Flying Peocock Video : ನವಿಲು ನಮ್ಮ ರಾಷ್ಟ್ರೀಯ ಪಕ್ಷಿ. ನವಿಲಿನ ಸೌಂದರ್ಯವನ್ನು ಬಣ್ಣಿಸಲು ಪದಗಳೇ ಕಡಿಮೆ ಬೀಳಬಹುದು. ನವಿಲಿನ ನೋಟ, ನಾಟ್ಯ, ಸೌಂದರ್ಯಕ್ಕೆ ಸಾಟಿಯೇ ಇಲ್ಲ. ನವಿಲಿಗೆ ನವಿಲೇ ಸಾಟಿ ಎಂದರೆ ತಪ್ಪಲ್ಲ.ನವಿಲು ಗರಿ ಬಿಚ್ಚಿ ಕುಣಿಯುವುದು ಹೊಸತೇನಲ್ಲ.ಇನ್ನೇನು ಮಳೆ ಬರುತ್ತದೆ ಎನ್ನುವ ಮುನ್ಸೂಚನೆಯನ್ನು ಕಾರ್ಮೋಡ ನೀಡುತ್ತಿದ್ದಂತೆಯೇ ಈ ನಾಟ್ಯ ಮಯೂರಿ ಗರಿ ಬಿಚ್ಚಿ ಕುಣಿದಾಡುವುದಕ್ಕೆ ಆರಂಭಿಸುತ್ತದೆ. ಆದರೆ, ಗರಿ ಬಿಚ್ಚಿಕೊಂಡು ಬಾನೆತ್ತರಕ್ಕೆ ಹಾರುವುದು ಎಂದರೆ ನಂಬುವುದು ಸ್ವಲ್ಪ ಕಷ್ಟ. ಆದರೆ ನಾವು ಹೇಳುತ್ತಿರುವುದು ಆಶ್ಚರ್ಯವಾದರೂ ಸತ್ಯ. 


COMMERCIAL BREAK
SCROLL TO CONTINUE READING

ಕೆಲವೊಮ್ಮೆ ಪ್ರಕೃತಿಯಲ್ಲಿ ಕೆಲ ವಿಚಿತ್ರಗಳು ಸಂಭವಿಸಿ ಬಿಡುತ್ತವೆ. ಅಂತ ವಿಚಿತ್ರಗಳಲ್ಲಿ ಒಂದು  ಈ ನವಿಲು ಬಾನೆತ್ತರಕ್ಕೆ ಹಾರಿರುವುದು. ನವಿಲು ಈ ರೀತಿ ಹಾರುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. 


ಇದನ್ನೂ ಓದಿ : ಕಬ್ಬು ಕಟಾವು ಮಾಡುತ್ತಿದ್ದಾಗ 2 ಚಿರತೆ ಮರಿ ಪತ್ತೆ: ಅಮ್ಮನಿಗಾಗಿ ಕಾದ ಅರಣ್ಯ ಇಲಾಖೆ


ಇಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಎರಡು ನವಿಲು ತಮ್ಮ ಪಾಡಿಗೆ ಹೆಜ್ಜೆ ಹಾಕಿಕೊಂಡು ಬರುತ್ತಿರುವುದನ್ನು ಕಾಣಬಹುದು.ಅಲ್ಲೇ ದಾರಿ ಮಧ್ಯೆ ಇರುವ ಹುಳು ಹೆಂಟೆಗಳನ್ನು ಕುಕ್ಕಿ ತಿನ್ನುತ್ತಾ ಬರುತ್ತಿರುವುದನ್ನು ಗಮನಿಸಬಹುದು.ಆದರೆ  ಇದ್ದಕ್ಕಿದ್ದಂತೆ ಅಲ್ಲಿ ಒಂದು ನವಿಲ ಮನಸ್ಸಿಗೆ ಅದೇನು ಯೋಚನೆ ಬಂತೋ ಏನೋ 
? ನೆಲದ ಮೇಲಿನಿಂದ ಪುರ್ರನೆ ಹಾರಿ ಬಿಟ್ಟಿದೆ. ಅದು ಕೂಡಾ ಮುಗಿಲೆತ್ತರಕ್ಕೆ.ಈ   ಹಾರುವ ನವಿಲಿನ ದೃಶ್ಯವನ್ನು ಬಣ್ಣಿಸುವುದು ಸಾಧ್ಯವೇ ಇಲ್ಲ.


ಹಾರುವ ನವಿಲಿನ ವಿಡಿಯೋ : 


 


Viral Video: ರಸ್ತೆ ಮಧ್ಯೆ ಕಂಬದಂತೆ ನೆಟ್ಟಗೆ ಎದ್ದು ನಿಂತ ನಾಗರಹಾವು: ಅಬ್ಬಬ್ಬಾ ಮೈಝುಂ ಎನಿಸೋ ವಿಡಿಯೋ ವೈರಲ್


ನವಿಲಿನ ಈ ಅದ್ಭುತ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ ನಲ್ಲಿ @CosmicGaiaX ಎಂಬ ಖಾತೆಯಲ್ಲಿ ಶೇರ್ ಮಾಡಲಾಗಿದೆ.ಕೇವಲ 10 ಸೆಕೆಂಡ್‌ಗಳ ವೀಡಿಯೋವನ್ನು ಮಿಲಿಯನ್ ಗಟ್ಟಲೆ ಜನ ವೀಕ್ಷಿಸಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಕೂಡಾ ಬಂದಿವೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.