Tiger claw pendent case : ಹುಲಿ ಉಗುರಿನ ವಿಚಾರ ರಾಜ್ಯದಲ್ಲಿ ತಾರಕಕ್ಕೇರುತ್ತಿದೆ. ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನದಿಂದ ಪ್ರಾರಂಭವಾದ ಪ್ರಕರಣ ಇದೀಗ ಸ್ಯಾಂಡಲ್ವುಡ್ ದಿಗ್ಗಜ ನಟರಿಗೆ ಸಂಕಷ್ಟ ತಂದಿದೆ. ಇದರ ಬೆನ್ನಲ್ಲೆ ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಯೊಂದು ಮುನ್ನೆಲೆಗೆ ಬಂದಿದೆ.
ಹೌದು.. ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಒಂದಲ್ಲ ಒಂದು ವಿಚಾರದ ಕುರಿತು ನೆಟ್ಟಿಜನ್ಸ್ ಚರ್ಚೆ ಮಾಡುತ್ತಲೇ ಇರುತ್ತಾರೆ. ಇತ್ತೀಚಿಗೆ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಹಿನ್ನೆಲೆ ಅವರ ಬಂಧನವಾಗಿತ್ತು. ಈ ಕುರಿತು ನೆಟ್ಟಿಗರು ಚರ್ಚೆ ಶುರು ಮಾಡಿ ಶೋಧ ನಡೆಸಿ ಕೆಲವು ನಟರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಫೋಟೋ ಶೇರ್ ಮಾಡಿದ್ದರು.
ಇದನ್ನೂ ಓದಿ:ನಟ ದರ್ಶನ್ ಮನೆಯಲ್ಲಿ 8 ಹುಲಿ ಉಗುರಿನ ಪೆಂಡೆಂಟ್ ಪತ್ತೆ..! ಅಸಲಿ ಅಥವಾ ನಕಲಿ..?
ಅಲ್ಲದೆ, ಒಬ್ಬ ಕಾಮನ್ಮ್ಯಾನ್ ಬಂಧಿಸಿದಂತೆ ಹುಲಿ ಉಗುರನ್ನು ಹೊಂದಿರುವ ನಟರ ಮೇಲೂ ಕಠಿಣ ಕ್ರಮಕೈಗೊಳ್ಳಿ ಅಂತ ಆಕ್ರೋಶ ಹೊರ ಹಾಕಿದ್ದಾರೆ. ಕಾನೂನುಗಳು ಬರೀ ಸಾಮಾನ್ಯ ಜನರಿಗಷ್ಟೇ ಅಂತ ಅಸಾಮಾಧಾನ ಹೊರ ಹಾಕಿದ್ದರು. ಇನ್ನು ತಾವು ಧರಿಸಿದ್ದು ನಿಜವಾದ ಹುಲಿ ಉರುಗು ಎಂದು ಹೇಳಿದ್ದ ನಟ ಜಗ್ಗೇಶ್ ಅವರನ್ನು ಬಂಧಿಸುವಂತೆ ನೆಟ್ಟಿಗರು ಒತ್ತಾಯಿಸಿದ್ದರು.
ಇದೀಗ ಇದೇಲ್ಲದರ ನಡುವೆ ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದೆ. ಹುಲಿ ಉಗುರಿನ ವಿಚಾರ ಇಷ್ಟೊಂದು ಸದ್ದು ಮಾಡುತ್ತಿದೆ. ಆದ್ರೆ ಗೋ ಮಾತೆ ವಿಚಾರಕ್ಕೆ ಬಂದಾಗ ಇಂತಹ ರೂಲ್ಸ್ ಏಕೆ ಇಲ್ಲ. ಸತತವಾಗಿ ಗೋವಿನ ಹತ್ಯೆ ನಡೆಯುತ್ತಲೇ ಇದೆ ಆದ್ರೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಇದನ್ನೂ ತಡೆಯುತ್ತಿಲ್ಲ ಅಂತ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ʼಲಿಯೋʼ ಚಿತ್ರದಲ್ಲಿ ನಟಿಸಿದ ಈ ಪುಟ್ಟಿ ಹುಡುಗಿ ಯಾರ್ ಗೊತ್ತಾ? 'ಇವಳು' ನಟನ ಮಗಳು..!
ಈ ಕುರಿತು ಟ್ರೋಲ್ಗಳು ಸಹ ನಡೆಯುತ್ತಿವೆ. ಹಲವಾರು ಪತ್ರಿಕೆಗಳಲ್ಲಿ ವ್ಯಂಗ್ಯ ಚಿತ್ರಗಳೂ ಸಹ ಮೂಡಿಬಂದಿವೆ. ವ್ಯಾಘ್ರನ ಉರುರಿಗೆ ಇಷ್ಟು ಮಹತ್ವ ಇರುವಾಗ, ಹಾಲನ್ನ ನೀಡಿ ತಾಯಿಯಂತೆ ರಕ್ಷಿಸುವ ಗೋವುಗಳ ವಧೆಯಾಗುತ್ತಿದ್ದರೂ ಇಂತಹ ಕಾನೂನು ಅವುಗಳಿಗೆ ಏಕೆ ಅನ್ವಯಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.