Snake Video : ಕಚ್ಚಲು ಬಂದ ಹಾವನ್ನು ತುಳಿದು ಕೊಂದ ವಿಚಿತ್ರ ಪಕ್ಷಿ

Snake Video : ಬೇಟೆಯಾಡುವಾಗ ನೀವು ಹದ್ದನ್ನು ನೋಡಿರಬೇಕು. ಅದು ಆಕಾಶದ ಎತ್ತರದಿಂದ ಹಲವು ಕಿಲೋಮೀಟರ್ ಕೆಳಗೆ ಸ್ಪಷ್ಟವಾಗಿ ನೋಡಬಹುದು. ಹದ್ದು ಸಮುದ್ರದಿಂದಲೂ ತನ್ನ ಬೇಟೆಯನ್ನು ಹಿಡಿಯಬಲ್ಲದು ಮತ್ತು ಹಾವನ್ನು ಸಹ ಸುಲಭವಾಗಿ ಬೇಟೆಯಾಡಬಲ್ಲದು. 

Written by - Chetana Devarmani | Last Updated : Dec 11, 2022, 06:22 PM IST
  • ಕಚ್ಚಲು ಬಂದ ಹಾವನ್ನು ತುಳಿದು ಕೊಂದ ವಿಚಿತ್ರ ಪಕ್ಷಿ
  • ಇದು ಹದ್ದಲ್ಲ ಆದರೂ ಹಾವನ್ನು ಸದೆಬಡೆದ Brave Bird
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Snake Video : ಕಚ್ಚಲು ಬಂದ ಹಾವನ್ನು ತುಳಿದು ಕೊಂದ ವಿಚಿತ್ರ ಪಕ್ಷಿ  title=
ಹಾವನ್ನು ಕೊಂದ ಪಕ್ಷಿ 

Snake Video : ಬೇಟೆಯಾಡುವಾಗ ನೀವು ಹದ್ದನ್ನು ನೋಡಿರಬೇಕು. ಅದು ಆಕಾಶದ ಎತ್ತರದಿಂದ ಹಲವು ಕಿಲೋಮೀಟರ್ ಕೆಳಗೆ ಸ್ಪಷ್ಟವಾಗಿ ನೋಡಬಹುದು. ಹದ್ದು ಸಮುದ್ರದಿಂದಲೂ ತನ್ನ ಬೇಟೆಯನ್ನು ಹಿಡಿಯಬಲ್ಲದು ಮತ್ತು ಹಾವನ್ನು ಸಹ ಸುಲಭವಾಗಿ ಬೇಟೆಯಾಡಬಲ್ಲದು. ಆದರೆ ಈಗ ಇಲ್ಲೊಂದು ಹಕ್ಕಿಯ ವಿಡಿಯೋ ಮುನ್ನೆಲೆಗೆ ಬಂದಿದ್ದು, ಇದರ ಹೆಸರು ಕೇಳಿದವರು ಬಹಳ ಕಡಿಮೆ. Gaviao ಎಂಬ ಹೆಸರಿನ ಈ ಪಕ್ಷಿ ನಾಗರಹಾವಿನಂತಹ ವಿಷಕಾರಿ ಹಾವುಗಳನ್ನು ಸುಲಭವಾಗಿ ಬೇಟೆಯಾಡುತ್ತದೆ.

ಇದನ್ನೂ ಓದಿ : Viral Video: ಜೀವಂತ ಹಾವನ್ನು ನುಂಗಿದ ಮತ್ತೊಂದು ಹಾವು! ಶಾಕಿಂಗ್‌ ವಿಡಿಯೋ ವೈರಲ್‌

ಇದೀಗ ಅಂತಹ ಒಂದು ಆಘಾತಕಾರಿ ವಿಡಿಯೋ ಮುನ್ನೆಲೆಗೆ ಬಂದಿದ್ದು, ಈ ಪಕ್ಷಿಯು ನೆಲದ ಮೇಲೆ ತೆವಳುತ್ತಿದ್ದ ಅಪಾಯಕಾರಿ ಹಸಿರು ಬಣ್ಣದ ಹಾವಿನ ಮೇಲೆ ದಾಳಿ ಮಾಡಿದೆ. ಒಂದೇ ಒಂದು ಹೊಡೆತದಲ್ಲಿ ಅದರ ಬಾಲವನ್ನು ಹಿಡಿದು ಇನ್ನೊಂದು ಪಂಜದಲ್ಲಿ ಮಧ್ಯದ ಭಾಗವನ್ನು ಒತ್ತಿ ಹಿಡಿದಿದೆ. ಆದರೆ ಕೋಪಗೊಂಡ ಹಾವು ತಕ್ಷಣವೇ ಈ ಪಕ್ಷಿಯ ಮುಖವನ್ನು ಕಚ್ಚಲು ಪ್ರಾರಂಭಿಸಿತು. ಆದರೆ ಬುಲೆಟ್‌ನ ವೇಗದಲ್ಲಿ, ಹಕ್ಕಿ ಹಾವಿನ ಹೆಡೆಯನ್ನು ಹಿಡಿದು ತನ್ನ ಬೇಟೆಯಾಡಿದೆ. ಹಕ್ಕಿ ಹಾವನ್ನು ಬೇಟೆಯಾಡುವ ರೀತಿ ನೋಡುಗರಲ್ಲಿ ಭಯ ಹುಟ್ಟಿಸುವಂತಿದೆ.

 

 

Gaviao ಎಂಬ ಹೆಸರಿನ ಈ ಹಕ್ಕಿ ಹಾವನ್ನು ಬೇಟೆಯಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. animals_powers ಹೆಸರಿನ Instagram ಖಾತೆಯಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋ ನೋಡಿ ಅಪಾರ ಸಂಖ್ಯೆಯ ನೆಟಿಜನ್‌ಗಳು ಬೆಚ್ಚಿಬಿದ್ದಿದ್ದಾರೆ. ಇದು ಇಲ್ಲಿಯವರೆಗೆ ಸಾವಿರಾರು ಲೈಕ್ಸ್ ಮತ್ತು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ :  Viral Video : ಹಾವಿನ ಜೊತೆ ಹುಚ್ಚಾಟ ತಲೆಕೆಟ್ಟು ಸರ್ಪ ಕಚ್ಚಿದ್ದೆಲ್ಲಿ ನೋಡಿ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News