ನೀರಡಿಕೆಯಿಂದ ಬಳಲುತ್ತಿದ್ದ ತೋಳಕ್ಕೆ ನೀರುಣಿಸಿದ ವ್ಯಕ್ತಿ..! ಹೃದಯಸ್ಪರ್ಶಿ ವಿಡಿಯೋ ವೈರಲ್‌

Wolf viral video : ಮರುಭೂಮಿಯಲ್ಲಿ ಬಾಯಾರಿದ ತೋಳಕ್ಕೆ ವ್ಯಕ್ತಿಯೊಬ್ಬ ನೀರು ನೀಡುತ್ತಿರುವ ದೃಶ್ಯ ವೈರಲ್ ಆಗಿದೆ. ಈ ಹೃದಯಸ್ಪರ್ಶಿ ವೀಡಿಯೊವನ್ನು Pier Pets ಎಂಬ ಟ್ಟಿಟರ್‌ ಖಾತೆ ಹಂಚಿಕೊಂಡಿದೆ. ಇಲ್ಲಿಯವರೆಗೆ ಈ ವಿಡಿಯೋ 105,000 ವೀಕ್ಷಣೆ ಪಡೆದಿದೆ.

Written by - Krishna N K | Last Updated : Apr 17, 2023, 01:42 PM IST
  • ಮರಭೂಮಿಯಲ್ಲಿ ಬಾಯಾರಿಕೆ ಬಳಲುತ್ತಿದ್ದ ತೋಳಕ್ಕೆ ನೀರುಣಿಸಿದ ವ್ಯಕ್ತಿ.
  • ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ ಹೃದಯಸ್ಪರ್ಶಿ ವಿಡಿಯೋ.
  • ಇದುವರೆಗೆ ಈ ವಿಡಿಯೋವನ್ನು 105,000 ಜನರ ವೀಕ್ಷಣೆ ಮಾಡಿದ್ದಾರೆ.
ನೀರಡಿಕೆಯಿಂದ ಬಳಲುತ್ತಿದ್ದ ತೋಳಕ್ಕೆ ನೀರುಣಿಸಿದ ವ್ಯಕ್ತಿ..! ಹೃದಯಸ್ಪರ್ಶಿ ವಿಡಿಯೋ ವೈರಲ್‌ title=

Man offer water to Wolf : ಬೇಸಿಗೆಯ ಬಿಸಿ ಹೆಚ್ಚಾಗುತ್ತಿದೆ. ಮಾನವ ಸೇರಿದಂತೆ ಪ್ರಾಣಿ, ಪಕ್ಷಿಗಳು ಬಾಯಾರಿಕೆಯಿಂದ ಬಳಲುತ್ತಿದ್ದಾರೆ. ಮನುಷ್ಯರು ಬೇಡಿಯಾದರೂ ನೀರು ಕುಡಿದು ಬಾಯಾರಿಕೆ ನೀಗಿಸಿಕೊಳ್ಳಬಹುದು ಆದ್ರೆ, ಕಾಡು ಪ್ರಾಣಿಗಳು ಬಾಯಾರಿಕೆಯಿಂದ ಭೀಕರವಾಗಿ ಬಳಲುತ್ತಿವೆ. ಇದೀಗ ನೀರಡಿಕೆಯಿಂದ ಬಳಲುತ್ತಿದ್ದ ತೋಳಕ್ಕೆ ವ್ಯಕ್ತಿಯೊಬ್ಬ ಬಾಟಲಿ ಮೂಲಕ ನೀರುಣಿಸಿದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 

ಹೌದು.. ಕಾಡು ಪ್ರಾಣಿಗಳು ಹಾಗೂ ಮಾನವರ ನಡುವೆ ಆಗಾಗ ಸಂಘರ್ಷ ಮತ್ತು ಪ್ರೀತಿ ಏರ್ಪಡುತ್ತಿರುತ್ತವೆ. ಇದೀಗ ಅಂತಹುದೆ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ. ಮರುಭೂಮಿಯಲ್ಲಿ ಬಾಯಾರಿದ ತೋಳಕ್ಕೆ ವ್ಯಕ್ತಿಯೊಬ್ಬ ನೀರು ನೀಡುತ್ತಿರುವ ದೃಶ್ಯ ವೈರಲ್ ಆಗಿದೆ. ಈ ಹೃದಯಸ್ಪರ್ಶಿ ವೀಡಿಯೊವನ್ನು Pier Pets ಎಂಬ ಟ್ಟಿಟರ್‌ ಖಾತೆ ಹಂಚಿಕೊಂಡಿದೆ. ಇಲ್ಲಿಯವರೆಗೆ ಈ ವಿಡಿಯೋ 105,000 ವೀಕ್ಷಣೆ ಪಡೆದಿದೆ.

ಇದನ್ನೂ ಓದಿ: ʼಶಾಂಪೂವಿನಲ್ಲಿ ಅರಳಿದ ಶಂಕರʼ..! ಕಲಾವಿದನ ಕೈಚಳಕ್ಕೆ ʼಓಂ ನಮಃ ಶಿವಾಯʼ ಎಂದ ನೆಟ್ಟಿಗರು

ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬಾಟಲಿಯಿಂದ ನೀರನ್ನು ತೋಳದ ಬಾಯಿಗೆ ಸುರಿಯುತ್ತಿರುವುದನ್ನು ಕಾಣಬಹುದು. ತೋಳ ಮನುಷ್ಯನನ್ನು ಕಂಡರೆ ಓಡುತ್ತದೆ. ಇಲ್ಲವೆ ಪ್ರಾಣ ರಕ್ಷಣೆಗೆ ದಾಳಿ ಮಾಡುತ್ತದೆ. ಆದ್ರೆ ಇಲ್ಲಿ ಮಾನವನನ್ನು ನಂಬಿ ತನ್ನ ದಣಿವನ್ನು ನೀಗಿಸಿಕೊಂಡಿದ್ದು ತುಂಬಾ ವಿಶೇಷ. ಸುಮಾರು 2,000 ಲೈಕ್‌ಗಳನ್ನು ಪಡೆದಿರುವ ವಿಡಿಯೋ ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News