ಮೊಟ್ಟೆಗಳಿಗಾಗಿ ಎರಡು ನಾಗರ ಹಾವುಗಳೊಂದಿಗೆ ಕೋಳಿ ಸೆಣೆಸಾಟ, ಮುಂದೇನಾಯ್ತು ನೀವೇ ನೋಡಿ

ಇಲ್ಲಿ ಒಂದು ಕೋಳಿ ನಾಗರಹಾವಿನ ಕಾಟಕ್ಕೆ ಹೆದರಿ ಕಾಲ್ಕಿತ್ತಿತ್ತು. ಕೋಳಿ ಇಟ್ಟಿರೊ ಹತ್ತಾರು ಮೊಟ್ಟೆಗಳ ಮೇಲೆ ಕುಳಿತ ನಾಗರಹಾವು ಎದುರಿಗಿದ್ದ ಬುಟ್ಟಿಯಲ್ಲಿ ಮೊಟ್ಟೆಗಳ ರಕ್ಷಣೆಗಾಗಿ ಕುಳಿತದ್ದ ಕೋಳಿಯ ಮೇಲೆ ದಾಳಿ ನಡೆಸಿದೆ.

Written by - Yashaswini V | Last Updated : Sep 23, 2022, 08:07 AM IST
  • ಹಾವು ಮುಂಗೂಸಿ ಜಗಳವಾಡೋದನ್ನ ನೋಡಿದ್ದೀವಿ ಕೇಳಿದ್ದೀವಿ.
  • ಇದು ಮೊಟ್ಟೆಗಾಗಿ ನಡೆದ ಹಾವು-ಕೋಳಿ ಕದನ.
  • ನಾಗರ ಹಾವಿನೊಂದಿಗೆ ಕೋಳಿ ಕದನ ಹೇಗಿದೆ, ನೋಡಿ...
ಮೊಟ್ಟೆಗಳಿಗಾಗಿ ಎರಡು ನಾಗರ ಹಾವುಗಳೊಂದಿಗೆ ಕೋಳಿ ಸೆಣೆಸಾಟ,  ಮುಂದೇನಾಯ್ತು ನೀವೇ ನೋಡಿ  title=
Snake-Chicken Viral Video

ಮಂಡ್ಯ:  ಲೋಕಾರೂಢಿಯಾಗಿ ಹಾವು-ಮುಂಗೂಸಿ ಜಗಳವನ್ನು ನೀವು ನೋಡಿರಬಹುದು. ಆದರೆ, ಹಾವು-ಕೋಳಿ ಜಗಳ ಎಂದಾದರೂ ನೋಡಿದ್ದೀರಾ? ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣ ಇಂತಹ ಒಂದು ವಿರೋಚಿತ ಘಟನೆಗೆ ಸಾಕ್ಷಿಯಾಗಿದ್ದು ಇದೀಗ ಹಾವು-ಕೋಳಿ ಫೈಟ್ ವಿಡಿಯೋ ಸಖತ್ ಸದ್ದು ಮಾಡುತ್ತಿದೆ. 

ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ರವಿ ಎಂಬುವವರು ಕೋಳಿ ಸಾಕಾಣೆ ಮಾಡುತ್ತಿದ್ದಾರೆ. ಈ ಅಪರೂಪದ ಹಾವು-ಕೋಳಿ ಕದನಕ್ಕೆ ವೇದಿಕೆ ಆಗಿದ್ದು ಇದೇ ಕೋಳಿ ಫಾರ್ಮ್. ರವಿ ಕಳೆದ ಹಲವು ವರ್ಷಗಳಿಂದ ಇಲ್ಲಿ ಕೋಳಿ ಫಾರ್ಮ್ ನಡೆಸುತ್ತಿದ್ದಾರೆ. ಇತ್ತೀಚಿಗೆ ಭಾರೀ ಗಾತ್ರದ ನಾಗರಹಾವೊಂದು ಕೋಳಿ ಇಟ್ಟಿರುವ ಮೊಟ್ಟೆ ತಿನ್ನಲು ಈ ಫಾರ್ಮ್ ಪ್ರವೇಶಿಸಿತ್ತು. 

ಇದನ್ನೂ ಓದಿ- ಮದ್ಯದ ಅಮಲಿನಲ್ಲಿ ಹಾವು ಹಿಡಿದ ಭೂಪ; ನಾಲ್ಕು ಬಾರಿ ಕಚ್ಚಿದ ಹಾವು

ವಾಸ್ತವವಾಗಿ, ಇಲ್ಲಿ ಒಂದು ಕೋಳಿ ನಾಗರಹಾವಿನ ಕಾಟಕ್ಕೆ ಹೆದರಿ ಕಾಲ್ಕಿತ್ತಿತ್ತು. ಕೋಳಿ ಇಟ್ಟಿರೊ ಹತ್ತಾರು ಮೊಟ್ಟೆಗಳ ಮೇಲೆ ಕುಳಿತ ನಾಗರಹಾವು ಎದುರಿಗಿದ್ದ ಬುಟ್ಟಿಯಲ್ಲಿ ಮೊಟ್ಟೆಗಳ ರಕ್ಷಣೆಗಾಗಿ ಕುಳಿತದ್ದ ಕೋಳಿಯ ಮೇಲೆ ದಾಳಿ ನಡೆಸಿದೆ.  ಧೈರ್ಯವಾಗಿ ನಾಗರಹಾವಿನೊಂದಿಗೆ ಸೆಣಸಾಟಕ್ಕೆ ಇಳಿದ ಕೋಳಿ ಸುಮಾರು ನಾಲ್ಕೈದು ನಿಮಿಷಗಳ ಕಾಲ ನಾಗರ ಹಾವಿನ ದಾಳಿಯನ್ನು ಎದರಿಸಿತು. ಕೊನೆಯ ಕೋಳಿಯ ಕಡಿತಕ್ಕೆ ಸೋತು ಸುಣ್ಣವಾದ ನಾಗರ ಸುಮ್ಮನಾಯಿತು. ನಾಗರಹಾವಿನ ಜೊತೆ ಸೆಣೆಸಾಡಿದ ಕೋಳಿ ಕೊನೆಗೂ ತನ್ನ  ಮೊಟ್ಟೆಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಆದರೆ... ಈ ಮಧ್ಯೆಯೇ, ಇನ್ನೊಂದು ಬದಿಯಿಂದ ಮತ್ತೊಂದು ನಾಗರಹಾವು ಕೋಳಿಯ ಬಳಿ ಬಂದಿದೆ. ಇದರಿಂದ ಎಚ್ಚೆತ್ತ ರವಿ ಕೋಳಿಯನ್ನ ಬೇರೆಡೆಗೆ ಸ್ಥಳಾಂತರಿಸಿದ್ದಾರೆ.

ನಾಗರಹಾವಿನೊಂದಿಗೆ ಕೋಳಿ ಕದನ ಹೇಗಿದೆ ಎಂಬ ರೋಚಕ ವಿಡಿಯೋವನ್ನು ಇಲ್ಲಿ ವೀಕ್ಷಿಸಿ...

ಇದನ್ನೂ ಓದಿ- Snake Viral Video: ನಿಮ್ಮ ಮನೆಯಲ್ಲಿಯೂ ಇಂತಹ ಕುರ್ಚಿ ಇದ್ದರೆ ಹುಷಾರ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News