Viral Video: ನಾಯಿಯ ಕುತ್ತಿಗೆಗೆ ನೇಣು ಬಿಗಿದು ನೇತು ಹಾಕಿದ ಪಾಪಿಗಳು

Viral Video: ಕೆಲವರು ಒಂದು ನಾಯಿಯ ಕುತ್ತಿಗೆಗೆ ಹಗ್ಗವನ್ನು ಬಿಗಿದು ನೇತುಹಾಕುತ್ತಿರುವುದನ್ನು ನೋಡಬಹುದು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಗಾಜಿಯಾಬಾದ್‌ನ ಲೋನಿ ಬಳಿಯ ಎಲೈಚಿಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ

Written by - Bhavishya Shetty | Last Updated : Nov 14, 2022, 04:37 PM IST
    • ನಾಯಿಯ ಕುತ್ತಿಗೆಗೆ ಹಗ್ಗವನ್ನು ಬಿಗಿದು ನೇತುಹಾಕುತ್ತಿರುವ ಯುವಕರು
    • ಎಂದೂ ಕಂಡಿರದ ಕ್ರೂರತ್ವದ ವಿಡಿಯೋ ವೈರಲ್
    • ಗಾಜಿಯಾಬಾದ್‌ನ ಲೋನಿ ಬಳಿಯ ಎಲೈಚಿಪುರ ಪ್ರದೇಶದಲ್ಲಿ ನಡೆದ ಘಟನೆ
Viral Video: ನಾಯಿಯ ಕುತ್ತಿಗೆಗೆ ನೇಣು ಬಿಗಿದು ನೇತು ಹಾಕಿದ ಪಾಪಿಗಳು  title=
Dogs Viral Video

Today Viral Video: ದಿನ ಬೆಳಗಾದರೆ ಸೋಶಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರವಾದ ವಿಡಿಯೋ, ಪೋಸ್ಟ್, ಸಂದೇಶಗಳನ್ನು ನಾವು ನೋಡುತ್ತೇವೆ. ಇದೀಗ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಕಾಣುವ ದೃಶ್ಯ ಪ್ರಪಂಚದ ಎಲ್ಲಾ ಕ್ರೂರತ್ವವನ್ನು ಮೀರಿಸುವಂತಿದೆ.

ಇದನ್ನೂ ಓದಿ: ಮುಂಬೈ ವಿಮಾನ ನಿಲ್ದಾಣದಲ್ಲಿ 32 ಕೋಟಿ ಮೌಲ್ಯದ 61 ಕೆಜಿ ಚಿನ್ನ ವಶ

ಕೆಲವರು ಒಂದು ನಾಯಿಯ ಕುತ್ತಿಗೆಗೆ ಹಗ್ಗವನ್ನು ಬಿಗಿದು ನೇತುಹಾಕುತ್ತಿರುವುದನ್ನು ನೋಡಬಹುದು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಗಾಜಿಯಾಬಾದ್‌ನ ಲೋನಿ ಬಳಿಯ ಎಲೈಚಿಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವಿಡಿಯೋ ಮೂರು ತಿಂಗಳ ಹಳೆಯದಾಗಿದ್ದು, ಹೃದಯ ವಿದ್ರಾವಕ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ವಿಚಾರಣೆಗೆ ಕರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೋ ಕ್ಲಿಪ್‌ನಲ್ಲಿ, ಇಬ್ಬರು ಪುರುಷರು ನಾಯಿಯನ್ನು ಲೋಹದ ಸರಪಳಿಯಿಂದ ಕುತ್ತಿಗೆಯನ್ನು ಕಟ್ಟಿ ಗೋಡೆಗೆ ನೇತುಹಾಕುತ್ತಿರುವುದನ್ನು ಕಾಣಬಹುದು. ನಂತರ ಅವರಲ್ಲಿ ಒಬ್ಬ ಸರಪಳಿಯನ್ನು ಎಳೆಯುತ್ತಾರೆ, ಹೀಗೆ ಮಾಡಿ ಆ ನಾಯಿಯನ್ನು ಸಾಯಿಸುತ್ತಾರೆ.

 

 

ಸಾಕು ನಾಯಿ ಅಥವಾ ಬೆಕ್ಕು ಯಾರಿಗಾದರೂ ದಾಳಿ ಮಾಡಿದರೆ ಮಾಲೀಕರು 10,000 ರೂಪಾಯಿ ದಂಡ ವಿಧಿಸಬೇಕು ಎಂದು ನೋಯ್ಡಾ ಪ್ರಾಧಿಕಾರ ಸೂಚನೆ ಹೊರಡಿಸಿತ್ತು. ಇದಾದ ಒಂದು ದಿನದ ನಂತರ ವೀಡಿಯೊ ಹೊರಬಿದ್ದಿದೆ. ಇದಲ್ಲದೆ ತಮ್ಮ ಸಾಕುಪ್ರಾಣಿಗಳಿಂದ ಉಂಟಾದ ಗಾಯದ ಚಿಕಿತ್ಸೆಗಾಗಿ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಪಾವತಿಸಲು ಮಾಲೀಕರೇ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಹೇಳಲಾಗಿತ್ತು.

ಸಾಕುಪ್ರಾಣಿಗಳ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ನೀತಿಯನ್ನು ರೂಪಿಸಲಾಗಿದೆ. ಕಳೆದ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ನೋಯ್ಡಾದ ಹೌಸಿಂಗ್ ಸೊಸೈಟಿಯಲ್ಲಿ ಏಳು ತಿಂಗಳ ಹಸುಳೆಯನ್ನು ಬೀದಿ ನಾಯಿ ಕೊಂದು ಹಾಕಿತ್ತು. ಗಾಯಗಳಿಂದ ಬಳಲುತ್ತಿದ್ದ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸೆಕ್ಟರ್ 100ರ ಲೋಟಸ್ ಬುಲೆವಾರ್ಡ್ ಸೊಸೈಟಿಯ ಆವರಣದಲ್ಲಿ ಈ ಘಟನೆ ನಡೆದಿತ್ತು.

ಇದನ್ನೂ ಓದಿ: Video Viral : ಕುತ್ತಿಗೆಗೆ ಸುತ್ತಿಕೊಂಡು ಜೀವಂತವಾಗಿ ನುಂಗಲು ಆರಂಭಿಸಿದ ಹೆಬ್ಬಾವು! ಮುಂದೇನಾಯ್ತು?

ನಾಯಿ ಕಡಿತದ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಗಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನಿವಾಸಿಗಳು ಉಗ್ರವಾದ ಪಿಟ್‌ಬುಲ್, ರಾಟ್‌ವೀಲರ್ ಮತ್ತು ಡೋಗೊ ಅರ್ಜೆಂಟಿನೋ ತಳಿಗಳನ್ನು ಸಾಕುಪ್ರಾಣಿಗಳಾಗಿ ಸಾಕುವುದನ್ನು ನಿಷೇಧಿಸಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News