KK Last Video: `ಹಮ್ ರಹೇ ಯಾ ನಾ ರಹೇ ಕಲ್` - ಕೆಕೆ ಹಾಡಿದ ಕೊನೆಯ ಹಾಡು
KK Last Video: ಖ್ಯಾತ ಗಾಯಕ ಕೆಕೆ ಇಹಲೋಕ ತ್ಯಜಿಸಿದ್ದಾರೆ. ಈ ಮಧ್ಯೆ ಕೆಕೆ ಅವರ ಲಾಸ್ಟ್ ಪರ್ಫಾರ್ಮೆನ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಕೆಕೆ ಲಾಸ್ಟ್ ವಿಡಿಯೋ: ಖ್ಯಾತ ಬಾಲಿವುಡ್ ಗಾಯಕ ಕೆಕೆ ಅಂದರೆ ಕೃಷ್ಣಕುಮಾರ್ ಕುನ್ನತ್ ಮಂಗಳವಾರ ರಾತ್ರಿ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಿಧನರಾದರು. ಕೆಕೆ ಅವರಿಗೆ 53 ವರ್ಷ ವಯಸ್ಸಾಗಿತ್ತು. ಸಮಾರಂಭವೊಂದರಲ್ಲಿ ಸುಮಾರು ಒಂದು ಗಂಟೆಗಳ ಕಾಲ ಹಾಡಿದ ನಂತರ, ಕೆಕೆ ಅವರು ತಮ್ಮ ಹೋಟೆಲ್‌ಗೆ ಹಿಂತಿರುಗಿದಾಗ ಅಸ್ವಸ್ಥರಾಗಿದ್ದರು. ತಕ್ಷಣವೇ ಅವರನ್ನು ದಕ್ಷಿಣ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಷ್ಟರಲ್ಲಿ ಅವರು ಕೊನೆ ಉಸಿರೆಳೆದಿರುವುದಾಗಿ ವೈದ್ಯರು ಘೋಷಿಸಿದರು ಎಂದು ವರದಿ ಆಗಿದೆ. ಇದೀಗ ಕೆಕೆ ಅವರ ಲಾಸ್ಟ್ ಪರ್ಫಾರ್ಮೆನ್ಸ್ ವೀಡಿಯೊಗಳು ಹೊರಬಂದಿದ್ದು, ಅದು ತುಂಬಾ ವೈರಲ್ ಆಗುತ್ತಿದೆ.
ಕೆಕೆ ಅವರ ಲಾಸ್ಟ್ ಪರ್ಫಾರ್ಮೆನ್ಸ್ :
ಎರಡು ದಿನಗಳ ಸಂಗೀತ ಕಾರ್ಯಕ್ರಮಗಳ ಅಂಗವಾಗಿ ಕೆಕೆ ಅಂದರೆ ಕೃಷ್ಣಕುಮಾರ್ ಕುನ್ನತ್ ಕೋಲ್ಕತ್ತಾದಲ್ಲಿದ್ದರು. ಸೋಮವಾರವೂ ಕೆಕೆ ಸಂಗೀತ ಕಾರ್ಯಕ್ರಮವಿತ್ತು. ನಿನ್ನೆ ವಿವೇಕಾನಂದ ಕಾಲೇಜಿನಲ್ಲಿ ಕಾರ್ಯಕ್ರಮದಲ್ಲಿ ಕೆಕೆ ಭಾಗವಹಿಸಿದ್ದರು. ಸುಮಾರು ಒಂದು ಗಂಟೆಗಳ ಕಾಲ ಅಲ್ಲಿ ಹಾಡಿದ ನಂತರ, ಕೆಕೆ ಹೋಟೆಲ್‌ಗೆ ಹಿಂತಿರುಗಿದಾಗ, ಅವರು ಅಸ್ವಸ್ಥರಾಗಿದ್ದರು ಎಂದು ತಿಳಿದುಬಂದಿದೆ. ಇದೀಗ ಹೊರಬಂದಿರುವ ವಿಡಿಯೋದಲ್ಲಿ ಕೆಕೆ 'ಹಮ್ ರಹೇ ಯಾ ನಾ ರಹೇ ಕಲ್' ಮತ್ತು 'ಹಮ್ ಬೋತ್ ಕೆ ದರ್ಮಿಯಾನ್' ಹಾಡುಗಳನ್ನು ಹಾಡುತ್ತಿರುವುದನ್ನು ಕಾಣಬಹುದು. ಈ ವೇಳೆ ಕೆಕೆ ಅವರ ಪ್ರದರ್ಶನ ನೋಡಲು ಅಪಾರ ಜನಸ್ತೋಮ ನೆರೆದಿತ್ತು. ಕೆಕೆ ಅವರು ವೇದಿಕೆಯ ಮೇಲೆ ಈ ಹಾಡುಗಳನ್ನು ಹಾಡುತ್ತಿದ್ದರೆ, ಇಡೀ ಪ್ರೇಕ್ಷಕರು ಸಹ ಈ ಹಾಡುಗಳನ್ನು ಗುನುಗುತ್ತಿದ್ದರು.
ವೀಡಿಯೊವನ್ನು ಇಲ್ಲಿ ವೀಕ್ಷಿಸಿ:
ಇದನ್ನೂ ಓದಿ- Singer KK Death: ಜನಪ್ರಿಯ ಗಾಯಕ ಕೆಕೆ ಇನ್ನಿಲ್ಲ
ಕೃಷ್ಣಕುಮಾರ್ ಕುನ್ನತ್ ಅವರ ಹಠಾತ್ ನಿಧನ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಕೆಕೆ ಅವರ ನಿಧನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ರಾಜಕೀಯ, ಕ್ರೀಡೆ ಮತ್ತು ಬಾಲಿವುಡ್‌ಗೆ ಸಂಬಂಧಿಸಿದ ಜನರ ಜೊತೆಗೆ, ಅಭಿಮಾನಿಗಳು ಸಹ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ- ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ ಕೆಜಿಎಫ್ 2..!
ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ ಮತ್ತು ಬೆಂಗಾಲಿ ಸೇರಿದಂತೆ ಹಲವು ಭಾಷೆಗಳ ಹಾಡುಗಳಿಗೆ ಕೆಕೆ ಧ್ವನಿ ನೀಡಿದ್ದಾರೆ. . ಅವರು 'ತುಮ್ ಮೈಲ್', 'ಬಚ್ನಾ ಏ ಹಸೀನೋ', 'ಓಂ ಶಾಂತಿ ಓಂ', 'ಜನ್ನತ್', 'ವೋ ಲಮ್ಹೆ', 'ಗುಂಡಾಯ್', 'ಭೂಲ್ ಭುಲೈಯಾ' ಮತ್ತು 'ಹಮ್ ದಿಲ್ ದೇ ಚುಕೇ ಸನಮ್' ಮುಂತಾದ ಚಿತ್ರಗಳಲ್ಲಿನ ಗಾಯನಕ್ಕೆ ಹೆಸರುವಾಸಿಯಾಗಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.