Duck eating snake video : ಸಾಮಾಜಿಕ ಜಾಲತಾಣಗಳಲ್ಲಿ ಹಲವು ಹಾವುಗಳ ವಿಡಿಯೋಗಳು ಹರಿದಾಡುತ್ತವೆ. ಜನರು ಸಹ ಹಾವಿನ ವಿಡಿಯೋಗಳನ್ನು ಅತ್ಯಂತ ಇಷ್ಟಪಟ್ಟು ನೋಡುತ್ತಾರೆ. ಇದೀಗ ಇಂತಹದ್ದೇ ಒಂದು ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಬಾತುಕೋಳಿಯು ಜೀವಂತ ಹಾವನ್ನು ನೂಡಲ್ಸ್‌ನಂತೆ ನುಂಗುತ್ತಿರುವ ವಿಡಿಯೋ ವೈರಲ್‌ ಆಗುತ್ತಿದೆ.


COMMERCIAL BREAK
SCROLL TO CONTINUE READING

ವಾಸ್ತವವಾಗಿ ಈ ವಿಡಿಯೋವನ್ನು Instagram ನಲ್ಲಿ ಒಬ್ಬ ಬಳಕೆದಾರರು ಹಂಚಿಕೊಂಡಿದ್ದಾರೆ. ಕೊಳದ ದಡದಲ್ಲಿ ಬಾತುಕೋಳಿ ಕುಳಿತಿರುವುದು ಕಂಡುಬರುತ್ತದೆ. ಈ ಕೊಳದ ಸುತ್ತಲೂ ಹಸಿರು ಹುಲ್ಲುಗಾವಲು ಇರುವುದನ್ನು ನೋಡಬಹುದು. ಅದರ ನಡುವೆ ಬಿಳಿ ಬಾತುಕೋಳಿ ಕುಳಿತಿದೆ. ಆಗ ಇದ್ದಕ್ಕಿದ್ದಂತೆ ತನ್ನ ಕೊಕ್ಕಿನಲ್ಲಿ ವಿಷಪೂರಿತ ಹಾವನ್ನು ಹಿಡಿದುಕೊಳ್ಳುತ್ತದೆ.


ಇದನ್ನೂ ಓದಿ :  Viral Video: ಮೆಟ್ರೋದಲ್ಲಿ ನಿದ್ದೆಗೆ ಜಾರಿದ ಯುವಕ! ಪಕ್ಕದಲ್ಲಿದ್ದ ಹುಡುಗಿ ಮಾಡಿದ್ದೇನು ನೋಡಿ


ಬಾತುಕೋಳಿಯು ಈ ಹಾವನ್ನು ಬಾಲದ ಕಡೆಯಿಂದ ತನ್ನ ಕೊಕ್ಕಿನಲ್ಲಿ ಹಿಡಿದು ತಿನ್ನಲು ಪ್ರಾರಂಭಿಸಿತು. ಇಡೀ ಹಾವು ತನ್ನ ಕೊಕ್ಕಿನಲ್ಲಿ ಸೇರಿಕೊಳ್ಳುವವರೆಗೂ ಅದನ್ನು ನುಂಗುತ್ತಲೇ ಇತ್ತು. ಆಶ್ಚರ್ಯವೆಂದರೆ ಇಡೀ ಹಾವನ್ನು ಒಂದೇ ಸಮನೆ ಕೊಕ್ಕಿನಲ್ಲಿ ತುಂಬಿಕೊಂಡಿತು. 


 



 


ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಬಾತುಕೋಳಿ ಅದನ್ನು ತಿಂದ ನಂತರ ಬದುಕಲು ಸಾಧ್ಯವಾಗುತ್ತದೆಯೇ ಎಂದು ಬಳಕೆದಾರರು ಪ್ರಶ್ನಿಸುತ್ತಿದ್ದಾರೆ. ಸದ್ಯ ಹಾವನ್ನು ನುಂಗುತ್ತಿರುವ ಈ ಬಾತುಕೋಳಿಯ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. 


ಇದನ್ನೂ ಓದಿ :  Viral Video : ಜಸ್ಟ್‌ ಮಿಸ್‌! ಹುಲಿ ಬಾಯಿಗೆ ಸಿಕ್ಕವರು ಬಚಾವ್‌ ಆಗಿದ್ದು ಹೇಗೆ ನೋಡಿ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.