Viral Video Today: ಭಾರತದಾದ್ಯಂತ ಅನೇಕ ರಾಜ್ಯಗಳಲ್ಲಿ ವರುಣಾರ್ಭಟ ಜೋರಾಗಿದೆ. ಬಿಹಾರದ ಹಲವಾರು ಭಾಗಗಳು ಕೆಲವು ದಿನಗಳ ಹಿಂದೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿಗೆ ಸಿಲುಕಿದ್ದವು. ಗಂಗಾ ಸೇರಿದಂತೆ ಬಿಹಾರದ ನದಿಗಳಲ್ಲಿ ನೀರಿನ ಮಟ್ಟವು ಗಣನೀಯವಾಗಿ ಏರಿಕೆಯಾಗಿದೆ. ಅನೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದು ನದಿಯ ಸುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಭೀತಿ ತಂದೊಡ್ಡಿವೆ.
ಇದನ್ನೂ ಓದಿ: Rhea Chakraborty : ಸುಶಾಂತ್‌ಗೆ ಡ್ರಗ್ಸ್ ಪೂರೈಸುತ್ತಿದ್ದದ್ದೇ ನಟಿ ರಿಯಾ ಚಕ್ರವರ್ತಿ!
ಇತ್ತೀಚೆಗೆ, ಬಿಹಾರದ ವೈಶಾಲಿ ಜಿಲ್ಲೆಯ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಕ್ಷೇತ್ರ ರಘೋಪುರದಲ್ಲೂ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಈ ವೇಳೆ ಗಂಗಾ ನದಿಯಲ್ಲಿ ಆನೆಯೊಂದು ತನ್ನ ಮೇಲೆ ಮಾವುತನನ್ನು ಹೊತ್ತು ದಾಟಲು ಪ್ರಯತ್ನಿಸುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
An Elephant and Mahaut braved the swollen river Ganga for 3 kilometers to save their lives in Raghopur of Vaishali district.
उफनते पानी से हाथी और महावत की जंग, तस्वीरें बिहार के राघोपुर की हैं. #Bihar #flood #vaishali #elephant #ganga #Rescue pic.twitter.com/dLsIuipcOz
— The Tall Indian (@BihariBaba1008) July 13, 2022
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದವರೆಲ್ಲರೂ ಅರೆಕ್ಷಣ ದಂಗಾಗಿದ್ದಾರೆ. ಆನೆ ಮತ್ತು ಮಾವುತ ಮೂರು ಕಿಲೋಮೀಟರ್‌ಗಳವರೆಗೆ ಈಜುವ ಮೂಲಕ ಹರಿಯುವ ನದಿಯನ್ನು ಧೈರ್ಯದಿಂದ ಸುರಕ್ಷಿತವಾಗಿ ದಾಡಿದ್ದಾರೆ. ಕೊನೆಯಲ್ಲಿ, ಇಬ್ಬರು ಜನರು ನಿಂತಿದ್ದ ನದಿಯ ಒಂದು ಮೂಲೆಯನ್ನು ತಲುಪುವುದನ್ನು ನೋಡಬಹುದು. ಬಳಿಕ ಆನೆ ಹಾಗೂ ಮಾವುತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
ಇದನ್ನೂ ಓದಿ: ಕೆಎಲ್ ರಾಹುಲ್ ಜೊತೆಗಿನ ಮದುವೆ ಬಗ್ಗೆ ಮೌನ ಮುರಿದ ಅಥಿಯಾ ಶೆಟ್ಟಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.