Viral Video : ಒಂಟಿ ಮೊಸಳೆ ಮೇಲೆರಗಿದ ಸಿಂಹಗಳ ಗುಂಪು : ಕಾಳಗದಲ್ಲಿ ಗೆದ್ದದ್ದು ಮಾತ್ರ ...
Viral Video : ಸಿಂಹ ನೆಲದ ಮೇಲಿನ ಶಕ್ತಿ ಶಾಲಿ ಪ್ರಾಣಿ ಎನ್ನುವುದರಲ್ಲಿ ಎರಡು ಮಾತಿಲ್ಲ. ನೀರಿನೊಳಗಿರುವ ಪ್ರಾಣಿಗಳ ಬಗ್ಗೆ ಹೇಳುವುದಾದರೆ, ಅತ್ಯಂತ ಅಪಾಯಕಾರಿ ಪ್ರಾಣಿ ಎಂದ ಕೂಡಲೇ ಕಣ್ಣ ಮುಂದೆ ಬರುವುದು ಮೊಸಳೆ.
Viral Video : ಕಾಡಿನ ರಾಜ ಸಿಂಹ. ಸಿಂಹದ ಗತ್ತು, ಘನ ಗಾಂಭೀರ್ಯ ನಡಿಗೆ, ಅದರ ತಾಕತ್ತು ಇವೆಲ್ಲವನ್ನೂ ಮನಗಂಡು ಸಿಂಹವನ್ನು ಕಾಡಿನ ರಾಜ ಎಂದು ಕರೆಯಲಾಗುತ್ತದೆ. ಒಂದಾನೊಂದು ಕಾಲದಲ್ಲಿ ಎಂದು ಆರಂಭವಾಗುವ ಸಿಂಹದ ಶೌರ್ಯವನ್ನು ವಿವರಿಸುವ ಅನೇಕ ಕತೆಗಳನ್ನು ನಾವು ಕೇಳಿರುತ್ತೇವೆ, ನಮ್ಮ ಮಕ್ಕಳಿಗೂ ಹೇಳಿರುತ್ತೇವೆ. ಅದೇ ಕಾರಣಕ್ಕೆ ಸಿಂಹ ಅಂದ ಕೂಡಲೇ ಪುಟ್ಟ ಮಕ್ಕಳ ಕಂಗಳು ಕೂಡಾ ಅರಳುತ್ತವೆ. ಈ ಕಾಡಿನ ರಾಜನಿಗೆ ಸಂಬಂಧ ಪಟ್ಟ ಅನೇಕ ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಸಾಮಾನ್ಯವಾಗಿ ಆ ವಿಡಿಯೋಗಳಲ್ಲಿ ಸಿಂಹ ಬೇರೆ ಪ್ರಾಣಿಗಳ ಮೇಲೆರಗಿ ಹೋಗುವುದನ್ನೇ ನೋಡಿರುತ್ತೇವೆ.
ಸಿಂಹ ನೆಲದ ಮೇಲಿನ ಶಕ್ತಿ ಶಾಲಿ ಪ್ರಾಣಿ ಎನ್ನುವುದರಲ್ಲಿ ಎರಡು ಮಾತಿಲ್ಲ. ನೀರಿನೊಳಗಿರುವ ಪ್ರಾಣಿಗಳ ಬಗ್ಗೆ ಹೇಳುವುದಾದರೆ, ಅತ್ಯಂತ ಅಪಾಯಕಾರಿ ಪ್ರಾಣಿ ಎಂದ ಕೂಡಲೇ ಕಣ್ಣ ಮುಂದೆ ಬರುವುದು ಮೊಸಳೆ. ನೋಡುವುದಕ್ಕೂ ಭಯ ಹುಟ್ಟಿಸುವ ಮೊಸಳೆ ಸಮಯ ನೋಡಿ ಎದುರಿಗಿರುವವರನ್ನು ಬೇಟೆಯಾಡಿ ಬಿಡುತ್ತವೆ. ಮೊಸಳೆಯ ಚಾಕಚಕ್ಯತೆಯ ಅನೇಕ ಕತೆಗಳನ್ನು ಕೂಡಾ ನಾವು ಕೇಳಿರುತ್ತೇವೆ.
ಇದನ್ನೂ ಓದಿ : ಹುಡುಗಿಯನ್ನು ಎತ್ತಿ ಸಾಹಸ ಪ್ರದರ್ಶಿಸಲು ಹೋದ ಹುಡುಗ, ಮುಂದೆ ಆಗಿದ್ದೇ ಬೇರೆ...
ಇಲ್ಲಿ ಒಂದು ವಿಡಿಯೋ ಇದೆ. ಈ ವೈರಲ್ ವಿಡಿಯೋದಲ್ಲಿ ನೀರನಲ್ಲಿ ಮೊಸಳೆ ಇರುವುದನ್ನು ಕಾಣಬಹುದು. ಒಂದು ಮೊಸಳೆ ಅದರ ಸುತ್ತಲೂ ಆವರಿಸಿ ನಿಂತಿರುವ ಸಿಂಹಗಳು. ಮೊದಲು ಮೊಸಳೆ ಮುಂದೆ ಕೇವಲ ಒಂದು ಸಿಂಹ ಬರುತ್ತದೆ. ಯಾವಾಗ ಮೊಸಳೆ ಸಿಂಹದತ್ತ ಮುನ್ನುಗ್ಗಿಕೊಂಡು ಬರುತ್ತದೆಯೋ ಆಗ ಅಕ್ಕ ಪಕ್ಕದಿಂದ ಸಿಂಹಗಳ ಗುಂಪೇ ಬರುತ್ತದೆ. ಆ ಮೊಸಳೆ ಮೇಲೆ ಎಲ್ಲಾ ಸಿಂಹಗಳು ಒಟ್ಟಿಗೆ ದಾಳಿಗೆ ಮುಂದಾಗುತ್ತದೆ. ಆದರೆ ಮೊಸಳೆ ಕಾಡಿನ ರಾಜನಿಗೂ ಬಗ್ಗುವುದಿಲ್ಲ, ಜಗ್ಗುವುದಿಲ್ಲ. ದಾಳಿಗೆ ಪ್ರತಿದಾಳಿ ಮಾಡುತ್ತದೆ. ಸಿಂಹಗಳನ್ನು ಹೊಡೆದೋಡಿಸಿ ಬಿಡುತ್ತದೆ.
ಇದನ್ನೂ ಓದಿ : Viral Video: ಅವ್ಯವಸ್ಥೆ ವಿರುದ್ಧ ಚರಂಡಿಗಿಳಿದ ಶಾಸಕ!
ಈ ವಿಡಿಯೋವನ್ನು ಲಯನ್ಸ್‌ಡೈಲಿ ಎಂಬ ಇನ್‌ಸ್ಟಾಗ್ರಾಮ್ ಖಾತೆಗೆ ಅಪ್‌ಲೋಡ್ ಮಾಡಲಾಗಿದೆ. 35 ಸೆಕೆಂಡ್‌ಗಳ ಈ ವೀಡಿಯೋವನ್ನು ನೆಟ್ಟಿಗರು ತುಂಬಾ ಇಷ್ಟಪಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.