Viral Video:ಕಣ್ಣಿಗೆ ಬಟ್ಟೆ ಕಟ್ಟಿ ವಧುವನ್ನು ಹುಡುಕಲು ವರನನ್ನು ಬಿಟ್ಟಾಗ ಆಗಿದ್ದೇನು ?

Bride Groom Video: ಇದೀಗ ಎಲ್ಲೆಡೆ ಹರಿದಾಡುತ್ತಿರುವ ವಿಡಿಯೋದಲ್ಲಿ ವರನ ದಿಬ್ಬಣ ವಧುವಿನ ಮನೆ ಬಾಗಿಲಿಗೆ ಬಂದಿರುವುದನ್ನು ಕಾಣಬಹುದು.  ಹೀಗೆ ವಧುವಿನ ಮನೆಯನ್ನು ವರ ತಲುಪುತ್ತಿದ್ದಂತೆಯೇ ಆತನ ಕಣ್ಣಿಗೆ ಬಟ್ಟೆ ಕಟ್ಟಲಾಗಿದೆ. 

Written by - Ranjitha R K | Last Updated : Jul 13, 2022, 03:49 PM IST
  • ಮದುವೆ ಎಂದರೆ ಅಲ್ಲಿ ಮೋಜು ಮಸ್ತಿ ಇದ್ದೇ ಇರುತ್ತದೆ.
  • ಮದುವೆ ದಿನ ವಧು ವರರ ಕಾಲೆಳೆಯುವ ಅನೇಕ ಆಟಗಳನ್ನು ಹಮ್ಮಿಕೊಳ್ಳಲಾಗುತ್ತದೆ.
  • ಕಣ್ಣಿಗೆ ಬಟ್ಟೆ ಕಟ್ಟಿ ವಧುವನ್ನು ಹುಡುಕಿದ ವರ
Viral Video:ಕಣ್ಣಿಗೆ ಬಟ್ಟೆ ಕಟ್ಟಿ ವಧುವನ್ನು ಹುಡುಕಲು ವರನನ್ನು ಬಿಟ್ಟಾಗ ಆಗಿದ್ದೇನು ? title=
Viral wedding video ( photo instagram)

 Bride Groom Video : ಮದುವೆ ಎಂದರೆ ಅಲ್ಲಿ ಮೋಜು ಮಸ್ತಿ ಇದ್ದೇ ಇರುತ್ತದೆ. ಮದುವೆ ದಿನ ವಧು ವರರ ಕಾಲೆಳೆಯುವ ಅನೇಕ ಆಟಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಮದುವೆ ಶಾಸ್ತ್ರದ ಜೊತೆಗೆ ಅನೇಕ ಆಟಗಳನ್ನು ಕೂಡಾ ಆಯೋಜಿಸಲಾಗುತ್ತದೆ. ಈ ಪೈಕಿ ಕೆಲವು ಹಿಂದಿನಿಂದಲೂ ಮದುವೆಯ ಶಾಸ್ತ್ರದ ಭಾಗವಾಗಿ ನಡೆದುಕೊಂಡು ಬಂದಿದ್ದರೆ, ಇನ್ನು ಕೆಲವು ಹೊಸ ಹೊಸ ಆಟಗಳನ್ನು ಇತ್ತೀಚೆಗೆ  ವಧು ವರರಿಗೆ ಆಡಿಸಲಾಗುತ್ತದೆ. ಇವುಗಳಲ್ಲಿ ಕೆಲವು ಆಟಗಳು ಬಹಳ ತಮಾಷೆಯದ್ದಾಗಿರುತ್ತವೆ.   

ವರನ ಕಣ್ಣಿಗೆ  ಬಟ್ಟೆ : 
ಇದೀಗ ಎಲ್ಲೆಡೆ ಹರಿದಾಡುತ್ತಿರುವ ವಿಡಿಯೋದಲ್ಲಿ ವರನ ದಿಬ್ಬಣ ವಧುವಿನ ಮನೆ ಬಾಗಿಲಿಗೆ ಬಂದಿರುವುದನ್ನು ಕಾಣಬಹುದು.  ಹೀಗೆ ವಧುವಿನ ಮನೆಯನ್ನು ವರ ತಲುಪುತ್ತಿದ್ದಂತೆಯೇ ಆತನ ಕಣ್ಣಿಗೆ ಬಟ್ಟೆ ಕಟ್ಟಲಾಗಿದೆ. ಮಾತ್ರವಲ್ಲ ಕಣ್ಣಿಗೆ  ಬಟ್ಟೆ ಕಟ್ಟಿದ ನಂತರ ಸ್ಪರ್ಶದ ಮೂಲಕ ವಧುವನ್ನು ಗುರುತಿಸುವಂತೆ ಹೇಳಲಾಗಿದೆ. ಈ ಸಂದರ್ಭದಲ್ಲಿ ವರನನ್ನು ಅಲ್ಲಿ ನೆರೆದಿದ್ದವರು ಚುಡಾಯಿಸುತ್ತಿರುವುದನ್ನು ಕೂಡಾ ವಿಡಿಯೋದಲ್ಲಿ ಕಾಣಬಹುದು. 

ಇದನ್ನೂ ಓದಿ : Viral Video : ಗೆಳೆಯರ ಈ ಕೆಲಸದಿಂದ ನೆತ್ತಿಗೇರಿತು ವರನ ಕೋಪ .! ಮುಂದೆ ..?

ಅಲ್ಲಿದ್ದ ಎಲ್ಲಾ ಹುಡುಗಿಯರು ತಮ್ಮ ಕೈಗಳನ್ನು ಮುಂದೆ ಚಾಚುತ್ತಾರೆ. ಅಲ್ಲಿದ್ದ ಹೆಣ್ಣು ಮಕ್ಕಳು ಮಾತ್ರವಲ್ಲ ವ್ಯಕ್ತಿಯೊಬ್ಬರು ಬಂದು ತಮ್ಮ ಕೈಯನ್ನು ಮುಂದೆ ಚಾಚುತ್ತಾರೆ. ಆದರೆ ಅಷ್ಟೂ ಜನ ಸೇರಿ ವರನ ದಾರಿ ತಪ್ಪಿಸಲು ಯತ್ನಿಸಿದರು ಕೂಡಾ ವರ ಮಾತ್ರ ತನ್ನ ಮನದನ್ನೆಯನ್ನು ಗುರುತಿಸಿ ಬಿಡುತ್ತಾನೆ.  

 

 
 
 
 
 

  ಇದನ್ನೂ ಓದಿ : ಜನರೇಟರ್ ಬಂದ್ ಆಗಿದ್ದೇ ಕಾರಣವಾಯಿತು ವಧು ವರನ ಕಡೆಯವರು ಹೊಡೆದಾಡಿ ಕೊಳ್ಳಲು..!

ವಧು ಮತ್ತು ವರನ ಈ ವೀಡಿಯೊವನ್ನು Instagram ನಲ್ಲಿ weddingbazaarofficial ಹೆಸರಿನ ಪುಟದಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋ  ಜನರಿಗೂ ಇಷ್ಟವಾಗುತ್ತಿದೆ. 

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

  

Trending News