Viral Video : ಗುರುವಿಗೆ ನಮ್ಮ ಜೀವನದಲ್ಲಿ ವಿಶೇಷ ಸ್ಥಾನವಿದೆ. ಗುರುವನ್ನು ದೇವರಿಗೆ ಹೋಲಿಸಲಾಗುತ್ತದೆ. ಮಕ್ಕಳನ್ನು ಶಾಲೆಗೆ ಕಳುಹಿಸಿದ ನಂತರ ಶಾಲೆಯಲ್ಲಿ ತಮ್ಮ ಮಕ್ಕಳನ್ನು ನೋಡಿಕೊಳ್ಳಲು, ತಿದ್ದಿ ತೀಡಲು ಶಿಕ್ಷಕರಿದ್ದಾರೆ ಎನ್ನುವ ಧೈರ್ಯದಿಂದಲೇ ಹೆತ್ತವರು ನಿರಾಳವಾಗಿರುತ್ತಾರೆ. ಮಕ್ಕಳ ಜೀವನದಲ್ಲಿ  ಹೆತ್ತವರ ಪಾತ್ರ ಎಷ್ತಿರುತ್ತದೆಯೋ ಶಿಕ್ಷಕರ ಪಾತ್ರ ಕೂಡಾ ಅಷ್ಟೇ ಇರುತ್ತದೆ. ತಂದೆ ತಾಯಿಯ ಜೊತೆ ಎಷ್ಟು ಹೊತ್ತು ಮಕ್ಕಳಿರುತ್ತಾರೆಯೋ, ಶಿಕ್ಷಕರ ಬಳಿಯೂ ಮಕ್ಕಳು ಅಷ್ಟೇ ಸಮಯವನ್ನು ಕಳೆಯುತ್ತಾರೆ. ಹಾಗಾಗಿ ಶಿಕ್ಷಕರು ಕೂಡಾ ಮಕ್ಕಳ ಜೀವನದಲ್ಲಿ ಹೆತ್ತವರಷ್ಟೇ ಪ್ರಾಮುಖ್ಯತೆ ಪಡೆದಿರುತ್ತಾರೆ. 


COMMERCIAL BREAK
SCROLL TO CONTINUE READING

ಇಂದಿನ ಕಾಲದಲ್ಲಿ ಯಾರ ಮೇಲೂ ಸಂಪೂರ್ಣ ಭರವಸೆ ಇಡುವುದು ಅಂದುಕೊಂಡಂತೆ ಸುಲಭವಲ್ಲ. ನಮ್ಮ ಸುತ್ತ ಮುತ್ತ ನಡೆಯುವ ಘಟನೆಗಳನ್ನು ನೋಡುತ್ತಿದ್ದರೆ, ಪ್ರತಿಯೊಬ್ಬರನ್ನು ಕಾಮಾಲೆ ಕಣ್ಣಿನಿಂದಲೇ ನೋಡುವ ಸ್ಥಿತಿ ಎದುರಾಗಿದೆ. ಇದೀಗ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದು ಶಿಕ್ಷಕ ಮತ್ತು ವಿದ್ಯಾರ್ಥಿನಿಯರ ವಿಡಿಯೋ. 


ಇದನ್ನೂ ಓದಿ : Viral Video: ಪಬ್ಲಿಕ್’ನಲ್ಲಿಯೇ ಲಿಪ್’ಲಾಕ್ ಮಾಡಿಕೊಂಡ ಸ್ಟಾರ್ ನಟ-ನಟಿ: ಇವರ ‘ಪ್ರೇಮ್ ಕಹಾನಿ’ಯ ವಿಡಿಯೋ ನೋಡಿ


ಈ ವಿಡಿಯೋದಲ್ಲಿ ಒಬ್ಬ ಶಿಕ್ಷಕ ಮತ್ತು  ಇಬ್ಬರು ವಿದ್ಯಾರ್ಥಿನಿಯರನ್ನು ಕಾಣಬಹುದು. ಇದು ಪಾರ್ಕ್ ವೊಂದರ ದೃಶ್ಯ ಎನ್ನುವುದು ವಿಡಿಯೋ ನೋಡುವಾಗ ತಿಳಿಯುತ್ತದೆ. ಇಲ್ಲಿ ಶಿಕ್ಷಕ ವಿದ್ಯಾರ್ಥಿನಿಯರ ಜೊತೆ ನಡೆದುಕೊಳ್ಳುತ್ತಿರುವ ರೀತಿ ಎಲ್ಲರೂ ಪ್ರಶ್ನಿಸುವ ಹಾಗಿದೆ. ಈ ಶಿಕ್ಷಕನ ವರ್ತನೆ ಇಡೀ ಶಿಕ್ಷಕ ಕುಲವೇ ತಲೆ ತಗ್ಗಿಸುವ ಹಾಗಿದೆ. 


 


Viral Video: ಸೀರೆಯಲ್ಲಿ ಫುಟ್ಬಾಲ್ ಆಡಿದ ಮಹಿಳೆಯರು : ವಿಡಿಯೋ ಫುಲ್‌ ವೈರಲ್‌ 


ಈ ವಿಡಿಯೋವನ್ನು bihari.broo ಎನ್ನುವ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ಶೇರ್  ಮಾಡುತ್ತಿದ್ದಂತೆಯೇ ನೆಟ್ಟಿಗರು ನೆಗೆಟಿವ್ ಕಾಮೆಂಟ್ ಗಳನ್ನೂ ಮಾಡುತ್ತಿದ್ದಾರೆ. 


 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.