Trending Video Snake : ಸಮಯ ಸರಿಯಿಲ್ಲದೆ ಹೋದಾಗ  ಹಗ್ಗ ಕೂಡಾ ಹಾವಾಗಿ ಕಾಡುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದರೆ, ಎಲ್ಲವೂ ಸರಿಯಿದ್ದಾಗ ಹಾವು ಹಗ್ಗವಾಗುತ್ತದೆಯೋ ಏನೋ? ಇದೀಗ ವೈರಲ್ ಆಗುತ್ತಿರುವ ವಿಡಿಯೋ ನೋಡಿದಾಗ ಹಾಗೆಯೇ ಅನ್ನಿಸುತ್ತದೆ. ಯಾಕೆಂದರೆ ಈ ವಿಡಿಯೋದಲ್ಲಿ ಕಪ್ಪೆಯೊಂದು  ಹಾವಿನ ಬೆನ್ನ ಮೇಲೆ ಕುಳಿತು ಸವಾರಿ ಮಾಡುತ್ತಿದೆ. 


COMMERCIAL BREAK
SCROLL TO CONTINUE READING

ಅರಣ್ಯಾಧಿಕಾರಿ ಸುಶಾಂತ್ ನಂದಾ ಅವರು ಟ್ವಿಟರ್ ಹ್ಯಾಂಡಲ್‌ನಿಂದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅತಿಯಾದ ಉದ್ದದ ಬಿಳಿ ಬಣ್ಣದ ಹಾವನ್ನು ನೋಡಬಹುದು. ಹಾವಿನ ಬೆನ್ನ ಹಿಂದೆ ಕುಳಿತಿರುವ ಕಪ್ಪೆಯನ್ನು ಕೂಡಾ ಇಲ್ಲಿ ಕಾಣಬಹುದು. ಈ ಕಪ್ಪೆ ಎಷ್ಟು ಆರಾಮಾಗಿ ಹಾವಿನ ಬೆನ್ನ ಮೇಲೇರಿ ಕುಳಿತಿದೆ ಎಂದರೆ, ತಾನು ಹಾವಿನ ಆಹಾರವಾಗಬಹುದು ಎನ್ನುವ ಕಿಂಚಿತ್ತೂ ಭಯ ಆ ಕಪ್ಪೆರಾಯನಿಗೆ ಇದ್ದಂತಿಲ್ಲ. 


ಇದನ್ನೂ ಓದಿ : Viral Video: ಹುಬ್ಬಳ್ಳಿ- ದೆಹಲಿ ವಿಮಾನದಲ್ಲಿ ಉತ್ತರ ಕರ್ನಾಟಕ ಭಾಷಾ ಸೊಗಡು


ಅಂದ ಹಾಗೆ ಈ ಹಾವಿನ ಸೌಂದರ್ಯಕ್ಕೆ ಮಾರು ಹೋಗಿ ಕಪ್ಪೆ ಭಯ ಮರೆತಿದೆಯೋ ಏನೋ ? ಹಾಗಾಗಿ ಸ್ವಲ್ಪವೂ ಅಳುಕಿಲ್ಲದೆ ಹಾವಿನ ಬೆನ್ನೇರಿ ಕುಳಿತಿರುವಂತಿದೆ. ಆದರೆ ಯಾವಾಗ ಹಾವಿಗೆ ತನ್ನ ಬೆನ್ನ ಮೇಲೆಯೇ ತನ್ಶಿನ ಬೇಟೆ ಕುಳಿತಿದೆ ಎಂದು ತಿಳಿಯುತ್ತದೆಯೋ ಆಗ ಕಪ್ಪೆ ತನ್ನ ಪ್ರಾಣ ರಕ್ಷಿಸುವುದು ಹೇಗೆ ಎನ್ನುವುದು ಕೂಡಾ ಕುತೂಹಲ. 


ಈ ವಿಡಿಯೋವನ್ನು ಶೇರ್ ಮಾಡುತ್ತಿದ್ದಂತೆಯೇ ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ. 73 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದು, ಕಾಮೆಂಟ್‌ಗಳ ಮಹಾಪೂರವೇ ಹರಿದು ಬಂದಿದೆ. 


 


Video Viral: ಗೂಳಿಗಳ ನಡುವೆ ಅಪಾಯಕಾರಿ ಕಾದಾಟ! ಅಡ್ಡ ಸಿಕ್ಕಿದ್ದೆಲ್ಲಾ ಧ್ವಂಸ


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.