ಬೆಂಗಳೂರು : ಸಿಂಹ ಅತ್ಯಂತ ಶಕ್ತಿ ಶಾಲಿ ಪ್ರಾಣಿ. ಅದರ ಘನ ಗಾಂಭೀರ್ಯ ನಡೆಗೆ ಯಾರಾದರೂ ಮನ ಸೋಲಲೇ ಬೇಕು. ಅದರ ಶಕ್ತಿ , ಬುದ್ದಿವಂತಿಕೆ, ಅ ರಾಜ ಗಾಂಭೀರ್ಯದ ಕಾರಣದಿಂದಲೇ ಇರಬೇಕು ಸಿಂಹವನ್ನು ಕಾಡಿನ ರಾಜ ಎಂದು ಕರೆಯುವುದು. ಸಿಂಹ, ಹುಲಿ, ಚಿರತೆ ಮುಂತಾದ ಕಾಡು ಪ್ರಾಣಿಗಳನ್ನು ಕಂಡು ಸಣ್ಣ ಪುಟ್ಟ ಪ್ರಾಣಿಗಳು ಹೆದರಿ ಓಡುವುದು ಸಹಜ. ಯಾಕಂದರೆ ಈ  ಆ ಸಣ್ಣ ಪುಟ್ಟ ಪ್ರಾಣಿಗಳು, ಬಲಿಷ್ಠ ಪ್ರಾಣಿಗಳಿಗೆ ಸುಲಭ ತುತ್ತಾಗಿ ಬಿಡುತ್ತವೆ. ಈ ಕಾರಣಕ್ಕೆ ಹೆದರುವ ಪ್ರಾಣಿಗಳು ಸಿಂಹ ಹುಲಿಯಂಥಹ ಪ್ರಾಣಿಗಳು ಸನಿಹದಲ್ಲಿವೆ ಎಂದು ತಿಳಿಯುತ್ತಿದ್ದಂತೆಯೇ ವಿಚಿತ್ರ ಶಬ್ದವನ್ನು ಮಾಡುತ್ತಾ ತಮ್ಮ ಸಂಗಡಿಗರಿಗೆ ಎಚ್ಚರಿಕೆಯ ಸಂದೇಶ ರವಾನಿಸಿ ಬಿಡುತ್ತವೆ.  


COMMERCIAL BREAK
SCROLL TO CONTINUE READING

ಆದರೆ ಈಗ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ.  ಇದು ಸಿಂಹ ಮತ್ತು ಕೋತಿಗೆ ಸಂಬಂಧಪಟ್ಟ ವಿಡಿಯೋ. ಈ ವಿಡಿಯೋ ನೋಡಿದಾಗ ಎಂಥವರಿಗೂ ಒಂದು ಕ್ಷಣ ಆಶ್ಚರ್ಯವಾಗುವುದು ಖಂಡಿತಾ. ಹೌದು ಇಲ್ಲಿ ಕೋತಿ ಸಿಂಹದ ಬೆನ್ನ ಮೇಲೆ ಕುಳಿತು ಸವಾರಿ ಹೊರಟಿದೆ.  ತನ್ನ ಪಾಡಿಗೆ ಎರಡು ಸಿಂಹಗಳು ಅದರ ಎಂದಿನ ಗತ್ತಿನಿಂದಲೇ ಹೆಜ್ಜೆ ಹಾಕುತ್ತಿದೆ. ಈ  ಮಧ್ಯೆ, ಮರದ ಮೇಲಿನಿಂದ ಹಾರಿದ  ಕೋತಿಯೊಂದು ಸಿಂಹದ ಬೆನ್ನ ಮೇಲೆ ಬಂದು ಲ್ಯಾಂಡ್ ಆಗಿದೆ. 


ಇದನ್ನೂ ಓದಿ : viral video: ಒತ್ತಾಯವಾಗಿ ಸಿಹಿ ತಿನಿಸಲು ಮುಂದಾದ ವರ.! ಒಪ್ಪದ ವಧು ಮದುವೆ ಮಂಟಪದಲ್ಲಿಯೇ ಕಾದಾಟ
  
 ಆಶ್ಚರ್ಯವೆಂದರೆ ಇಲ್ಲಿ ಸಿಂಹ ಕೋತಿಗೆ ಏನೂ ಮಾಡದೇ ತನ್ನ ಬೆನ್ನ ಮೇಲೆ ಕೂರಿಸಿಕೊಂಡು ನಡೆಯುತ್ತಿದೆ. ಕೋತಿ ಕೊಡಾ ಯಾವುದೋ ದ್ವಿಚಕ್ರ ವಾಹನದಲ್ಲಿ ಕುಳಿತಿರುವಂತೆ ಕುಳಿತಿದೆ. ಕೋತಿ ಕುಳಿತಿರುವ ರೀತಿ ನೋಡುಗರಿಗೆ ನಗು ಕೂಡಾ ತರಿಸುತ್ತದೆ. 


Viral Video: ಬೀದಿ ವ್ಯಾಪಾರಿ ತಯಾರಿಸಿದ ಜಗತ್ತಿನ ಅತಿ ದೊಡ್ಡ ಜಿಲೇಬಿ ನೋಡಿದ್ದಿರಾ?
   
ಕೆಲವೇ ಸೆಕೆಂಡ್ ಗಳ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ  ವೈರಲ್ ಆಗುತ್ತಿದೆ. ಈ ವೀಡಿಯೊವನ್ನು @DrVivekBindra ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯೆಗಳು ಕೂಡಾ ವ್ಯಕ್ತವಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.