Viral Video: ಹುಬ್ಬಳ್ಳಿ- ದೆಹಲಿ ವಿಮಾನದಲ್ಲಿ ಉತ್ತರ ಕರ್ನಾಟಕ ಭಾಷಾ ಸೊಗಡು

Viral Video: ಸೋಮವಾರ ಮಧ್ಯಾಹ್ನ ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸಿದ್ದ ವಿಮಾನ, ಮಧ್ಯಾಹ್ನ 1:15ರ ಸುಮಾರಿಗೆ ದೆಹಲಿಗೆ ಮರು ಪ್ರಯಾಣ ಬೆಳೆಸಿತು. ವಿಮಾನದಲ್ಲಿ ಇಂಡಿಗೋ ಕಂಪನಿ ಅಧಿಕಾರಿ, ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಅಕ್ಷಯ ಪಾಟೀಲ ಅವರು ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಉತ್ತರ ಕರ್ನಾಟಕ ಜವಾರಿ ಭಾಷೆಯಲ್ಲೇ ಸ್ವಾಗತ ಕೋರಿದರು.

Written by - Yashaswini V | Last Updated : Nov 15, 2022, 10:22 AM IST
  • ಹುಬ್ಬಳ್ಳಿ- ದೆಹಲಿ ವಿಮಾನದಲ್ಲಿ ಉತ್ತರ ಕರ್ನಾಟಕ ಭಾಷಾ ಸೊಗಡು
  • ವೈರಲ್ ಆದ ಪೈಲಟ್‌ ಅವರ ಉತ್ತರ ಕರ್ನಾಟಕ ಭಾಷೆಯ ಸಂಭಾಷಣೆ
  • ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ ಭಾಷೆಯಲ್ಲಿ ಅನೌನ್ಸ್‌ಮೆಂಟ್ ಮಾಡಿದ ಪೈಲಟ್
Viral Video: ಹುಬ್ಬಳ್ಳಿ- ದೆಹಲಿ ವಿಮಾನದಲ್ಲಿ ಉತ್ತರ ಕರ್ನಾಟಕ ಭಾಷಾ ಸೊಗಡು title=
Pilot spoke in Kannada

Viral Video: ಹುಬ್ಬಳ್ಳಿ-ದೆಹಲಿ ನಡುವೆ ಸಂಚಾರ ಆರಂಭಿಸಿದ ವಿಮಾನದಲ್ಲಿ ಇಂಡಿಗೋ ಕಂಪನಿ ಅಧಿಕಾರಿ ಅಕ್ಷಯ ಪಾಟೀಲ ಉತ್ತರ ಕರ್ನಾಟಕ ಭಾಷೆಯಲ್ಲಿ ಸ್ವಾಗತ ಹಾಗೂ ವಿವರಣೆ ನೀಡುವ ಮೂಲಕ ಪ್ರಯಾಣಿಕರ ಗಮನ ಸೆಳೆದರಲ್ಲದೆ, ಕನ್ನಡ ಪ್ರೇಮ ಮೆರೆದರು.

ಸೋಮವಾರ ಮಧ್ಯಾಹ್ನ ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸಿದ್ದ ವಿಮಾನ, ಮಧ್ಯಾಹ್ನ 1:15ರ ಸುಮಾರಿಗೆ ದೆಹಲಿಗೆ ಮರು ಪ್ರಯಾಣ ಬೆಳೆಸಿತು. ವಿಮಾನದಲ್ಲಿ ಇಂಡಿಗೋ ಕಂಪನಿ ಅಧಿಕಾರಿ, ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಅಕ್ಷಯ ಪಾಟೀಲ ಅವರು ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಉತ್ತರ ಕರ್ನಾಟಕ ಜವಾರಿ ಭಾಷೆಯಲ್ಲೇ ಸ್ವಾಗತ ಕೋರಿದರು.

ಇದನ್ನೂ ಓದಿ- Viral Video: ಇನ್ನೊಬ್ಬ ಸವಾರನನ್ನು ಒದ್ದು ಉರುಳಿಸಲು ಹೋಗಿ ಬೈಕಿಂದ ಬಿದ್ದ ಯುವತಿ: ಕರ್ಮ ರಿಟರ್ನ್ಸ್ ಅಂದ್ರೆ ಇದೇ

ಇದೇ ಸಂದರ್ಭದಲ್ಲಿ, ಹುಬ್ಬಳ್ಳಿ-ದೆಹಲಿ ನಡುವೆ 1,700 ಕಿಮೀ ದೂರ ಇದ್ದು, ಕೇವಲ ಎರಡೂವರೆ ತಾಸಿನಲ್ಲಿ ದೆಹಲಿ ತಲುಪಬಹುದಾಗಿದೆ. ದೆಹಲಿ-ಹುಬ್ಬಳ್ಳಿ ನಡುವೆ ನೇರ ವಿಮಾನ ಆರಂಭಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಯತ್ನ ಪ್ರಮುಖವಾಗಿದೆ ಎಂದು ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ- Viral Video : ಡಿಜೆ ಹಾಡಿಗೆ ಹುಚ್ಚೆದ್ದು ಕುಣಿದ ಅಜ್ಜ.. ವಿಡಿಯೋ ನೋಡಿದ್ರೆ ನಗು ತಡೆಯೋಕೆ ಆಗಲ್ಲ!

ವಿಮಾನದಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಕೊರೊನಾ ಹೋಗಿದೆ ಎಂದು ಮಾಸ್ಕ್ ಧರಿಸುವುದು ಬಿಟ್ಟಿದ್ದೇವೆ. ಅದು ಇನ್ನೂ ಸಂಪೂರ್ಣವಾಗಿ ಹೋಗಿಲ್ಲ. ಎಲ್ಲರೂ ಮಾಸ್ಕ್ ಧರಿಸಬೇಕು. ಮಾಸ್ಕ್ ಇಲ್ಲದವರು ಪಡೆದುಕೊಳ್ಳಬೇಕು ಎಂದು ಕನ್ನಡದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಷೆಯಲ್ಲೇ ಹೇಳುವ ಮೂಲಕ ಅವರು ಎಲ್ಲರ ಗಮನ ಸೆಳೆದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News