ತಾಳಿ ಕಟ್ಟುವ ವೇಳೆ ವಧು ಹೈಡ್ರಾಮಾ ಮುರಿದು ಬಿದ್ದ ಮದುವೆ!

ತಾಳಿ ಕಟ್ಟುವ ವೇಳೆ ವಧುವೊಬ್ಬಳು ಹೈಡ್ರಾಮಾ ಮಾಡಿ, ಮದುವೆ ಮುರಿದು ಬಿದ್ದ ಘಟನೆ ಮೈಸೂರು ನಗರದಲ್ಲಿ ನಡೆದಿದೆ. ತಾಳಿ ಕಟ್ಟುವ ವೇಳೆ ವಧು ಹೈಡ್ರಾಮಾ ಮಾಡಿ ಮಂಗಳಸೂತ್ರ ಕಟ್ಟುವಾಗ ಕುಸಿದು ಬಿದ್ದಂತೆ ನಾಟಕವಾಡಿದ್ದಾಳೆ. 

Written by - Chetana Devarmani | Last Updated : May 22, 2022, 04:36 PM IST
  • ತಾಳಿ ಕಟ್ಟುವ ವೇಳೆ ವಧು ಹೈಡ್ರಾಮಾ
  • ಮುರಿದು ಬಿದ್ದ ಮದುವೆ
  • ಮೈಸೂರು ನಗರದಲ್ಲಿ ನಡೆದ ಘಟನೆ
ತಾಳಿ ಕಟ್ಟುವ ವೇಳೆ ವಧು ಹೈಡ್ರಾಮಾ ಮುರಿದು ಬಿದ್ದ ಮದುವೆ!  title=
ಮೈಸೂರು

ಮೈಸೂರು: ತಾಳಿ ಕಟ್ಟುವ ವೇಳೆ ವಧುವೊಬ್ಬಳು ಹೈಡ್ರಾಮಾ ಮಾಡಿ, ಮದುವೆ ಮುರಿದು ಬಿದ್ದ ಘಟನೆ ಮೈಸೂರು ನಗರದಲ್ಲಿ ನಡೆದಿದೆ. ತಾಳಿ ಕಟ್ಟುವ ವೇಳೆ ವಧು ಹೈಡ್ರಾಮಾ ಮಾಡಿ ಮಂಗಳಸೂತ್ರ ಕಟ್ಟುವಾಗ ಕುಸಿದು ಬಿದ್ದಂತೆ ನಾಟಕವಾಡಿದ್ದಾಳೆ. ಬಳಿಕ, ಕುಸಿದು ಬಿದ್ದಿದ್ದು ನಟನೆ ಎಂದು ತಿಳಿದ ಮೇಲೆ ತಾನು ಪ್ರೀತಿಸಿದ ಲವರ್‌ನನ್ನೇ ಮಧುವೆಯಾಗುತ್ತೇನೆಂದು ಹೇಳಿದ ಘಟನೆಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಇದನ್ನೂ ಓದಿ: ಕಟ್ಟಡದಿಂದ ಬಿದ್ದ ಯುವತಿ ಸ್ಥಳದಲ್ಲೇ ಸಾವು: ರಕ್ಷಿಸಲು ಹೋದ ಯುವಕ ಹೇಳಿದ್ದು ಹೀಗೆ!

ಮೈಸೂರಿನ ಸುಣ್ಣದಕೇರಿ ಸಿಂಚನ ಹೈಡ್ರಾಮ ಮಾಡಿದ ವಧುವಾಗಿದ್ದಾಳೆ.ಸಿಂಚನ ಜೊತೆ ಹೆಚ್.ಡಿ ಕೋಟೆ ತಾಲ್ಲೂಕಿನ ಗ್ರಾಮವೊಂದರ ಯುವಕನೊಂದಿಗೆ ಮದುವೆ‌ ನಿಶ್ಚಯವಾಗಿತ್ತು.
ಆದರೆ, ಸಿಂಚನ, ಸುಣ್ಣದಕೇರಿಯಲ್ಲೇ ತನ್ನ ಪಕ್ಕದ ಮನೆಯ ಯುವಕನೊಂದಿಗೆ  ಲವ್ವಿಡವ್ವಿಯಲ್ಲಿದ್ದಳು. 

ಈ ನಡುವೆ ಸಿಂಚನಳ ಪ್ರಿಯಕರ ವರನಿಗೆ ಮದುವೆಯಾಗದಂತೆ ಮೆಸೇಜ್ ಕೂಡ ಮಾಡಿದ್ದಾನೆ. ಇದರ ಮಧ್ಯೆ ಮಸೇಜ್‌ಗೂ ನನಗೂ ಸಂಬಂಧವಿಲ್ಲವೆಂದು ಮದುವೆಯಾಗುತ್ತಿದ್ದ ಸಿಂಚನ ವರ್ತಿಸಿದ್ದಾಳೆ. ಆದರೆ, ತಾಳಿ ಕಟ್ಟುವ ಸಮಯಕ್ಕೆ ನಾಟಕವಾಡಿದ್ದಾಳೆ‌. ನಾನು ಮದುವೆ ಆಗಯವುದಿಲ್ಲ ಎಂದ ಹೇಳಿದ್ದಾಳೆ. ಇದರಿಂದ ಕಂಗಾಲದ ವರನ ಪೋಷಕರು  ವಧುವಿಗೆ ಛೀಮಾರಿ ಹಾಕಿದ್ದಾರೆ.

ಇದನ್ನೂ ಓದಿ: ಜೂ. 21ರಂದು ಮೈಸೂರಿಗೆ ಪ್ರಧಾನಿ ಆಗಮನ: ಕಾರಣ ಇಲ್ಲಿದೆ!

ಮದುವೆಗಾಗಿ 5 ಲಕ್ಷ ಹಣ ಖರ್ಚು ಮಾಡಿದ್ದು, ವಧುವಿಗೆ ಚಿನ್ನ, ರೇಷ್ಮೆ ಸೀರೆಗಾಗಿ ಲಕ್ಷ ಖರ್ಚು ಮಾಡಿದ್ದೇವೆ. ಈವಾಗ ಮದುವೆ ಆಗುವುದಿಲ್ಲ ಎಂದರೆ ಹೇಗೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ, ಮದುವೆಯಾಗಲ್ಲವೆಂದು ಹಠ ಹಿಡಿದ ವಧುವನ್ನ ಕೆ.ಆರ್.ಪೊಲೀಸ್ ಠಾಣೆಯ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News