ಅಧಿಕಾರದ ದರ್ಪ ತೋರಿಸಿದ ಬಾಸ್ ಗೆ ನಡುರಸ್ತೆಯಲ್ಲೇ ‘ಅವಮಾನ’: Funny Video ನೋಡಿದ್ರೆ ನಗು ತಡೆಯೋದಿಲ್ಲ

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದ ಶೀರ್ಷಿಕೆಯಲ್ಲಿ ‘ಬಾಸ್ ತನ್ನ ಪಾದಗಳನ್ನು ಒದ್ದೆ ಮಾಡಲು ಬಯಸಲಿಲ್ಲ. ಆದ್ದರಿಂದ ಅವರು ಪ್ಯಾಲೆಟ್ ಹಾಕಲು ಉದ್ಯೋಗಿಗೆ ಆದೇಶಿಸುತ್ತಾರೆ’ ಎಂದು ಬರೆಯಲಾಗಿದೆ.

Written by - Bhavishya Shetty | Last Updated : Sep 4, 2022, 11:47 AM IST
    • ವೈರಲ್ ಆಗೋ ಕೆಲ ವಿಡಿಯೋಗಳನ್ನು ಕಂಡಾಗ ನಗು ತಡೆಯೋದಿಲ್ಲ
    • ಅಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೀಕ್ಷಣೆಗಳನ್ನು ಪಡೆಯುತ್ತಿದೆ
    • ವೀಡಿಯೋದಲ್ಲಿ ವ್ಯಕ್ತಿಯೊಬ್ಬನ ಘನಘೋರ ಅವಮಾನವನ್ನು ಕಂಡಿದ್ದಾನೆ
ಅಧಿಕಾರದ ದರ್ಪ ತೋರಿಸಿದ ಬಾಸ್ ಗೆ ನಡುರಸ್ತೆಯಲ್ಲೇ ‘ಅವಮಾನ’: Funny Video ನೋಡಿದ್ರೆ ನಗು ತಡೆಯೋದಿಲ್ಲ title=
Rich Business

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋ ಕೆಲ ವಿಡಿಯೋಗಳನ್ನು ಕಂಡಾಗ ನಗು ತಡೆಯೋದಿಲ್ಲ. ಅಂತಹ ವಿಡಿಯೋಗಳನ್ನು ಮತ್ತೆ ಮತ್ತೆ ನೋಡಬೇಕು ಎಂದನಿಸುತ್ತದೆ. ಅಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೀಕ್ಷಣೆಗಳನ್ನು ಪಡೆಯುತ್ತಿದೆ. ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬನ ಘೋರ ಅವಮಾನವನ್ನು ಕಂಡು ಜನ ಮೋಜು ಮಸ್ತಿ ಮಾಡುತ್ತಿದ್ದಾರೆ.

ಇದನ್ನೂ ಓದಿ: Trending: ತಂದೆಯ ಐದನೇ ಮದುವೆ ನಿಲ್ಲಿಸಲು ಮದುವೆ ಮಂಟಪಕ್ಕೆ ನುಗ್ಗಿದ ಏಳು ಮಕ್ಕಳು: ಮುಂದೇನಾಯ್ತು…

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದ ಶೀರ್ಷಿಕೆಯಲ್ಲಿ ‘ಬಾಸ್ ತನ್ನ ಪಾದಗಳನ್ನು ಒದ್ದೆ ಮಾಡಲು ಬಯಸಲಿಲ್ಲ. ಆದ್ದರಿಂದ ಅವರು ಪ್ಯಾಲೆಟ್ ಹಾಕಲು ಉದ್ಯೋಗಿಗೆ ಆದೇಶಿಸುತ್ತಾರೆ’ ಎಂದು ಬರೆಯಲಾಗಿದೆ. ಮೊದಲನೆಯದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ನೋಡಲೇಬೇಕು.

 

 

ರಸ್ತೆ ಮಧ್ಯದಲ್ಲಿ ಅವಮಾನ

ಬಾಸ್ ಈ ಪ್ಯಾಲೆಟ್ ಮೇಲೆ ಹೆಜ್ಜೆ ಹಾಕಿದ ತಕ್ಷಣ ಜಾರಿ ಕೆಳಗೆ ಬೀಳುತ್ತಾನೆ. ಈ ವೀಡಿಯೋ ನೋಡಿದ ತುಂಬಾ ಜನ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ನಡುರಸ್ತೆಯಲ್ಲಿ ಆದ ಈ ದೊಡ್ಡ ಅವಮಾನವನ್ನು ಈ ವ್ಯಕ್ತಿ ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ. ಬಲವಂತದ ಆದೇಶದಿಂದ ವ್ಯಕ್ತಿಯು ಸಣ್ಣಪುಟ್ಟ ಗಾಯಗಳು ಜೊತೆಗೆ ಭಾರೀ ಅವಮಾನವನ್ನು ಎದುರಿಸಬೇಕಾಯಿತು.

ಇದನ್ನೂ ಓದಿ: Viral Video: IAS ಅಧಿಕಾರಿಯಾದ ಗೆಳತಿ, 5 ಬಾರಿ ಫೇಲ್ ಆದ UPSC ಆಕಾಂಕ್ಷಿ..!

ಈ ವೀಡಿಯೋ ನೋಡಿ ಹಲವಾರು ಸೋಶಿಯಲ್ ಮೀಡಿಯಾ ಬಳಕೆದಾರರು ನಗೆಗಡಲಲ್ಲಿ ತೇಲಿದ್ದಾರೆ. ಕೇವಲ 15 ಸೆಕೆಂಡುಗಳ ಈ ವೀಡಿಯೊವನ್ನು ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಅಷ್ಟೇ ಅಲ್ಲ ಸಾವಿರಾರು ಮಂದಿ ಈ ವಿಡಿಯೋವನ್ನು ಲೈಕ್ ಮಾಡಿ ರೀಟ್ವೀಟ್ ಮಾಡಿದ್ದಾರೆ. ಕಾಮೆಂಟ್ ಸೆಕ್ಷನ್‌ನಲ್ಲಿಯೂ ಹಲವರು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿರುವುದು ಕಂಡುಬಂದಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News