viral video : ಎಲ್ಲಾ ಕಡೆ ಸಂಭ್ರಮ ಆವರಿಸಿದ್ದಾಗ ಧುತ್ತೆಂದು ಸೂತಕ ಆವರಿಸಿಬಿಡುವ  ಘಟನೆ ಒಮ್ಮೊಮ್ಮೆ ನಡೆದು ಹೋಗುತ್ತದೆ. ಹೀಗೆ ಆಗಬಹುದು ಎಂಬ ಊಹೆಯನ್ನು ಕೂಡಾ ಯಾರೂ ಮಾಡಿರುವುದಿಲ್ಲ. ಅಚಾನಕ್ಕಾಗಿ ಘಟನೆ ಘಟಿಸಿ ಬಿಡುತ್ತದೆ. ನಗು ಕೇಕೆಯಿಂದ ತುಂಬಿದ್ದ ಜಾಗದಲ್ಲಿ ಮೌನ ಆವರಿಸಿಬಿಡುತ್ತದೆ. ಎಲ್ಲಿ ಏನು ಹೇಗೆ ಎನ್ನುವ ಪ್ರಶ್ನೆ ಏಳುವಷ್ಟರಲ್ಲಿ ಎಲ್ಲವೂ ಮುಗಿದು ಹೋಗಿರುತ್ತದೆ. ಅದಕ್ಕೆ ಅಲ್ಲವೇ ಹೇಳುವುದು ಮನುಷ್ಯನಿಗಿಂತ ಮಿಗಿಲಾದವನೊಬ್ಬ ಮೇಲಿದ್ದಾನೆ ಎಂದು..


COMMERCIAL BREAK
SCROLL TO CONTINUE READING

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ಸಾಮಾನ್ಯವಾಗಿ ಇರುವಂತೆಯೇ ಈ ಮದುವೆ ಮನೆಯಲ್ಲಿಯೂ ಸಂಭ್ರಮ ಸಡಗರ ಮನೆ ಮಾಡಿತ್ತು. ಮದುವೆ ಶಾಸ್ತ್ರಗಳೆಲ್ಲವೂ ಇಲ್ಲಿ ನಡೆಯುತ್ತಿರುತ್ತದೆ. ಇನ್ನೇನು ಹಾರ ಬದಲಾಯಿಸಲು ವಧು ಮತ್ತು ವರ ಎದ್ದು ನಿಂತಿದ್ದಾರೆ. ಅಷ್ಟರಲ್ಲಿ ಒಬ್ಬ ವ್ಯಕ್ತಿ ಬಂದು ವರನ ಕಿವಿಯಲ್ಲಿ ಅದೇನು ಹೇಳುತ್ತಾನೋ ? ಕೆಲವೇ ಸೆಕೆಂಡುಗಳಲ್ಲಿ ವರ ಕುಸಿದು ಬೀಳುತ್ತಾನೆ. 


ಇದನ್ನೂ ಓದಿ : Viral Video: ಮಾವುತನ ಹೊತ್ತು 3 ಕಿಲೋ ಮೀಟರ್‌ ಈಜಿ ಗಂಗಾ ನದಿ ದಾಟಿದ ಆನೆ


ವರ ಕುಸಿದು ಬೀಳುತ್ತಿದ್ದಂತೆಯೇ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ ಬಿಡುತ್ತದೆ. ಫೋಟೋಗ್ರಾಫರ್ ನಿಂದ ಹಿಡಿದು ಎಲ್ಲರೂ ವರನತ್ತ ಓಡೋಡಿ ಬರುತ್ತಾರೆ. ವಧುವಿಗೂ ಏನಾಗುತ್ತಿದೆ ಎಂದೇ ತಿಳಿಯುವುದಿಲ್ಲ. ಆದರೆ ಗಾಬರಿ ಮಾತ್ರ ವಧುವಿನ ಮುಖದಲ್ಲಿ ಎದ್ದು ಕಾಣಿಸುತ್ತದೆ. ಇನ್ನೇನು ತನ್ನನ್ನು ವರಿಸಬೇಕಾಗಿದ್ದ ವ್ಯಕ್ತಿ ಹೀಗೆ ಕುಸಿದು ಬಿದ್ದಾಗ ಎಂಥವರ ಮನಸ್ಸು ಕೂಡಾ ಕುಸಿಯುತ್ತದೆ. 


 



ಈ ವರನಿಗೆ ಏನಾಯಿತು? ಹೀಗಾಗಲು ಕಾರಣ ಏನು ಎನ್ನುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲ. ಅಲ್ಲದೆ ಈ ವೀಡಿಯೊ ಯಾವಾಗ ತೆಗೆಯಲಾಗಿದೆ ಎಲ್ಲಿಯದ್ದು ಎನ್ನುವುದರ ಮಾಹಿತಿ ಕೂಡಾ ಇಲ್ಲ. ಈ ವಿಡಿಯೋವನ್ನು Instagram ನಲ್ಲಿ videolucu.funny ಹೆಸರಿನ ಪುಟದಲ್ಲಿ ಅಪ್ಲೋಡ್ ಮಾಡಲಾಗಿದೆ. ವಿಡಿಯೋ ನೋಡಿದವರು ಕೂಡಾ ಒಂದು ಕ್ಷಣಕ್ಕೆ ಛೆ ಅಂದು ಕೊಳ್ಳದೆ ಇರರು. 


ಇದನ್ನೂ ಓದಿ : Viral Video:ಕಣ್ಣಿಗೆ ಬಟ್ಟೆ ಕಟ್ಟಿ ವಧುವನ್ನು ಹುಡುಕಲು ವರನನ್ನು ಬಿಟ್ಟಾಗ ಆಗಿದ್ದೇನು ?


Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...