Funny Wedding Video: ಮದುವೆ ಮನೆ ಅಂದರೆ ಅಲ್ಲಿ ನಗು, ತಮಾಷೆ, ಸಂತೋಷ ಎಲ್ಲವೂ ಇರುತ್ತದೆ. ಮದುವೆಯ ಹೆಣ್ಣಿನ ಮುಖದಲ್ಲಿ ಕೂಡಾ ಸಂಕೋಚ, ಸಂತೋಷ, ಹೀಗೆ ನಾನಾ ಭಾವನೆಗಳು ಎದ್ದು ಕಾಣುತ್ತಿರುತ್ತವೆ. ಹೊಸ ಜೀವನಕ್ಕೆ ಕಾಲಿಡುವ ಬಗ್ಗೆ ಇಬ್ಬರ ಮನಸ್ಸಿನಲ್ಲಿಯೂ ಬಹಳಷ್ಟು ಕಾತರ, ಕುತೂಹಲ ಮೂಡಿರುತ್ತದೆ. ಆದರೆ ಸಂತೊಶದಿನದ ಇರಬೇಕಾದ ಜೋಡಿ ಮದುವೆಯ ದಿನವೇ ಜಗಳಕ್ಕೆ ನಿಂತು ಬಿಟ್ಟರೆ ಅವರ ಮುಂದಿನ ಜೀವನ ಹೇಗೆ ಎನ್ನುವ ಯೋಚನೆ ಬಾರದೇ ಇರದು.
ಸಿಹಿತಿಂಡಿ ಎಸೆದ ವಧು :
ಸಾಮಾಜಿಕ ಜಾಲತಾಣ ಯೂಟ್ಯೂಬ್ ನಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವಧು-ವರರಿಬ್ಬರೂ ವೇದಿಕೆ ಮೇಲೆ ನಿಂತಿರುವುದನ್ನು ಕಾಣಬಹುದು. ಮದ್ಯ್ವೆಯ ಶಾಸ್ತ್ರ ಕೂಡಾ ಎಲ್ಲಾ ಮುಗಿದಿರುವಂತೆ ಕಾಣುತ್ತದೆ. ಇಲ್ಲಿ ಮದುವೆಯ ವೇಳೆ ವರ ವಧುವಿಗೆ ಸಿಹಿ ತಿನ್ನಿಸುವುದು ಸಂಪ್ರದಾಯ. ಆ ಸಂಪ್ರದಾಯದಂತೆ ವರ ವಧುವಿಗೆ ಸಿಹಿ ತಿನ್ನಿಸಲು ಮುಂದಾಗುತ್ತಾನೆ. ಆದರೆ ಅದ್ಯಾಕೋ ಕೋಪಗೊಂಡಿರುವ ವಧು ಸಿಹಿ ತಿಂಡಿಯನ್ನು ವರನ ಕೈಯಿಂದ ತೆಗೆದುಕೊಂಡು ಎಸೆದು ಬಿಡುತ್ತಾಳೆ.
ಇದನ್ನೂ ಓದಿ : Video: ವಿದ್ಯುತ್ ಕಂಬ ಏರಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ 21ರ ಯುವತಿ
ವಿಷಯ ಇಷ್ಟೇ ಆಗಿದ್ದರೆ ಏನೂ ಆಗುತ್ತಿರಲಿಲ್ಲವೇನೋ. ಮುಂದಿನ ಸಂಪ್ರದಾಯದಂತೆ ವಧು ವರನಿಗೆ ನೀರು ಕುಡಿಸಲು ಮುಂದಾಗುತ್ತಾಳೆ. ಆಗ ಬ[ವರ ಕೂಡಾ ನಿರು ಕುಡಿಯಲು ನಿರಾಕರಿಸಿಬಿಡುತ್ತಾನೆ. ಅಲ್ಲಿಗೆ ರೌದ್ರಾವತಾರ ತಾಳಿದ ವಧು, ನೀರನ್ನು ಅಲ್ಲಿಯೇ ಚೆಲ್ಲಿ ಮತ್ತೆ ಆ ಲೋಟವನ್ನು ಕೂಡಾ ಸೇರಿದ್ದ ಜನರತ್ತ ಎಸೆದು ಬಿಡುತ್ತಾಳೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ :
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆದರೆ ವಧು ಇಲ್ಲಿ ಯಾಕೆ ಈ ರೀತಿ ಕೋಪಗೊಂಡಿದ್ದಾಳೆ ಎನ್ನುವುದು ಮಾತ್ರ ಕೊನೆವರೆಗೂ ಸ್ಪಷ್ಟವಾಗುವುದಿಲ್ಲ. ವಿಡಿಯೋ ವೀಕ್ಷಿಸದ ವಧುವಿನ ನಡವಳಿಕೆ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನು ವರನ ಬಗ್ಗೆ ಕೂಡಾ ಅಯ್ಯೋ ಪಾಪ ಎಂದು ತಮ್ಮ
ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Viral Video: ಪರಸ್ಪರರ ಜೀವ ತೆಗೆಯಲು ಮುಂದಾದ ಹಾವು-ಮುಂಗುಸಿ, ರಕ್ತಸಿಕ್ತ ಕಾಳಗ ನೋಡಿ ಎದೆ ಝಲ್ಲೇನ್ನುತ್ತದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.