ವೈರಲ್ ವಿಡಿಯೋ: ನೆಲ್ಲೂರು ಕೊಳಚೆ ಕಾಲುವೆ ಸಮಸ್ಯೆಗೆ ಸಂಬಂಧಿಸಿದಂತೆ ನೆಲ್ಲೂರು ನಗರ ಪಾಲಿಕೆ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ನೆಲ್ಲೂರು ಗ್ರಾಮಾಂತರ ಶಾಸಕ ಕೋಟಂರೆಡ್ಡಿ ಶ್ರೀಧರ್ ರೆಡ್ಡಿ ಕೊಳಕು ಚರಂಡಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ.
ಆಂಧ್ರಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕ ಕೊತ್ಮಾರೆಡ್ಡಿ ಶ್ರೀಧರ್ ರೆಡ್ಡಿ, ಹಲವು ಬಾರಿ ಮನವಿ ಸಲ್ಲಿಸಿದರೂ ಸೇತುವೆ ನಿರ್ಮಿಸದಿರುವ ನೆಲ್ಲೂರು ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೆಲ್ಲೂರು ಗ್ರಾಮಾಂತರ 21ನೇ ವಿಭಾಗದ ಉಮ್ಮರೆಡ್ಡಿಗುಂಟಾ ಪ್ರದೇಶದ ಜನರು ಕಳೆದ ಹಲವು ವರ್ಷಗಳಿಂದ ಕೊಳಚೆ ಚರಂಡಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚರಂಡಿ ಸ್ವಚ್ಛತೆಗಾಗಿ ಹಲವು ದಿನಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕಿವಿಗೊಡುತ್ತಿಲ್ಲ ಎಂದು ಬೇಸರದಿಂದ ನುಡಿದರು.
ಇದನ್ನೂ ಓದಿ- Crocodile Video: ಮೊಸಳೆ ಬಾಯಿಯಿಂದ ತನ್ನ ಸ್ನೇಹಿತನನ್ನು ಹೊರತೆಗೆದ ವ್ಯಕ್ತಿ! ವಿಡಿಯೋ ನೋಡಿ
2019ರಲ್ಲಿ ವೈಎಸ್‌ಆರ್‌ಸಿಪಿ ಅಧಿಕಾರಕ್ಕೆ ಬಂದು ಶ್ರೀಧರ್‌ರೆಡ್ಡಿ ಶಾಸಕರಾಗಿ ಪುನರಾಯ್ಕೆಯಾದರೂ ಸಮಸ್ಯೆ ಬಗೆಹರಿಯಲಿಲ್ಲ. ಸ್ಥಳೀಯ ಜನರಿಗೆ ಕೊಳಚೆ ಚರಂಡಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಸೇತುವೆ ನಿರ್ಮಿಸಲು ವಿಳಂಬ ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮಂಗಳವಾರ ಪ್ರದೇಶಕ್ಕೆ ಭೇಟಿ ನೀಡಿದ್ದ ಶಾಸಕರು, ಈ ಸಂದರ್ಭದಲ್ಲಿ ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ನೋಡು ನೋಡುತ್ತಿದ್ದಂತೆ ಚರಂಡಿಗೆ ಇಳಿದು ಕುಳಿತ ಅವರು, ಸಮಸ್ಯೆ ಬಗೆಹರಿಯುವವರೆಗೂ ಅಲ್ಲಿಂದ ಮೇಲೇಳುವುದಿಲ್ಲ ಎಂದರು.
ಇದನ್ನೂ ಓದಿ- 27 ವರ್ಷದಿಂದ ರಜೆಯೇ ಇಲ್ಲದೆ ಕೆಲಸ ಮಾಡಿದ ʼಬರ್ಗರ್ ಕಿಂಗ್ʼಗೆ ಸಿಕ್ತು ಕೋಟಿ ಕೋಟಿ ಹಣ!
ಶಾಸಕರ ಪ್ರತಿಭಟನೆ ವೇಳೆ ಸ್ಥಳಕ್ಕೆ ಧಾವಿಸಿದ ನಗರಸಭೆ ಹಾಗೂ ರೈಲ್ವೆ ಅಧಿಕಾರಿಗಳು ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದರೂ ಒಪ್ಪದ ಶಾಸಕರು ಲಿಖಿತ ರೂಪದಲ್ಲಿ ಭರವಸೆ ನೀಡುವಂತೆ ಆಗ್ರಹಿಸಿದರು. ಬಳಿಕ ಶಾಸಕರ ಒತ್ತಡಕ್ಕೆ ಮಣಿದು ಜುಲೈ 15ರಿಂದ ಸೇತುವೆ ಕಾಮಗಾರಿ ಆರಂಭಿಸಿ ತಿಂಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಲಿಖಿತವಾಗಿ ಭರವಸೆ ನೀಡಿದರು. ನಂತರ ಶಾಸಕ ಶ್ರೀಧರ್‌ರೆಡ್ಡಿ ಪ್ರತಿಭಟನೆಯನ್ನು ಕೈಬಿಟ್ಟರು.
ಜನರ ಸಮಸ್ಯೆಗೆ ಸ್ಪಂದಿಸುವಂತೆ ಆಗ್ರಹಿಸಿ ಚರಂಡಿಗೆ ಇಳಿದು ಪ್ರತಿಭಟನೆ ನಡೆಸಿದ ಶಾಸಕರ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
#WATCH | Andhra Pradesh: YSRCP MLA from Nellore, Kotamreddy Sridhar Reddy sat beside an overflowing drain in Umma Reddy Gunta,with his legs dipped in it, as a mark of protest y'day
He said that despite requesting the officials several times to clean it, they didn't listen to him pic.twitter.com/OAhgGcPlzI
— ANI (@ANI) July 6, 2022
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.