಲಸ್ ಪ್ರೊಸೆಸರ್ ಅನ್ನು ಹಾಕಲಾಗಿದೆ. ಇದು 5 ಜಿ ಸಪೋರ್ಟ್ ನೊಂದಿಗೆ ಬರುತ್ತದೆ.

ಇದನ್ನೂ ಓದಿ :  WhatsApp- ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತೆ ವಾಟ್ಸಾಪ್ ಚಾಟ್, ಯಾವುದೀ ಹೊಸ ವೈಶಿಷ್ಟ್ಯ ತಿಳಿಯಿರಿ

ಗೇಮಿಂಗ್ ಸ್ಮಾರ್ಟ್ ಫೋನ್ :  
ಗೇಮಿಂಗ್ ಸ್ಮಾರ್ಟ್‌ಫೋನ್ (Smartphone) ಅನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಕಳೆದ ಬಾರಿಯಂತೆ ನೀಡಿದಂತೆ 6000 mAh ಬ್ಯಾಟರಿಯನ್ನು ನೀಡಿದೆ. ಈ ಫೋನ್ 30 ವ್ಯಾಟ್ ವೇಗದ ಚಾರ್ಜಿಂಗ್ ಸಪೋರ್ಟ್ ನೊಂದಿಗೆ ಬರುತ್ತದೆ. ROG Phone 3  ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿಯು ಸೈಡ್ ಚಾರ್ಜಿಂಗ್ ಪೋರ್ಟ್ (Side charging port) ಅನ್ನು ಸಹ ಒದಗಿಸಿದೆ. ಅಂದರೆ, ಈ ಫೋನ್‌ನಲ್ಲಿ ಎರಡು ಟೈಪ್ ಸಿ ಚಾರ್ಜಿಂಗ್ ಪೋರ್ಟ್‌ಗಳಿವೆ. ಫೋನ್ ಅಲ್ಟ್ರಾಸಾನಿಕ್ ಏರ್‌ಟ್ರಿಗ್ಗರ್ ಅನ್ನು ಹೊಂದಿದೆ, ಇದು ಗೇಮಿಂಗ್ ಸಮಯದಲ್ಲಿ ಆಟಗಾರನಿಗೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ. ಫೋನ್ ಸೆಕ್ಯುರಿಟಿಗಾಗಿ ಫಿಂಗರ್‌ಪ್ರಿಂಟ್ ಸೆನ್ಸಾರ್ ನೀಡಲಾಗಿದೆ. ಸಂವೇದಕವನ್ನು ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 6 ಅನ್ನು ಬಳಸಲಾಗಿದೆ. 

ಇದನ್ನೂ ಓದಿ :  PUBG ಮೊಬೈಲ್ ಗೇಮ್ ಅಭಿಮಾನಿಗಳಿಗೆ ಬಿಗ್ ನ್ಯೂಸ್ : ಗೇಮ್ ಲಾಂಚಿಂಗ್ ಡೇಟ್ ಫಿಕ್ಸ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News