ಚಾಮರಾಜನಗರ: ತಾಯಿಯಿಂದ ತಪ್ಪಿಸಿಕೊಂಡ ಆನೆ ಮರಿಯೊಂದು ಶಾಲೆಗೆ ಬಂದು ಮಕ್ಕಳೊಟ್ಟಿಗೆ ಆಟ ಆಡಿರುವ ಅಪರೂಪದ ಘಟನೆ ಯಳಂದೂರು ತಾಲೂಕಿನ ಪುರಾಣಿಪೋಡಿನ ವಸತಿ ಶಾಲೆಯಲ್ಲಿ ಭಾನುವಾರ ನಡೆದಿದೆ. 


COMMERCIAL BREAK
SCROLL TO CONTINUE READING

ಹೌದು, ಬಿಳಿಗಿರಿರಂಗನಬೆಟ್ಟ ಅರಣ್ಯ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟ  ಗಂಡು ಮರಿಯಾನೆಯೊಂದು ದಾರಿ ತಪ್ಪಿ ಪುರಾಣಿಪೋಡಿನ ವಸತಿ ಶಾಲೆಗೆ ಬಂದಿದೆ‌. ಆನೆ ಕಂಡದ್ದೇ ತಡ ಖುಷಿಗೊಂಡ ಮಕ್ಕಳು ಆನೆಯೊಟ್ಟಿಗೆ ಆಡಿ ನಲಿದಾಡಿದ್ದಾರೆ.


ಇದನ್ನೂ ಓದಿ- Viral Video : I LOVE YOU ಎಂದು ವರನಿಗೆ ಮುತ್ತಿಟ್ಟ ವಧು, ವರನನ್ನು ನೋಡಿ ದಂಗಾದ ಜನ


ಮನುಷ್ಯರನ್ನೇ ಕಾಣದ ಮರಿಯಾನೆ ಹೊಸ ಸ್ನೇಹಿತರೊಟ್ಟಿಗೆ ನಲಿದು ಕೊಟ್ಟ ಹಾಲನ್ನು ಕುಡಿದಿದೆ. ಬಾಳೆಹಣ್ಣು ತಿನ್ನಿಸಿ 'ಆನೆ ಬಂತೊಂದಾನೆ, ಯಾವೂರ ಆನೆ' ಎಂದು ಹಾಡಿ ಮರಿಯೊಟ್ಟಿಗೆ ಕುಣಿದು ಕುಪ್ಪಳಿಸಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.


ಇದನ್ನೂ ಓದಿ- Baby Name: ಮಗುವಿಗೆ ಭಾರತೀಯ ಖಾದ್ಯದ ಹೆಸರಿಟ್ಟ ವಿದೇಶಿ ದಂಪತಿ: ಹೆಸರೇನು ಗೊತ್ತಾ?


ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರಿಂದ ಯಳಂದೂರು ವಲಯದ ಸಿಬ್ಬಂದಿ ಬಂದು ಗಸ್ತು ತಿರುಗಿ ತಾಯಿ ಆನೆ ಘೀಳಿಡುತ್ತಿದ್ದನ್ನು ಗಮನಿಸಿ  ಈರಣ್ಣ ಕಟ್ಟೆ ಪೋಡಿನ ಬಳಿ ಮರಿಯಾನೆ ತಾಯಿಯನ್ನು ಸೇರುವಂತೆ ಮಾಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.