ನವದೆಹಲಿ: ನೀವು ಇಂಟರ್ನೆಟ್ನಲ್ಲಿ ಡ್ಯಾನ್ಸ್ ನ ಹಲವಾರು ತಮಾಷೆಯ ವಿಡಿಯೋಗಳನ್ನು ನೋಡಿರುತ್ತೀರಿ. ನಕ್ಕು ನಕ್ಕು ಸುಸ್ತಾಗುವಷ್ಟು ಈ ವಿಡಿಯೋಗಳು ಫನ್ನಿಯಾಗಿರುತ್ತವೆ. ಇಂತಹ ಮತ್ತೊಂದು ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಕುಡಿದು ಚಿತ್ತಾಗಿದ್ದ ವ್ಯಕ್ತಿಯೊಬ್ಬ ಭೋಜಪುರಿ ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು. ಬಹುಶಃ ಈ ವ್ಯಕ್ತಿಗೆ ಮುಂದಿನ ಕೆಲವು ಕ್ಷಣಗಳಲ್ಲಿ ತನಗೆ ಏನಾಗಲಿದೆ ಎಂದು ತಿಳಿದಿರಲಿಲ್ಲ. ಕೆಲವೇ ಸೆಕೆಂಡುಗಳ ನಂತರ ಆ ವ್ಯಕ್ತಿಯು ಬಹಳಷ್ಟು ಅವಮಾನ ಎದುರಿಸಬೇಕಾಯಿತು.
ಇದನ್ನೂ ಓದಿ: Golden Ships: ಕೊಲಂಬಿಯಾದ ಕ್ಯಾರಿಬೀನ್ ಕಡಲ ತೀರದಲ್ಲಿ ಬಂಗಾರ ತುಂಬಿದ ಹಡಗುಗಳು ಪತ್ತೆ!
ಆಗಿದ್ದೇನು..?
ವೇದಿಕೆ ಮೇಲೆ ನಡೆಯುತ್ತಿದ್ದ ರಸಮಂಜರಿ ಕಾರ್ಯಕ್ರಮವನ್ನು ಅನೇಕ ಮಹಿಳೆಯರು ವೀಕ್ಷಿಸುತ್ತಿದ್ದರು. ಈ ವೇಳೆ ಕಂಟಪೂರ್ತಿ ಕುಡಿದಿದ್ದ ವ್ಯಕ್ತಿ ಭೋಜಪುರಿ ಹಾಡಿಗೆ ನೃತ್ಯ ಮಾಡುತ್ತಿದ್ದ. ಹೀಗೆ ಡ್ಯಾನ್ಸ್ ಮಾಡುತ್ತಾ ಮಾಡುತ್ತಾ ಕಾಲುಜಾರಿ ಆತ ಹಿಂಬದಿ ಕುಳಿತುಕೊಂಡಿದ್ದ ಮಹಿಳೆಯರ ಮೇಲೆ ಬಿದ್ದಿದ್ದಾನೆ. ಅತಿಯಾಗಿ ಮದ್ಯ ಸೇವಿಸಿದ್ದ ಆತನಿಗೆ ಸರಿಯಾಗಿ ನಿಲ್ಲಲು ಬರುತ್ತಿರಲಿಲ್ಲ. ಹೀಗಾಗಿ ಆಯತಪ್ಪಿ ಅತ ಮಹಿಳೆಯರ ಮೇಲೆಯೇ ಬಿದ್ದಿದ್ದಾನೆ.
ಸಖತ್ ವೈರಲ್ ಆಗಿರುವ ವಿಡಿಯೋ
ಕುಡಿದ ಮತ್ತಲ್ಲಿ ತೇಲಾಡುತ್ತಿದ್ದ ವ್ಯಕ್ತಿ ಭೋಜಪುರಿ ಹಾಡಿಗೆ ಕುಣಿಯುತ್ತಾ ಹೋಗಿ ಮಹಿಳೆಯರ ಮೇಲೆ ಬಿದ್ದಿರುವ ಈ ವಿಡಿಯೋ ಸಖತ್ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಲಕ್ಷಾಂತರ ಮಂದಿಯನ್ನು ರಂಜಿಸಿದೆ. ಅಷ್ಟೇ ಅಲ್ಲ ಈ ವಿಡಿಯೋವನ್ನು ಇದುವರೆಗೆ 54 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ಸೈಕಲ್ ರೈಡ್ ಮಾಡುತ್ತಾ ಕೆಳಗೆ ಬಿದ್ದ ಗೋರಿಲ್ಲಾ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.