ಹುಡುಗಿಯನ್ನು ಎತ್ತಿ ಸಾಹಸ ಪ್ರದರ್ಶಿಸಲು ಹೋದ ಹುಡುಗ, ಮುಂದೆ ಆಗಿದ್ದೇ ಬೇರೆ...

Viral Video: ಇತ್ತೀಚಿನ ದಿನಗಳಲ್ಲಿ ಸ್ಟಂಟ್ ಮಾಡುವ ಗೀಳು ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದರೆ ನಿತ್ಯ ಒಂದಿಲ್ಲೊಂದು ರೀತಿಯ ಸಾಹಸಮಯ ವಿಡಿಯೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದನ್ನು ಕಾಣಬಹುದು. ಈಗ ಅಂತಹದ್ದೇ ಒಂದು ಅಪಾಯಕಾರಿ ಸ್ಟಂಟ್ ವಿಡಿಯೋ ವೈರಲ್ ಆಗಿದೆ.

Written by - Yashaswini V | Last Updated : Jul 7, 2022, 01:01 PM IST
  • ಈ ವೈರಲ್ ವಿಡಿಯೋದಲ್ಲಿ ಒಬ್ಬ ಹುಡುಗ ಮತ್ತು ಹುಡುಗಿ ಪರಸ್ಪರ ಸ್ಟಂಟ್ ಮಾಡುತ್ತಿರುವುದು ಕಂಡು ಬರುತ್ತದೆ.
  • ಈ ವಿಡಿಯೋದಲ್ಲಿ ಮೊದಲಿಗೆ ಒಬ್ಬ ಹುಡುಗ ಮತ್ತು ಹುಡುಗಿ ಪಾರ್ಕ್‌ನಲ್ಲಿ ವ್ಯಾಯಾಮ ಮಾಡುತ್ತಿರುವುದನ್ನು ತೋರಿಸಲಾಗಿದೆ.
  • ಸ್ವಲ್ಪ ಸಮಯದ ನಂತರ ಹುಡುಗಿ ಓಡಿ ಬಂದು ಹುಡುಗನ ಮೇಲೆ ಹಾರುತ್ತಾಳೆ, ಮುಂದೇನಾಯ್ತು ನೀವೇ ನೋಡಿ ...
ಹುಡುಗಿಯನ್ನು ಎತ್ತಿ ಸಾಹಸ ಪ್ರದರ್ಶಿಸಲು ಹೋದ ಹುಡುಗ, ಮುಂದೆ ಆಗಿದ್ದೇ ಬೇರೆ... title=
Boy and Girl stunt video

ಹುಡುಗ-ಹುಡುಗಿಯ ವೈರಲ್ ವಿಡಿಯೋ: ಪ್ರಸ್ತುತ ಸ್ಟಂಟ್ ಕ್ರೇಜ್ ತುಂಬಾ ಹೆಚ್ಚಾಗಿದೆ. ಸೈಕಲ್ ಹೊಡೆಯುವ ಸಣ್ಣ-ಪುಟ್ಟ ಮಕ್ಕಳಿಂದ ಹಿಡಿದು ಊರುಗೋಲು ಹಿಡಿದು ನಡೆಯುವ ಹಿರಿಯರವರೆಗೂ ಸ್ಟಂಟ್ ಮಾಡುವ ಹುಮ್ಮಸ್ಸು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಕೆಲವು ಬಾರಿ ಇಂತಹ ಸ್ಟಂಟ್ ಗಳು ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಅಂತಹದ್ದೇ ದೃಶ್ಯವನ್ನು ಕಾಣಬಹುದು. 

ವೈರಲ್ ವಿಡಿಯೋದಲ್ಲಿ ಒಬ್ಬ ಹುಡುಗ ಮತ್ತು ಹುಡುಗಿ ಪರಸ್ಪರ ಸ್ಟಂಟ್ ಮಾಡುತ್ತಿರುವುದು ಕಂಡು ಬರುತ್ತದೆ. ಈ ವಿಡಿಯೋದಲ್ಲಿ ಮೊದಲಿಗೆ ಒಬ್ಬ ಹುಡುಗ ಮತ್ತು ಹುಡುಗಿ ಪಾರ್ಕ್‌ನಲ್ಲಿ ವ್ಯಾಯಾಮ ಮಾಡುತ್ತಿರುವುದನ್ನು ತೋರಿಸಲಾಗಿದೆ. ಸ್ವಲ್ಪ ಸಮಯದ ನಂತರ ಹುಡುಗಿ ಓಡಿ ಬಂದು ಹುಡುಗನ ಮೇಲೆ ಹಾರುತ್ತಾಳೆ. ಈ ವೇಳೆ ಹುಡುಗಿಯನ್ನು ಹಿಡಿದ ಹುಡುಗ ಗಾಳಿಯಲ್ಲಿ ಆಕೆಯನ್ನು ಮೇಲೆತ್ತುತ್ತಾನೆ. 
ಆದರೆ, ಹುಡುಗಿಯನ್ನು ಮೇಲೆತ್ತಿ ಶಕ್ತಿ ಪ್ರದರ್ಶಿಸಲು ಮುಂದಾದ ಹುಡುಗ ಬ್ಯಾಲೆನ್ಸ್ ಮಾಡಲಾಗದೆ ಕೈ ಬಿಟ್ಟು ಬಿಡುತ್ತಾನೆ...

ಇದನ್ನೂ ಓದಿ- Viral Video: ಇಲ್ಲೊಬ್ಬ ವಿಚಿತ್ರ ಕಳ್ಳ-ಬಟ್ಟೆ, ರುಚಿ ರುಚಿಯಾದ ಆಹಾರವೇ ಇವನ ಟಾರ್ಗೆಟ್

ಅಪಾಯಕಾರಿ ವಿಡಿಯೋದಲ್ಲಿ ಹುಡುಗ ಕೈ ಬಿಟ್ಟಾಗ ಹುಡುಗಿ ಹುಡುಗನ ಹಿಂದೆ ತಲೆಕೆಳಗಾಗಿ ಬೀಳುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಈ ಸಂದರ್ಭದಲ್ಲಿ ಆಕೆಯ ಕುತ್ತಿಗೆ ಭಾಗಕ್ಕೆ ಗಂಭೀರವಾಗಿ ಪೆಟ್ಟಾಗಿರಬಹುದು ಎಂದು ತೋರುತ್ತದೆ.

ಇದನ್ನೂ ಓದಿ- Trending: ರಭಸವಾಗಿ ಹರಿಯುತ್ತಿರುವ ನದಿಗೆ ಧುಮುಕಿದ 70ರ ಅಜ್ಜಿ, ವಿಡಿಯೋ ನೋಡಿ

ವೈರಲ್ ವಿಡಿಯೋವನ್ನು ಇಲ್ಲಿ ವೀಕ್ಷಿಸಿ:

ಫನ್ನಿ ಫೇಲ್ ವಿಡಿಯೋ ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದ್ದು, ಈ ವೀಡಿಯೊವನ್ನು ಇದುವರೆಗೆ 19 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅವರ ಕತ್ತು ಮುರಿದಿಲ್ಲ ಎಂದು ಭಾವಿಸುತ್ತೇವೆ’ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News