Viral Video: ಮೆಟ್ರೋದಲ್ಲಿ ನಿದ್ದೆಗೆ ಜಾರಿದ ಯುವಕ! ಪಕ್ಕದಲ್ಲಿದ್ದ ಹುಡುಗಿ ಮಾಡಿದ್ದೇನು ನೋಡಿ

Trending Video : ಮೆಟ್ರೋದಲ್ಲಿ ಒಂದೇ ಒಂದು ಸೀಟು ಖಾಲಿ ಇಲ್ಲ ಎನ್ನುವುದನ್ನು ಈ ವೈರಲ್ ವಿಡಿಯೋದಲ್ಲಿ ಕಾಣಬಹುದು. ಬಾಗಿಲಿನ ಪಕ್ಕದ ಸೀಟಿನ ತುದಿಯಲ್ಲಿ ಹುಡುಗಿಯೊಬ್ಬಳು ಕುಳಿತಿದ್ದಾಳೆ. 

Written by - Chetana Devarmani | Last Updated : Dec 24, 2022, 11:40 AM IST
  • ಮೆಟ್ರೋದಲ್ಲಿ ನಿದ್ದೆಗೆ ಜಾರಿದ ಯುವಕ
  • ಪಕ್ಕದಲ್ಲಿದ್ದ ಹುಡುಗಿ ಮಾಡಿದ್ದೇನು?
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Viral Video: ಮೆಟ್ರೋದಲ್ಲಿ ನಿದ್ದೆಗೆ ಜಾರಿದ ಯುವಕ! ಪಕ್ಕದಲ್ಲಿದ್ದ ಹುಡುಗಿ ಮಾಡಿದ್ದೇನು ನೋಡಿ   title=

Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ವಿಡಿಯೋಗಳು ವೈರಲ್ ಆಗುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಿಡಿಯೋಗಳನ್ನು ಜನರು ತೀವ್ರವಾಗಿ ಇಷ್ಟಪಡುತ್ತಾರೆ. ಭಾರತದ ಬಗ್ಗೆ ಹೇಳುವುದಾದರೆ, ವಧು-ವರರ ವಿವಾಹ ಸಮಾರಂಭದಲ್ಲಿ ಜನರು ನೃತ್ಯ ಮಾಡುವ ದೃಶ್ಯ, ಫನ್ನಿ ವಿಡಿಯೋಗಳು ಮತ್ತು ಮೆಟ್ರೋದಲ್ಲಿ ವಿಚಿತ್ರವಾದ ಕೃತ್ಯಗಳನ್ನು ಮಾಡುವ ಜನರ ವಿಡಿಯೋಗಳು ಟ್ರೆಂಡಿಂಗ್ ಆಗುತ್ತವೆ. ಇದರಲ್ಲೂ ಮೆಟ್ರೋದೊಳಗೆ ಡ್ಯಾನ್ಸ್ ಮಾಡುವ, ರೀಲ್ ಮಾಡುವ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತವೆ.

ಎರಡು ವಾರಗಳ ಹಿಂದೆಯಷ್ಟೇ ಮೆಟ್ರೋದ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ಮೆಟ್ರೋದ ಸೀಟಿನ ಮೇಲೆ ಬೆಡ್‌ಶೀಟ್ ಹೊದ್ದುಕೊಂಡು ಸುಖವಾಗಿ ಮಲಗಿದ್ದ. ಅಂಥದ್ದೊಂದು ವಿಡಿಯೋ ಇದೀಗ ಮುನ್ನೆಲೆಗೆ ಬಂದಿದ್ದು, ಮೆಟ್ರೋದಲ್ಲಿ ಕುಳಿತ ಯುವಕನೊಬ್ಬ ಗಾಢ ನಿದ್ದೆಗೆ ಜಾರಿದ್ದಾನೆ.

ಇದನ್ನೂ ಓದಿ : Shocking Video: ಈ ಹುಚ್ಚಾಟಿ ಪ್ರೇಮಿಯ ಹುಚ್ಚಾಟ ನೋಡಿ ತಲೆ ಒಂದು ಕ್ಷಣ ದಿಮ್ಮೆನ್ನುವುದು ಗ್ಯಾರಂಟಿ.. ವಿಡಿಯೋ ನೋಡಿ

ಮೆಟ್ರೋದಲ್ಲಿ ಒಂದೇ ಒಂದು ಸೀಟು ಖಾಲಿ ಇಲ್ಲ ಎನ್ನುವುದನ್ನು ಈ ವೈರಲ್ ವಿಡಿಯೋದಲ್ಲಿ ಕಾಣಬಹುದು. ಬಾಗಿಲಿನ ಪಕ್ಕದ ಸೀಟಿನ ತುದಿಯಲ್ಲಿ ಹುಡುಗಿಯೊಬ್ಬಳು ಕುಳಿತಿದ್ದಾಳೆ. ನೀಲಿ ಟೀ ಶರ್ಟ್ ತೊಟ್ಟ ಹುಡುಗನೊಬ್ಬ ಪಕ್ಕದಲ್ಲಿ ಕುಳಿತಿದ್ದಾನೆ. ಅವನು ಕುಳಿತಲ್ಲೇ ಮಲಗಿದ್ದಾನೆ. ಹುಡುಗ ಎಷ್ಟು ಗಾಢ ನಿದ್ದೆಯಲ್ಲಿದ್ದಾನೆಂದರೆ ಅವನು ನಿಧಾನವಾಗಿ ಸೀಟಿನಿಂದ ಮುಂದಕ್ಕೆ ವಾಲಲು ಪ್ರಾರಂಭಿಸುತ್ತಾನೆ, ಆಗ ಮಾತ್ರ ಹಸಿರು ಟಾಪ್ ಧರಿಸಿರುವ ಹುಡುಗಿಯ ನೋಟವು ಅವನ ಮೇಲೆ ಬೀಳುತ್ತದೆ. ಹುಡುಗ ಸೀಟಿನಿಂದ ಕೆಳಗೆ ಬೀಳುತ್ತಾನೆ ಎನ್ನುವ ವೇಳೆ, ಹುಡುಗಿ ಅವನ ಟಿ - ಶರ್ಟ್ ಹಿಡಿದು ಎಳೆದಳು ಮತ್ತು ಈ ರೀತಿಯಾಗಿ ಹುಡುಗನು ಬೀಳದಂತೆ ರಕ್ಷಿಸಿದಳು. ಈಗ ಅಂತಹ ಅಪರಿಚಿತ ಹುಡುಗನಿಗೆ ಹುಡುಗಿ ಸಹಾಯ ಮಾಡುವುದನ್ನು ನೋಡಿ ಎಲ್ಲರೂ ಆಶ್ಚರ್ಯ ಪಡುತ್ತಾರೆ.

 

 

ಈ ವೈರಲ್ ವಿಡಿಯೋವನ್ನು ಎಂಡಿ ಮೊಯಿನ್ ಶೇಖ್ ಎಂಬ ಬಳಕೆದಾರರು Instagram ನಲ್ಲಿ ಹಂಚಿಕೊಂಡಿದ್ದಾರೆ. ಲಕ್ಷಾಂತರ ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಈ ವಿಡಿಯೋಗೆ ಫನ್ನಿ ಕಾಮೆಂಟ್‌ಗಳು ಕೂಡ ಬರುತ್ತಿವೆ. ಇದೀಗ ಈ ವಿಡಿಯೋ ಸಖತ್‌ ಆಗಿ ವೈರಲ್‌ ಆಗುತ್ತಿದೆ. ಕೆಲವರು ಹುಡುಗಿಗೆ ಸಹಾಯ ಮಾಡಿದ್ದಕ್ಕಾಗಿ ಹೊಗಳುತ್ತಿದ್ದಾರೆ. ಮತ್ತೆ ಕೆಲವರು ಇದನ್ನು ಸ್ಕ್ರಿಪ್ಟೆಡ್‌ ವಿಡಿಯೋ ಎನ್ನುತ್ತಿದ್ದಾರೆ.  

ಇದನ್ನೂ ಓದಿ : Viral Video : ಜಸ್ಟ್‌ ಮಿಸ್‌! ಹುಲಿ ಬಾಯಿಗೆ ಸಿಕ್ಕವರು ಬಚಾವ್‌ ಆಗಿದ್ದು ಹೇಗೆ ನೋಡಿ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News