Viral Video : ಇಂಟರ್ನೆಟ್ ಪ್ರಪಂಚವೇ ಹಾಗೆ. ಇಲ್ಲಿ ಹಲವಾರು ಅದ್ಭುತಗಳನ್ನು ಕಾಣಬಹುದು. ಇಲ್ಲಿ ಹಂಚಿಕೊಳ್ಳಲಾದ ಮೆಸೇಜ್ ಗಳು,  ಫೋಟೋಗಳು ಮತ್ತು ವೀಡಿಯೊಗಳು ನಮಗೆ ಅನೇಕ ರೀತಿಯ ಸಂದೇಶಗಳನ್ನು ರವಾನಿಸುತ್ತವೆ. ಇದು ಉಪಯುಕ್ತ ಮಾಹಿತಿಯೊಂದಿಗೆ ಮನರಂಜನೆ ಪಡೆಯಲು ಇರುವ ಅತ್ಯುತ್ತಮ ಮಾರ್ಗವಾಗಿದೆ. ಇಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳು ನಮ್ಮ ದೈನಂದಿನ ಜೀವನದಲ್ಲಿ ನಾವು ಎದುರಿಸುತ್ತಿರುವ  ತೊಳಲಾಟದಿಂದ ಸ್ವಲ್ಪ ಮುಕ್ತಿ ನೀಡುತ್ತದೆ.  ಇನ್ನು ಇಲ್ಲಿ ಕಾಣಿಸುವ ಪ್ರಾಣಿಗಳ ವಿಡಿಯೋಗಳಿಗಂತೂ ದೊಡ್ಡ ಅಭಿಮಾನ ಬಳಗವೇ ಇದೆ.


COMMERCIAL BREAK
SCROLL TO CONTINUE READING

ಕೋತಿ, ನಾಯಿ, ಬೆಕ್ಕು ಮತ್ತು ಆನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ. ಇದೀಗ ನಾಯಿ ಮರಿ ಮತ್ತು ಕೋತಿ ನಡುವಿನ ಜಗಳದ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.  ಎರಡು ಪ್ರಾಣಿಗಳ ನಡುವಿಯ ಮುನಿಸು ಬಹಳ ಫನ್ನಿಯಾಗಿ ಕಾಣಿಸುತ್ತದೆ.  


ಇದನ್ನೂ ಓದಿ : Mayor Dance viral photo: ಕುಡಿದ ಮತ್ತಿನಲ್ಲಿ ಎಲ್ಲಾ ಬಟ್ಟೆ ಬಿಚ್ಚಿದ ಮೇಯರ್‌


ಈ   ವಿಡಿಯೋದಲ್ಲಿ  ಕೋತಿಯ ಕೈಗಳನ್ನು ಹಿಂದಕ್ಕೆ ಕಟ್ಟಲಾಗಿದೆ.  ನಾಯಿ ಮರಿಯನ್ನೂ ಕಟ್ಟಿ ಹಾಕಲಾಗಿದೆ.  ಅದರ ಮಧ್ಯೆಯೂ ಎರಡೂ ಪ್ರಾಣಿಗಳು ಕಾದಾಟಕ್ಕೆ ಮುಂದಾಗುತ್ತವೆ. ಮೊದಲು ಕೋತಿ ನಾಯಿಗೆ ಒದೆಯುತ್ತದೆ. ಇದರಿಂದ ಕೋಪಗೊಂಡ ನಾಯಿ ಮರಿ ಕೋತಿಗೆ ಜೋರಾಗಿ ಬೊಗಳುತ್ತದೆ.  


ಈ ವೈರಲ್ ವೀಡಿಯೊದಲ್ಲಿ ಕೋತಿ ಮತ್ತು ನಾಯಿ ಕಾದಾಟವನ್ನು ಕಾಣಬಹುದು: 


 



ಇದನ್ನೂ ಓದಿ : Viral Video: ಹಳ್ಳಕ್ಕೆ ಬಿದ್ದ ಬೆಕ್ಕಿನ ರಕ್ಷಣೆಗೆ ಕೋತಿಯ ಶತಪ್ರಯತ್ನ: ಮನಮುಟ್ಟುತ್ತೆ ಈ ವಿಡಿಯೋ


puddlehumpur and savage.wilderness Instagram ಖಾತೆಯಲ್ಲಿ ಈ  ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದುವರೆಗೆ 9,200ಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ವಿಡಿಯೋಗೆ ಸಾಕಷ್ಟು ಲೈಕ್ಸ್ ಕೂಡಾ ಸಿಕ್ಕಿದೆ.  ಇದಲ್ಲದೇ  ಈ ವಿಡಿಯೋ ಬಗ್ಗೆ ಹಲವು ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. 


( ಸೂಚನೆ : ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮತ್ತು ನೀಡಿರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಳ್ಳಲಾಗಿದೆ. Zee ಮಿಡಿಯಾ ಇವುಗಳನ್ನು ಯಾವುದೇ ರೀತಿಯಲ್ಲಿ ಅನುಮೋದಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.