Viral Story : ನಾಗರಹಾವು ನಾಗಮಣಿ ಇವುಗಳ ಬಗ್ಗೆ ಬಹಳಷ್ಟು ಕತೆಗಳನ್ನು ಕೇಳಿದ್ದೇವೆ. ಸಿನಿಮಾ ಧಾರಾವಾಹಿಗಳನ್ನು ನೋಡಿದ್ದೇವೆ. ಯಾರ ಬಳಿ ನಾಗಮಣಿ ಇರುತ್ತದೆಯೋ ಅವರು ಈ ಭೂಮಿಯ ಶಕ್ತಿ ಶಾಲಿ ಮನುಷ್ಯರಾಗುತ್ತಾನೆ ಎನ್ನುವುದು ಬಹುತೇಕ ಕತೆಗಳಲ್ಲಿ ಕೇಳಿದ ವಾಕ್ಯ. ಆದರೆ ನಾಗಮಣಿ ನಿಜವಾಗಿಯೂ ಇದೆ ಎನ್ನುವುದನ್ನು ಇಲ್ಲಿಯವರೆಗೆ ಕಂಡವರಿಲ್ಲ. ಒಂದು ನಂಬಿಕೆಯ ಪ್ರಕಾರ 100 ವರ್ಷ ಪುರಾತನ ಹಾವುಗಳಲ್ಲಿ ನಾಗಮಣಿ ಇರುತ್ತದೆ ಎನ್ನುವುದು.  ಹಾವು ಅಷ್ಟು ವರ್ಷ ಬದುಕುತ್ತದೆಯೇ ಎನ್ನುವ ಪ್ರಶ್ನೆ ನಿಮ್ಮ ಮನದಲ್ಲಿ ಏಳಬಹುದು. ಆದರೆ ಹಾವು 100 ವರ್ಷಕ್ಕಿಂತ ಹೆಚ್ಚು ಬದುಕಬಲ್ಲದು. ಹಾವು ನೈಸರ್ಗಿಕವಾಗಿ 108 ವರ್ಷಗಳವರೆಗೆ ಬದುಕಬಲ್ಲದು ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಇದೀಗ ಹಾವು ಮತ್ತು ಅದರ ಮಣಿಗೆ ಸಂಬಂಧಿಸಿದ ಸುದ್ದಿಯೊಂದು ವೈರಲ್ ಆಗಿದೆ. ಇದರ ಪ್ರಕಾರ, ಇದು ಚೀನಾದ ನಗರವೊಂದರಲ್ಲಿ ನಡೆದ ಘಟನೆ.  ವಾಂಗ್ ಎನ್ನುವ ವ್ಯಕ್ತಿ ವಾಕಿಂಗ್ ಹೋಗುತ್ತಿದ್ದ ವೇಳೆ ಬಹಳ ಹಳೆಯ ಹಾವು ಅವರ ಕಣ್ಣಿಗೆ ಬಿದ್ದಿದೆ. ನೀರಿನಿಂದ ಹೊರಗಿದ್ದ ಈ ಹಾವನ್ನು ವಾಂಗ್ ಮತ್ತೆ ತೆಗೆದುಕೊಂಡು ಹೋಗಿ ನೀರಿಗೆ ಬಿಟ್ಟಿದ್ದಾರೆ. ಆದರೆ ಇದಾದ ಬಳಿಕ ಅನಿರೀಕ್ಷಿತ ಘಟನೆಯೊಂದು ನಡೆದಿದೆ. 


ಇದನ್ನೂ ಓದಿ : ವಿಡಿಯೋ ನೋಡಿ...! ಬಾಯ್ ಫ್ರೆಂಡ್ ಜೊತೆಗೆ ಹಟಕ್ಕೆ ಬಿದ್ದು ಪಂಜಾಗಿಳಿದ ಪೋರಿ, ನಂತರ ನಡೆದಿದ್ದು ಮಾತ್ರ ಶಾಕಿಂಗ್ ಆಗಿದೆ!


ಕೆಲ ದಿನಗಳ ಬಳಿಕ ಈ ಹಾವು ಮತ್ತೆ ವಾಂಗ್ ಅವರ ಕಣ್ಣಿಗೆ ಬಿದ್ದಿದೆ. ಆದರೆ ಈ ಬಾರಿ ವಾಂಗ್ ಅವರಿಗೆ ಉಡುಗೊರೆ ನೀಡಲೆಂದೇ ಆ ಹಾವು ಬಂದಿತ್ತಂತೆ. ತನ್ನ ಬಾಯಿಯಿಂದ ನಾಗಮಣಿಯನ್ನು ಹೊರ ಹಾಕಿ ವಾಂಗ್ ಗೆ ನೀಡಿದೆಯಂತೆ. ಈ ಕತೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ. 


ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾದ ಈ ವೈರಲ್ ಸುದ್ದಿ ನೋಡಿದ ಮೇಲೆ ಒಂದು ಬಾರಿ ಈ ವಿಡಿಯೋದತ್ತ ಕೂಡಾ ಗಮನ ಹರಿಸಿ : 


Viral Video: ಯಾವುದೇ ಸುರಕ್ಷತೆ ಇಲ್ಲದೆ ಟ್ರಾನ್ಸ್ಫಾರ್ಮರ್ ಗೆ ತಂತಿ ಜೋಡಿಸಿದ ಹುಡುಗ, ನೋಡಿ ದಂಗಾದ ನೆಟ್ಟಿಗರು!


ಇಲ್ಲಿ ನಿಜವಾಗಿಯೂ ನಾಗಮಣಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ವಾಂಗ್  ಅವರ ಕತೆ ಮಾತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. 


( ಸೂಚನೆ : ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಇಲ್ಲಿ ಹೇಳಲಾಗಿದೆ. ಇದರ ಸತ್ಯಾಸತ್ಯತೆಯನ್ನು ಜೀ kannada ನ್ಯೂಸ್ ಖಚಿತ ಪಡಿಸುವುದಿಲ್ಲ. )  


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.