ನವದೆಹಲಿ: ಜಲೇಬಿ ನಿಸ್ಸಂದೇಹವಾಗಿ ಭಾರತದ ಅತ್ಯಂತ ಪ್ರಿಯವಾದ ಸಿಹಿತಿಂಡಿಗಳಲ್ಲಿ ಒಂದಾಗಿದೆ. ಇದನ್ನು ನೋಡಿದಾಗಲೆಲ್ಲಾ ಬಾಯಲ್ಲಿ ನೀರು ಬರುವುದಂತು ಖಂಡಿತ.
ಆದರೆ ಈಗ ನಾವು ನಿಮಗೆ ಹೇಳಲು ಹೊರಟಿರುವುದು ಸಾಮಾನ್ಯ ಜೀಲೆಬಿಯ ಬಗ್ಗೆ ಅಲ್ಲಾ, ಬದಲಾಗಿ ಜಗತ್ತಿನ ಅತಿ ದೊಡ್ಡ ಜಿಲೇಬಿ ಬಗ್ಗೆ, ಹೌದು, ಲಕ್ನೋದ ಬೀದಿ ವ್ಯಾಪಾರಿಯೊಬ್ಬ ಜಗತ್ತಿನ ಅತಿ ದೊಡ್ಡ ಜಿಲೇಬಿಯನ್ನು ತಯಾರಿಸುವುದರ ಮೂಲಕ ಈಗ ಎಲ್ಲರ ಗಮನ ಸೆಳೆದಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಬಿಎಂಟಿಸಿಯ ಎಂಟು ಭ್ರಷ್ಟ ಅಧಿಕಾರಿಗಳು ಸಸ್ಪೆಂಡ್
ಫುಡ್ ಬ್ಲಾಗರ್ ನೊಬ್ಬ ತಮ್ಮ 'eattwithsid ಪುಟದಲ್ಲಿ ಜಗತ್ತಿನ ಅತಿ ದೊಡ್ಡ ಜೀಲೆಬಿ ಎಂದು ಪೋಸ್ಟ್ ಮಾಡಿದ್ದಾರೆ.ಈ ವಿಡಿಯೋದಲ್ಲಿ ಮುನ್ಷಿ ಪುಲಿಯಾ ಚೌರಾಹಾ ಎಂಬ ಲಕ್ನೋ ಬೀದಿಯ ಅಂಗಡಿ ವ್ಯಾಪಾರಿಯು ಗರಿಗರಿಯಾದ ಬಹುತೇಕ ಕೆಂಪು ಬಣ್ಣಕ್ಕೆ ತಿರುಗುವ ಬೃಹತ್ ಜೀಲೆಬಿಯನ್ನು ತಯಾರಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದ್ದು, ಸುಮಾರು ಒಂದು ಮಿಲಿಯನ್ ವಿಕ್ಷನೆಯನ್ನು ಕಂಡಿದೆ, ಕೆಲವರು ಈ ಜಿಲೇಬಿ ಬಗ್ಗೆ ಹೊಗಳಿದರೆ ಇನ್ನು ಕೆಲವು ಇದರ ಬಗ್ಗೆ ಟೀಕೆ ಮಾಡಿದ್ದಾರೆ.
ಬೀದಿ ಆಹಾರ ಮಾರಾಟಗಾರರು ಬೀದಿ ಆಹಾರಗಳ ಗಾತ್ರದ ಆವೃತ್ತಿಗಳನ್ನು ರಚಿಸುವ ಮೂಲಕ ತಮ್ಮ ಸೃಜನಶೀಲ ಕೌಶಲ್ಯಗಳನ್ನು ಸಂಪೂರ್ಣ ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಇತ್ತೀಚೆಗೆ ಮೀರತ್ ಬೀದಿ ವ್ಯಾಪಾರಿಯೊಬ್ಬರು 8 ಕೆಜಿ ತೂಕದ ದೊಡ್ಡ ಸಮೋಸವನ್ನು ರಚಿಸಿದ್ದಾರೆ. ಅದಕ್ಕೆ ‘ಬಾಹುಬಲಿ ಸಮೋಸ’ ಎಂದು ಹೆಸರಿಡಲಾಗಿದೆ.
ಮತ್ತೊಂದು ವರದಿಯಲ್ಲಿ, ಚೀನಾದ ವ್ಯಕ್ತಿಯೊಬ್ಬರು ಬೃಹತ್ ಪ್ಯಾನ್‌ಕೇಕ್ ಅನ್ನು ತಯಾರಿಸಿದ್ದಾರೆ ಮತ್ತು ಜನರು ಅದನ್ನು 'ದೈತ್ಯ ದೋಸೆ' ಎಂದು ಕರೆಯುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.