ʻನಮ್ಮನೆ ಯುವರಾಣಿʼ ಮೀರಾ ಹುಟ್ಟುಹಬ್ಬ : ಬಿಗ್ ಸಪ್ರೈಸ್‌ ನೀಡಿದ ರಕ್ಷಿತ್‌ ಶೆಟ್ಟಿ

ʻನಮ್‌ ಮನೆ ಯುವರಾಣಿʼ ಧಾರವಾಹಿಯಿಂದ ಮೀರಾ ಹಾಗೂ ಅನಿಕೇತ್‌ ಕಾರಣಾಂತರದಿಂದ ಹೊರನಡೆದ್ರು. ಇದೀಗ ಸೀರಿಯಲ್‌ನಲ್ಲಿ ಹೊಸ ಎಳೆಯೊಂದು ಶುರುವಾಗಿದ್ದು ವಿಭಿನ್ನ ರೀತಿಯಲ್ಲಿ ʻನಮ್‌ ಮನೆ ಯುವರಾಣಿʼ ಧಾರಾವಾಹಿ ಸಾಗ್ತಾಯಿದೆ.. 

ʻನಮ್ಮನೆ ಯುವರಾಣಿʼ ಸೀರಿಯಲ್ ಅಂದಾಕ್ಷಣ ನಮಗೆ ಮೊದಲು ನೆನಪಾಗೋದು ಮೀರಾ ಹಾಗೂ ಅನಿಕೇತ್‌ ಜೋಡಿ.. ಅದರಲ್ಲೂ ಮೀರಾ ಅವರ ನಟನೆಗೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. ಮೀರಾ ನೋಡಿ ಅದೆಷ್ಟೋ ಮಂದಿ ಮದುವೆಯಾದ್ರೆ ಮೀರಾಳಂತಾ ಹುಡುಗಿಯನ್ನೇ ಮದುವೆಯಾಗ್ಬೇಕು ಅನ್ನುವ ಕನಸುಗಳನ್ನು ಕೂಡಾ ಕಂಡಿದ್ರು. ಈ ಜೋಡಿಗೆ ಅಭಿಮಾನಿಗಳ ಬಗಳ ಜಾಸ್ತಿಯಿತ್ತು. ಆದ್ರೆ ʻನಮ್‌ ಮನೆ ಯುವರಾಣಿʼ ಧಾರವಾಹಿಯಿಂದ ಮೀರಾ ಹಾಗೂ ಅನಿಕೇತ್‌ ಕಾರಣಾಂತರದಿಂದ ಹೊರನಡೆದ್ರು. ಇದೀಗ ಸೀರಿಯಲ್‌ನಲ್ಲಿ ಹೊಸ ಎಳೆಯೊಂದು ಶುರುವಾಗಿದ್ದು ವಿಭಿನ್ನ ರೀತಿಯಲ್ಲಿ ʻನಮ್‌ ಮನೆ ಯುವರಾಣಿʼ ಧಾರಾವಾಹಿ ಸಾಗ್ತಾಯಿದೆ.. 

1 /4

ನಟಿ ಅಂಕಿತಾ ಅಮರ್ ಆ್ಯಕ್ಟಿಂಗ್ ಸೂಪರ್ ಅನ್ನೋದು ನಿಮಗೆಲ್ಲ ಗೊತ್ತು..  ಮಾತ್ರವಲ್ಲದೆ ಸಖತ್ ಸಿಂಗರ್‌ ಅನ್ನೋದು ಹೇಳಬೇಕಿಲ್ಲ. ಹಾಡನ್ನು ಎಷ್ಟು ಚಂದ ಹಾಡ್ತಾರೋ ಅದಕ್ಕೆ ಸ್ಟೆಪ್ಸ್‌ ಕೂಡಾ ಹಾಗೆ ಹಾಕ್ತಾರೆ. ಈ ಎಲ್ಲದರ ಜೊತೆಗೆ ಅಂಕಿತಾ ಸೂಪರ್‌ ಆಗಿ ಪೈಂಟಿಂಗ್‌ ಕೂಡಾ ಮಾಡ್ತಾರೆ. ಒಟ್ಟಿನಲ್ಲಿ ಮಲ್ಟಿ ಟ್ಯಾಲೆಂಟೆಡ್‌ ಹುಡುಗಿ ಅಂಕಿತಾ ದಿನದಿಂದ ದಿನಕ್ಕೆ ಬೆಳಿತಿದ್ದಾರೆ.. ಅಂಕಿತಾ ಈ ಬೆಳವಣಿಗೆ ಪ್ರತಿಯೊಬ್ಬರಿಗೂ ಸಂತಸ ನೀಡಿದೆ..  ನಮ್‌ ಕಡೆಯಿಂದ ಅಂಕಿತಾ ಅವ್ರಿಗೆ ಬೆಸ್ಟ್‌ ವಿಶ್ಶಸ್..

2 /4

ಮತ್ತೊಂದು ಪ್ರಮುಖ ವಿಚಾರ, ಬಿಗ್‌ ಸಪ್ರೈಸ್‌ ಒಂದು ಅಂಕಿತಾ ಹಾಗೂ ಅವ್ರ ಅಭಿಮಾನಿಗಳಿಗೆ ಸಿಕ್ಕಿದೆ. ಅದೇನಪ್ಪಾ ಅಂದ್ರೆ ಸದ್ಯ ನಟ ರಕ್ಷಿತ್‌ ಶೆಟ್ಟಿ ತಮ್ಮ ಪರಂ ಸ್ಟುಡಿಯೋ ಕಡೆಯಿಂದ ಶುಭಾಶಯ ತಿಳಿಸಿದ್ದಾರೆ.. ಮಾತ್ರವಲ್ಲದೆ ವೆಲ್ಕಮ್‌ ಟು ಪರಂ ಫ್ಯಾಮಿಲಿ ಎಂದಿದ್ದಾರೆ. ಸದ್ಯ ಈ ಸುದ್ದಿ ಎಲ್ಲಡೆ ಸದ್ದು ಮಾಡ್ತಾಯಿದೆ. ಮುಂದೆ ಈ ಬ್ಯಾನರ್‌ ಅಡಿ ಅಂಕಿತಾ ಕೆಲಸ ಮಾಡಲಿದ್ದಾರೆ ಎಂಬ ಪ್ರಶ್ನೆ ಸಾಕಷ್ಟು ಜನರದ್ದಾಗಿದೆ. ಜೊತೆಗೆ  ಅದೆಷ್ಟೋ  ಅಭಿಮಾನಿಗಳು ರಕ್ಷಿತ್‌ ಅವ್ರ ಈ ಪೋಸ್ಟ್‌ ನೋಡಿ ಖುಷಿ ಪಟ್ಟಿದ್ದಾರೆ.. 

3 /4

ನಟಿ ಅಂಕಿತಾ ಕನ್ನಡ ಮಾತ್ರವಲ್ಲದೆ ಪರ ಭಾಷೆಯಲ್ಲಿ ಸಖತ್‌ ಬ್ಯುಸಿ ಎಂಬುವುದು ಎಲ್ಲರಿಗೂ ತಿಳಿದ ವಿಚಾರ.. ಸದ್ಯ ನಟ ಪೃಥ್ವಿ ಅಂಬರ್‌ ಜೊತೆಗೆ ಅಬ ಜಬ ದಬ ಚಿತ್ರದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ತಾಯಿದ್ದು, ಅಂಕಿತಾ ಅವ್ರ ಡೆಬ್ಯು ಚಿತ್ರ ಇದಾಗಿದೆ.. ಆ ಸಿನಿಮಾ ತಂಡ ಅಂಕಿತಾ ಅವ್ರ ಹುಟ್ಟುಹಬ್ಬಕ್ಕೆ ವಿಶೇಷ ರೀತಿಯಲ್ಲಿ ವಿಶ್ಶಸ್‌ ತಿಳಿಸಿದೆ. ಅಂಕಿತಾ ಅಭಿಮಾನಿಗಳು ಕೂಡಾ ವಿಶ್ಶಸ್‌ಗಳ ಸುರಿ ಮಳೆಗೈದಿದ್ದಾರೆ. 

4 /4

ಅಂಕಿತಾ ಅಮರ್‌ ಬಗ್ಗೆ ಹೇಳೋಕೆ ಮತ್ತೊಂದು ವಿಚಾರವಿದೆ. ಅದೇನಪ್ಪಾ ಅಂದ್ರೆ, ಅಂಕಿತಾ ಅವ್ರು ಹುಟ್ಟುಹಬ್ಬ ಮೇ 29ರಂದು ನೆಡೆದಿದೆ. ಅಂಕಿತಾ ತುಂಬಾನೇ ಸಿಂಪಲ್‌ ಹುಡುಗಿ. ಅದೇ ರೀತಿ ಅವ್ರು ತಮ್ಮ ಹುಟ್ಟು ಹಬ್ಬವನ್ನು ತುಂಬಾ ಸಿಂಪಲ್‌ ಆಗಿ ಆಚರಿಸಿಕೊಂಡಿದ್ದಾರೆ..  ಎಂದಿನಂತೆ ಅಂಕಿತಾ ಹುಟ್ಟುಹಬ್ಬದಂದು ನಟ ದೀಪಕ್‌ ಹಾಗೂ ರಘು ಮೀಟ್‌ ಮಾಡಿ ಸಪ್ರೈಸ್‌ ನೀಡಿದ್ದಾರೆ.. ಇಷ್ಟು ದಿನ ಪ್ರೇಕ್ಷಕರು ಮಿಸ್‌ ಮಾಡಿಕೊಳ್ತಾಯಿದ್ದ ಮೀರಾ ಹಾಗೂ ಅನಿಯನ್ನು ಒಟ್ಟಿಗೆ ನೋಡಿ ಕಣ್ತುಂಬಿಕೊಂಡಿದ್ದಾರೆ..