ಶಾಲೆಯಲ್ಲಿ ಈ ರೀತಿಯ ವರ್ತನೆ ಎಷ್ಟು ಸರಿ ? ವೈರಲ್ ಆಯಿತು ವಿದ್ಯಾರ್ಥಿಗಳ ಲವ್ವಿ ಡವ್ವಿ ವೀಡಿಯೊ

 Viral Video : ವಿದ್ಯಾ ಮಂದಿರದಲ್ಲಿ ವಿದ್ಯಾರ್ಥಿಗಳ ಅಸಭ್ಯ ವರ್ತನೆ.. ಓದಬೇಕಾದ ಕಾಲದಲ್ಲಿ ಇದರ ಅವಶ್ಯಕತೆ ಇದೆಯಾ? ವೈರಲ್ ಆಯಿತು ಈ ವಿದ್ಯಾರ್ಥಿಗಳ ವಿಡಿಯೋ ..

Written by - Ranjitha R K | Last Updated : Sep 22, 2022, 03:27 PM IST
  • ವಿದ್ಯಾಮಂದಿರದಲ್ಲಿ ವಿದ್ಯಾರ್ಥಿಗಳ ಪ್ರೇಮ ಪುರಾಣ
  • ಶಾಲೆಯಲ್ಲಿ ಇಂಥ ವರ್ತನೆ ಎಷ್ಟು ಸರಿ ?
  • ವೈರಲ್ ಆಯಿತು ಈ ವಿಡಿಯೋ
ಶಾಲೆಯಲ್ಲಿ  ಈ ರೀತಿಯ ವರ್ತನೆ ಎಷ್ಟು ಸರಿ ? ವೈರಲ್ ಆಯಿತು ವಿದ್ಯಾರ್ಥಿಗಳ ಲವ್ವಿ ಡವ್ವಿ  ವೀಡಿಯೊ  title=
Students viral video (photo instagram)

Viral Video : ಶಾಲೆಯನ್ನು ವಿದ್ಯಾಮಂದಿರ, ವಿದ್ಯಾ ದೇಗುಲ ಎಂದೆಲ್ಲಾ ಕರೆಯುತ್ತೇವೆ. ಶಾಲೆ ಎಂದರೆ ಅಲ್ಲಿ ಸಾಕ್ಷಾತೆ ವಿದ್ಯೆಯ ಅಧಿದೇವತೆ ಸರಸ್ವತಿ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ. ಅದೇ ಕಾರಣಕ್ಕೆ ಮಕ್ಕಳಿಗೆ ಶಾಲೆ ಒಳಗೆ ಹೋಗಬೇಕಾದರೆ ಕೈ ಮುಗಿದು ತಲೆ ಬಾಗಿ ಹೋಗಬೇಕು ಎಂದು ಹೇಳಿಕೊಡಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ, ತರಗತಿಗಳಲ್ಲಿ ಮಕ್ಕಳು ತಮ್ಮ ದುರ್ವರ್ತನೆ ಆರಂಭಿಸಿ ಬಿಡುತ್ತಾರೆ. ಪ್ರೀತಿ ಪ್ರೇಮ ಡ ಹೆಸರಿನಲ್ಲಿ ಅಸಭ್ಯವಾಗಿ  ವರ್ತಿಸುವಾಗ ತಾವು ಯಾವ ಸ್ಥಳದಲ್ಲಿ ನಿಂತಿದ್ದೇವೆ ಎನ್ನುವುದನ್ನು ಕೂಡಾ ಮರೆತು ಬಿಡುತ್ತಾರೆ.  

ಚೆನ್ನಾಗಿ ಓದಿ, ಕಲಿತು ವಿದ್ಯಾವಂತರಾಗಿ ಉತ್ತಮ ಭವಿಷ್ಯ ರೂಪಿಸಬೇಕಾಗಿರುವ ಈ ಮಕ್ಕಳು, ಶಾಲೆಯಲ್ಲಿ ಮಾಡುತ್ತಿರುವ ಕೆಲಸ ನಿಜಕ್ಕೂ ಅಸಹ್ಯಕರ.  ಹದಿ ಹರೆಯದ ವಯಸ್ಸಿನಲ್ಲಿ ಪ್ರೀತಿ, ಪ್ರೇಮ, ಆಕರ್ಷಣೆ  ಎಲ್ಲವೂ ಸಹಜ. ಅದು ಇತಿ ಮಿತಿಯಲ್ಲಿದ್ದರೆ ಚೆಂದ.  ಆದರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋ ಮಾತ್ರ  ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ.  

ಇದನ್ನೂ ಓದಿ : ಮೊಟ್ಟೆಗಳಿಗಾಗಿ ಎರಡು ನಾಗರ ಹಾವುಗಳೊಂದಿಗೆ ಜೊತೆ ಕೋಳಿ ಸೆಣೆಸಾಟ, ಮುಂದೇನಾಯ್ತು ನೀವೇ ನೋಡಿ

 ಶಿಕ್ಷಕರು ಬಾರದೆ ಹೋದಾಗ, ಅಥವಾ ಬೇರೆ ಬೇರೆ ಕಾರಣಗಳಿಗೆ ವಿದ್ಯಾ ರ್ಥಿಗಳಿಗೆ ಫ್ರೀ ಪೀರಿಯೇಡ್ ಸಿಗುತ್ತದೆ. ಆದರೆ ಈ ಅವಧಿಯಲ್ಲಿಯೂ ವಿದ್ಯಾರ್ಥಿಗಳು ಏನು ಮಾಡುತ್ತಿರುತ್ತಾರೆ ಎನ್ನುವುದರ ಬಗ್ಗೆ ಶಾಲಾ ಸಿಬ್ಬಂದಿ ಗಮನ ಹರಿಸುವ ಅಗತ್ಯವಿದೆ. ವಿದ್ಯಾರ್ಥಿಗಳ ಇಂಥಹ ವರ್ತನೆಗೆ ಅವರೆಷ್ಟು ಜವಾಬ್ದಾರರೋ, ಅವರ ನಡವಳಿಕೆಯನ್ನು ಗಮನಿಸದೆ ಇರುವ ಶಾಲಾ  ಶಿಕ್ಷಕರು, ಶಾಲಾ ಸಿಬ್ಬಂದಿ ಕೂಡಾ ಅಷ್ಟೇ ಜವಾಬ್ದಾರರು. 

 

ಅಂದ ಹಾಗೆ ಈ ವೀಡಿಯೊವನ್ನು bachelorkisocietyandmemes.bks ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋ ಯಾವುದೋ ಒಂದು ಶಾಲಾ ತರಗತಿಯದ್ದೇ ಎನ್ನುವುದು ಮೇಲ್ನೋಟದಲ್ಲಿ ಕಾಣುತ್ತದೆ. ಆದರೆ ನಿಜಕ್ಕೂ ಎಲ್ಲಿಯ ದೃಶ್ಯ ಎನ್ನುವುದು ತಿಳಿದು ಬಂದಿಲ್ಲ. 

ಇದನ್ನೂ ಓದಿ : Viral Video: ಈ ಆಂಟಿ ಬಲು ತುಂಟಿ! ಪಾರ್ಕ್‌ಗೆ ಬಂದು ಮಾಡಿರೋದೇನು ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News