ಉತ್ತರಖಂಡ : ಮದುವೆ ಮನೆ ಎಂದರೆ ಅಲ್ಲಿ ಸ್ನೇಹಿತರ ದಂಡೇ ನೆರೆದಿರುತ್ತದೆ. ಸ್ನೇಹಿತರ ಸಂಭ್ರಮ ಕೂಡಾ ಮುಗಿಲು ಮುಟ್ಟಿರುತ್ತದೆ. ಗೆಳೆಯನ ಮದುವೆ ಎಂದರೆ ಸಣ್ಣ ಪುಟ್ಟ ದೋಷವೂ ಕಾಣದಂತೆ ಸ್ನೇಹಿತರು ಮುತುವರ್ಜಿ ವಹಿಸುತ್ತಾರೆ. ಮುಂದೆ ನಿಂತು ಎಲ್ಲೂ ಏನೂ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ. ಇಂಥ ದೃಶ್ಯವನ್ನು ಸಾಮಾನ್ಯವಾಗಿ ನಾವು ನೋಡುತ್ತೇವೆ. ಆದರೆ ಹರಿದ್ವಾರದ ಬಹದೂರಾಬಾದ್ ಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆ ದಿನ  ವರನ ವಿರುದ್ದವೇ 50 ಲಕ್ಷ ರೂಪಾಯಿ ಕಾನೂನು ಮೊಕದ್ದಮೆ ಹೂಡಲಾಗಿದೆ. ಅದು ಕೂಡಾ ವರ ಸ್ನೇಹಿತರೇ. ಇನ್ನು  ಮೊಕದ್ದಮೆ ಹೂಡಿರುವ ಹಿಂದಿರುವ ಕಾರಣ ತಿಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. 


COMMERCIAL BREAK
SCROLL TO CONTINUE READING

ವರನ ವಿರುದ್ದ ವಂಚನೆ ಪ್ರಕರಣ : 
ವರದಿಯ ಪ್ರಕಾರ, ವರ ರವಿ ತನ್ನ ಪರವಾಗಿ ಮದುವೆ ಕಾರ್ಡ್‌ಗಳನ್ನು ವಿತರಿಸಲು ತನ್ನ ಸ್ನೇಹಿತ ಚಂದ್ರಶೇಖರ್‌ಗೆ ತಿಳಿಸಿದ್ದಾನೆ.  ಈ ಕಾರ್ಡ್ ಪ್ರಕಾರ 5 ಗಂಟೆಗೆ ಮದುವೆ ದಿಬ್ಬಣ ಹೊರಡಬೇಕಿತ್ತು. ಕಾರ್ಡ್ ನಲ್ಲಿ ಪ್ರಿಂಟ್ ಆದ ಸಮಯಕ್ಕೆ ಅನುಗುಣವಾಗಿ ಚಂದ್ರಶೇಖರ್ ಮತ್ತು ಅವರ ಸ್ನೇಹಿತರು ವರನ ಮನೆ ತಲುಪಿದ್ದಾರೆ. ಆದರೆ, ಆ ಹೊತ್ತಿಗಾಗಲೇ ದಿಬ್ಬಣ ಹೊರಟಾಗಿತ್ತು. ಇದನ್ನು ಕಂಡ ವರನ ಸ್ನೇಹಿತರು ನಿರಾಸೆಗೊಂಡಿದ್ದಾರೆ.  


ಇದನ್ನೂ ಓದಿ : Video: ಆಕಾಶದೆತ್ತರಕ್ಕೆ ಹಾರಿ ಸೋಜಿಗ ಹುಟ್ಟಿಸಿದ ನವಿಲು


50 ಲಕ್ಷ ರೂಪಾಯಿ ಮಾನನಷ್ಟ ಮೊಕದ್ದಮೆ : 
ತಾವು ಬರುವ ಮೊದಲೇ ಮದುವೆ ದಿಬ್ಬಣ ಹೊರಟಿರುವುದು ಸ್ನೇಹಿತರ ಮುನಿಸಿಗೆ ಕಾರಣವಾಗಿದೆ. ಅಲ್ಲದೆ ಇದನ್ನು ಅವಮಾನ ಎಂಬಂತೆ ಸ್ನೇಹಿತರು ಭಾವಿಸಿದ್ದಾರೆ. ಈ ಕಾರಣದಿಂದ ಅವಮಾನಕ್ಕೆ ಪ್ರತಿಯಾಗಿ ವರನ ವಿರುದ್ದ ಮೊಕದ್ದಮೆ ಹೂಡಿದ್ದಾರೆ. ಮದುವೆಗೆ ಕರೆದು ಸಮಯಕ್ಕಿಂತ ಮುನ್ನವೇ ದಿಬ್ಬಣ ಹೊರಟಿರುವ ಕಾರಣ ಮದುವೆಗೆ ಬಂದಿರುವ ನಮಗೆ ಮಾನಸಿಕ ಹಿಂಸೆಯಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. 


ತಮಗಾದ ಮಾನಸಿಕ ಹಿಂಸೆಯ ಪರಿಣಾಮ ವರ ರವಿಯ ವಿರುದ್ದ 50 ಲಕ್ಷ ರೂಪಾಯಿ ಮಾನ ನಷ್ಟ ಮೊಕದ್ದಮೆ ಹಾಕುವುದಾಗಿ ನೋಟೀಸ್ ಜಾರಿ ಮಾಡಿದ್ದಾರೆ.  ಅಲ್ಲದೆ ನೋಟೀಸ್ ತಲುಪಿದ  3 ದಿನದೊಳಗೆ ಬಹಿರಂಗವಾಗಿ  ಕ್ಷಮೆಯಾಚಿಸುವಂತೆಯೂ ಕೋರಲಾಗಿದೆ.  ವರನಿಗೆ ಫೋನ್ ಕರೆಯ ಮೂಲಕ ಈ  ನೋಟಿಸ್ ಬಗ್ಗೆ ತಿಳಿಸಲಾಗಿದೆ. ಇನ್ನು ಈ ನೋಟೀಸ್ ಗೆ ವರ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎನ್ನುವುದೇ ಕುತೂಹಲ. 
 
ಇದನ್ನೂ ಓದಿ : Video : ಕಾರಿಗೆ ಡಿಕ್ಕಿಯಾದ ಚಿರತೆ ಸತ್ತು ಹೋಯಿತು ಎಂದು ಕೊಳ್ಳುವಷ್ಟರಲ್ಲಿ ನಡೆದದ್ದು..!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...