Funny Video Today : ಕೆಲವರು ಬಹಳ ಇಷ್ಟ ಪಟ್ಟು ಅಡುಗೆ ಮಾಡುತ್ತಾರೆ. ಇನ್ನು ಕೆಲವರು ಬೇರೆಯವರು ಮಾಡಿದ ಅಡುಗೆಯ ರುಚಿ ಸವಿದು  ಅಲ್ಲೊಂದಿಷ್ಟು ಬಿಟ್ಟಿ ಸಲಹೆ ಕೊಡುತ್ತಾರೆ. ಇತ್ತೀಚಿನ ದಿನಗಳಲ್ಲಿ ವಿದ್ಯಾಭ್ಯಾಸಕ್ಕೆಂದು ಅಥವಾ, ಉದ್ಯೋಗಕ್ಕಾಗಿ ಯುವಕ ಯುವತಿಯರು ಮನೆ ಬಿಟ್ಟು, ಊರು  ಬಿಟ್ಟು ಇರಬೇಕಾಗುತ್ತದೆ. ಹೀಗಾದಾಗ, ಎಷ್ಟು ದಿನ ಹೊರಗಿನ ಅಡುಗೆ ತಿನ್ನಬಹುದು. ಹೊಟೇಲ್ ಅಡುಗೆ ನಿತ್ಯ ತಿನ್ನುವುದು ಆರೋಗ್ಯ, ಜೇಬು ಎರಡಕ್ಕೂ ಹಿತವಲ್ಲ. ಈ ಕಾರಣದಿಂದಾಗಿ ಒಂದು ಹಂತದಲ್ಲಿ ಯುವಕರು ಅಡುಗೆ ಕಲಿಯಲು ಆರಂಭಿಸುತ್ತಾರೆ. ಅಡುಗೆ ಕಲಿಯುವುದು ಸರಿ, ಆದರೆ ಕಲಿಯುವ ಹಂತದಲ್ಲಿಯೇ ಸ್ಟಂಟ್ ಮಾಡಲು ಹೊರಟರೆ ಹೇಗೆ ? 


COMMERCIAL BREAK
SCROLL TO CONTINUE READING

ಚಪಾತಿ ಮಾಡುವ ವೇಳೆ ಎಡವಟ್ಟು : 
ವಿಡಿಯೋದಲ್ಲಿ ಕಾಣಿಸುವ ವ್ಯಕ್ತಿಯೇನು ಅಡುಗೆ ಮಾಡುವುದರಲ್ಲಿ ನಿಸ್ಸೀಮನಂತೆ ಕಾಣುವುದಿಲ್ಲ. ಆದರೂ ಚಪಾತಿ ಕಾಯಿಸುವ ವೇಳೆ ತವಾ ಹಿಡಿದು ಸ್ಟಂಟ್ ಮಾಡಲು ಹೊರಟಿದ್ದಾನೆ. ತವಾದ ಮೇಲೆ ಚಪಾತಿ ಹಾಕಿದ ಯುವಕ ಅದೇನೋ ದೊಡ್ಡ ಬಾಣಸಿಗನಂತೆ ತವಾದ ಮೇಲಿಂದಲೇ ಚಪಾತಿಯನ್ನು ಫ್ಲಿಪ್ ಮಾಡಲು ಹೋಗುತ್ತಾನೆ. ಆದರೆ ಯುವಕ ಅಂದುಕೊಂಡಿದ್ದೇ ಒಂದು ಅಲ್ಲಿ ಆಗಿದ್ದೇ ಇನ್ನೊಂದು. 


ಇದನ್ನೂ ಓದಿ : ಶಾಲೆಯಲ್ಲಿ ಈ ರೀತಿಯ ವರ್ತನೆ ಎಷ್ಟು ಸರಿ ? ವೈರಲ್ ಆಯಿತು ವಿದ್ಯಾರ್ಥಿಗಳ ಲವ್ವಿ ಡವ್ವಿ ವೀಡಿಯೊ


ಅಡುಗೆ ಮಾಡುವಾಗ ಬೆಂಕಿ ಬಿಸಿ ಜೊತೆ ಯಾವತ್ತೂ ಆಟವಾಡಲು ಹೋಗಬಾರದು. ಆದರೂ ಈ ಯುವಕ ತಾನು ಮಾಡಿದ ಎಡವತಟ್ಟಿನಿಂದ ತಾನೇ ನೋವು ಅನುಭವಿಸುವಂತಾಗಿದೆ. 



 


ಇದನ್ನೂ ಓದಿ : ಮೊಟ್ಟೆಗಳಿಗಾಗಿ ಎರಡು ನಾಗರ ಹಾವುಗಳೊಂದಿಗೆ ಕೋಳಿ ಸೆಣೆಸಾಟ, ಮುಂದೇನಾಯ್ತು ನೀವೇ ನೋಡಿ


ಈ ವೀಡಿಯೋದಲ್ಲಿ ಯುವಕ ಚಪಾತಿ ಮಾಡುವಂತೆ ಯಾರೂ ಮಾಡಿರಲಿಕ್ಕಿಲ್ಲ. ಈ ವಿಡಿಯೋ ನೋಡಿದರೆ ನಗು ಬರುತ್ತದೆ. ಆದರೆ ಪಾಪ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎನ್ನುವಂತೆ ವಿಡಿಯೋ ನೋಡಿದವರಿಗೆನೋ ನಗು ಬರುತ್ತದೆ. ಆ ಯುವಕನ ಸ್ಥಿತಿ ಆತನಿಗೇ ಪ್ರೀತಿ.  ಈ ವೀಡಿಯೊವನ್ನು videonation.teb ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ