Viral video : ವೇದಿಕೆಯಲ್ಲಿದ್ದ ಕುರ್ಚಿಗೆ ಒದ್ದು ಅಳುತ್ತಾ ವೇದಿಕೆಯಿಂದ ಕೆಳಗಿಳಿದ ವರ .! ಇಷ್ಟಕ್ಕೂ ಆಗಿದ್ದೇನು ?
ಮದುವೆ ಮನೆಯಲ್ಲಿ ಹೆಣ್ಣನ್ನು ಬೀಳ್ಕೊಡುವ ವೇಳೆ ಸಾಮಾನ್ಯವಾಗಿ ಹೆಣ್ಣಿನ ಕಣ್ಣಂಚು ಒದ್ದೆಯಾಗುತ್ತೆ. ಆದರೆ ಇಲ್ಲೊಂದು ಮದುವೆಯಲ್ಲಿ ಅದ್ಯಾಕೋ ವರ ಕಣ್ಣೀರು ಹಾಕುತ್ತಲೇ ವೇದಿಕೆಯಿಂದ ಇಳಿದಿದ್ದಾನೆ.
ಬೆಂಗಳೂರು : ವಿವಾಹ ಎಂದರೆ ಅಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ನಗು, ಸಂ ತೋಷ ತುಂಬಿರುತ್ತದೆ. ಹೊಸ ಜೀವನದ ಬಗ್ಗೆ ಸಾವಿರಾರು ಕನಸುಗಳನ್ನು ಹೊತ್ತುಕೊಂಡ ವಧು ವರ ಹಸೆಮಣೆ ಏರುತ್ತಾರೆ. ತಮ್ಮ ಮುಂದಿನ ಜೀವನದಲ್ಲಿ ಜೊತೆಯಾಗಿ ಹೆಜ್ಜೆ ಹಾಕುವುದಾಗಿ ಆ ದೇವರನ್ನು ಸಾಕ್ಷಿಯಾಗಿ ವಚನ ಸ್ವೀಕರಿಸುತ್ತಾರೆ. ಮಂಗಳ ವಾದ್ಯಗಳೊಂದಿಗೆ ಶಾಸ್ತ್ರ ಬದ್ದವಾಗಿ ನಡೆಯುವ ಮದುವೆಯಲ್ಲಿ ಕೇವಲ ಗಂಡು ಹೆಣ್ಣು ಮಾತ್ರವಲ್ಲ, ಎರಡು ಕುಟುಂಬಗಳು ಕೂಡಾ ಒಂದಾಗುತ್ತವೆ. ಎರಡು ಕುಟುಂಬಗಳು ಸಂತೋಷದ ಕಡಲಲ್ಲಿ ತೇಲುತ್ತಿರುತ್ತವೆ. ಹೌದು ಹೆಣ್ಣನ್ನು ಬೀಳ್ಕೊಡುವ ಸಂದರ್ಭದಲ್ಲಿ ಹೆಣ್ಣಿನ ಕಣ್ಣಲ್ಲಿ ನೀರು ಜಿನುಗಬಹುದು. ಅಲ್ಲಿ ಒಂದು ಸಣ್ಣ ಆತಂಕವಿರುತ್ತದೆ. ಹೊಸ ಮನೆ ಬದುಕು ಹೇಗಿರಬಹುದು ಎಂಬ ಅಳುಕು ಇರುತ್ತದೆ. ಆದರೂ ಮದುವೆಯ ಖುಷಿ ಇವೆಲ್ಲದ್ದಕ್ಕಿಂತ ಮೀರಿರುತ್ತದೆ.
ಮದುವೆಯಲ್ಲಿ ಕಣ್ಣೀರಿಡುತ್ತಾ ವೇದಿಕೆಯಿಂದ ಇಳಿದ ವರ :
ಮೊದಲೇ ಹೇಳಿದ ಹಾಗೆ ಮದುವೆ ಮನೆಯಲ್ಲಿ ಹೆಣ್ಣನ್ನು ಬೀಳ್ಕೊಡುವ ವೇಳೆ ಸಾಮಾನ್ಯವಾಗಿ ಹೆಣ್ಣಿನ ಕಣ್ಣಂಚು ಒದ್ದೆಯಾಗುತ್ತೆ. ಆದರೆ ಇಲ್ಲೊಂದು ಮದುವೆಯಲ್ಲಿ ಅದ್ಯಾಕೋ ವರ ಕಣ್ಣೀರು ಹಾಕುತ್ತಲೇ ವೇದಿಕೆಯಿಂದ ಇಳಿದಿದ್ದಾನೆ.
ಇದನ್ನೂ ಓದಿ : Shocking Viral Video: ಎದೆ ಝಲ್ಲೆನಿಸುವ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ
ಮದುವೆ ನಡೆಯುತ್ತಿರುವ ಸ್ಥಳದಲ್ಲಿ ಸೋಫಾಗಳು ಮತ್ತು ಕುರ್ಚಿಗಳನ್ನು ಅಲಂಕರಿಸಿರುವುದನ್ನು ಕಾಣಬಹುದು. ಅಲ್ಲದೆ,ವರ ಕಣ್ಣೀರು ಹಾಕಿಕೊಂಡು ಕಣ್ಣೊರೆಸಿಕೊಂಡು ಬರುತ್ತಿರುವುದನ್ನು ಕೂಡಾ ಕಾಣಬಹುದು. ಈ ವೇಳೆ ವರ ಬಹಳ ಕೋಪದಲ್ಲಿ ಇದ್ದವನಂತೆ ಕಾಣಿಸುತ್ತಾನೆ. ಅಲ್ಲದೆ, ತಾನು ಬರುತ್ತಿರುವ ವೇಳೆ ಅಲ್ಲೇ ಇದ್ದ ಕುರ್ಚಿಗೆ ಒದ್ದು ಅದನ್ನು ಕೆಳಗೆ ಬೀಳಿಸುತ್ತಾನೆ.
ಇನ್ಸ್ಟಾಗ್ರಾಮ್ ರೀಲ್ಸ್ ವಿಡಿಯೋದಲ್ಲಿ ವಿಡಿಯೋ ವೈರಲ್ ಆಗಿದೆ. ಈ ವೀಡಿಯೋದಲ್ಲಿ ವಧು ಎಲ್ಲಿಯೂ ಕಾಣಿಸದಿರುವುದು ಅತ್ಯಂತ ಅಚ್ಚರಿಯ ಸಂಗತಿ. ಈ ವಿಡಿಯೋ ಹೊರಬಿದ್ದ ಬಳಿಕ ಸಾಮಾಜಿಕ ಜಾಲತಾಣ ಬಳಕೆದಾರರು ವರನ ಬಗ್ಗೆ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಕೆಲವುರು ವರನನ್ನು ಪುಟ್ಟ ಮಗು ಎಂದು ಕರೆದಿದ್ದಾರೆ. ನಿರಂಜನ್ ಮೊಹಪಾತ್ರ ಎಂಬ ಬಳಕೆದಾರರು ಈ ವೀಡಿಯೊವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ನಾವು ಈ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಿಲ್ಲ. ಇದನ್ನು ತಮಾಷೆಗಾಗಿ ಕೂಡಾ ಚಿತ್ರೀಕರಿಸಿರಬಹುದು.
ಇದನ್ನೂ ಓದಿ : Viral Video: 15 ಸೆಕೆಂಡ್ ವಿಡಿಯೋಗಾಗಿ ಬೆಟ್ಟಕ್ಕೆ ಬೆಂಕಿ ಇಟ್ಟ ಟಿಕ್‍ಟಾಕ್ ಸ್ಟಾರ್!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.