ಬೆಂಗಳೂರು : Snake Drinking Water : ಸಾಮಾಜಿಕ ಜಾಲತಾಣಗಳು ನಮ್ಮ ಬದುಕಿನ ಒಂದು ಭಾಗವಾಗಿ ಬೆಸೆದುಕೊಂಡಿವೆ. ಇಲ್ಲಿ ಬರುವ ಅನೇಕ ವಿಷಯಗಳು ನಮ್ಮ ಸುತ್ತಮುತ್ತಲಿನ ಬದುಕಿಗೆ ಸಂಬಂಧಪಟ್ಟಿರುತ್ತವೆ. ಇಲ್ಲಿ ಕಾಣ ಸಿಗುವ ವಿಡಿಯೋ, ಫೋಟೋ ಗಳ ಮೂಲಕ ಬದುಕಿನ ಪಾಠಗಳನ್ನೂ ಕಲಿಯುತ್ತೇವೆ.  ಈ ಫೋಟೋಗಳು ಮತ್ತು ವೀಡಿಯೊಗಳು ನಮಗೆ ಅನೇಕ ಸಂದೇಶಗಳನ್ನು ರವಾನಿಸುತ್ತವೆ.  ಇಲ್ಲಿ ಮದುವೆಗೆ ಸಂಬಂಧ ಪಟ್ಟ ವಿಡಿಯೋಗಳನ್ನು ವೈರಲ್ ಮಾಡಲಾಗುತ್ತದೆ. ಮಕ್ಕಳ  ವಿಡಿಯೋ, ಪ್ರಾಣಿಗಳ ವಿಡಿಯೋಗಳನ್ನೂ ಅಪ್ಲೋಡ್ ಮಾಡಲಾಗುತ್ತದೆ. ಪ್ರತಿಯೊಂದು ವಿಭಾಗದ ವಿಡಿಯೋಗಳಿಗೆ ಅದರದ್ದೇ ಆದ ಅಭಿಮಾನಿ ಬಳಗವಿದೆ. 


COMMERCIAL BREAK
SCROLL TO CONTINUE READING

ಇನ್ನು ಪ್ರಾಣಿಗಳ ವಿಡಿಯೋಗಳ ಪೈಕಿ ಜನರನ್ನು ಹೆಚ್ಚು ಆಕರ್ಷಿಸುವುದು ಹಾವುಗಳ ವಿಡಿಯೋ.  ಹಾವುಗಳನ್ನು ಕಂಡರೆ ಕೈ ಕಾಲು ನಡುಕ ಬರುತ್ತದೆ ಎನ್ನುವುದು ಸತ್ಯ. ಆದರೆ ಅದೇ ಹಾವುಗಳ ವಿಡಿಯೋಗಳನ್ನು ಇಂಟರ್ ನೆಟ್ ನಲ್ಲಿ ಅಪ್ ಲೋಡ್ ಮಾಡಿದರೆ ಸಾಕು ಅರೆ ಕ್ಷಣದಲ್ಲಿ ವೈರಲ್ ಆಗಿ ಬಿಡುತ್ತವೆ. ಹಾವಿನ ವಿಡಿಯೋಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ವೈರಲ್ ಆಗುತ್ತದೆ. 


ಇದನ್ನೂ ಓದಿ : ಅಡುಗೆ ಭಟ್ಟನಿಗೆ ಕಷ್ಟಯಾಕೆ ಆಂತ ಗ್ಯಾಸ್‌ ಮೇಲೆ ಕುಳಿತ ಕೋಳಿ..! ಆಮೇಲೆ ಏನಾಯ್ತು..?


ಸಾಮಾನ್ಯವಾಗಿ ಅನೇಕ ಜಾತಿಯ ಹಾವುಗಳು ಪ್ರಪಂಚದಾದ್ಯಂತ ಕಂಡುಬರುತ್ತವೆ. ಹಾವುಗಳಲ್ಲಿ ಕೆಲವು ಅತ್ಯಂತ ವಿಷಕಾರಿಯಾಗಿದ್ದರೆ  ಇನ್ನು ಕೆಲವು ನಿರುಪದ್ರವಗಳಾಗಿರುತ್ತವೆ. ಹಾವು ವಿಷಕಾರಿಯಾಗಿರಲಿ ಆಗದೇ ಇರಲಿ ಜನರು ಸಾಮಾನ್ಯವಾಗಿ ಎಲ್ಲಾ ರೀತಿಯ ಹಾವುಗಳಿಗೆ ಹೆದರುತ್ತಾರೆ. ಇದೀಗ ಹಾವಿಗೆ ಸಂಬಂಧಪಟ್ಟ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಮನುಷ್ಯ ತನ್ನ ಕೈಗಳಿಂದ ಅಪಾಯಕಾರಿ ನಾಗರಹಾವಿಗೆ ನೀರು ಕುಡಿಸುತ್ತಿರುವುದನ್ನು ನೋಡಬಹುದು. ಬಿಸಿಲ ಬೇಗೆಗೆ ಬಾಯಾರಿದ ಹಾವು ಲೋಟದೊಳಗೆ ಮುಖಹಾಕಿ ಗಟ ಗಟನೆ ನೀರು ಹೀರುತ್ತಿರುವ ದೃಶ್ಯವನ್ನು ಇಲ್ಲಿ ಕಾಣಬಹುದಾಗಿದೆ. ಕೆಲವೇ ಸೆಕೆಂಡ್ ಗಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. 


ಹಾವಿನ ತಲೆಯ ಮೇಲೆ ಸ್ವಲ್ಪ ನೀರನ್ನು ಸುರಿದು ಅದನ್ನು ಶಾಂತಗೊಳಿಸುವುದನ್ನು ಗಮನಿಸಬಹುದು. ನಂತರ, ಅವರು ನಾಗರಹಾವಿನ ಬಾಯಿಯ ಬಳಿ ನೀರಿನ ಗ್ಲಾಸ್ ಅನ್ನು ಹಿಡಿಯುತ್ತಾರೆ. ಬಾಟಲಿಯನ್ನು ಒಯ್ಯುತ್ತಾರೆ. ತುಂಬಾ ಬಾಯಾರಿದ ನಾಗರಹಾವು ಶಾಂತವಾಗಿ ನೀರು ಕುಡಿಯುವುದನ್ನು ವೀಡಿಯೊದಲ್ಲಿ ಕಾಣಬಹುದು.


ಇದನ್ನೂ ಓದಿ : Jeans Technology: ಪ್ಯಾಂಟ್‌ ಜಿಪ್‌ ಓಪನ್‌ ಆಗಿದ್ರೆ ಕೂಡಲೇ ನೀಡುತ್ತೆ ಅಲರ್ಟ್‌


ಹಾವಿಗೆ ನೀರು ಕೊಡುವ ವ್ಯಕ್ತಿಯ ವಿಡಿಯೋ ಇಲ್ಲಿದೆ: 
 



ಈ ವೀಡಿಯೊವನ್ನು  @thebeautifulshorts Instagram ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಇದು ಸಾಕಷ್ಟು  ವ್ಯುವ್ಸ್ ಮತ್ತು ಲೈಕ್ ಗಳನ್ನು ಪಡೆದುಕೊಂಡಿದೆ. ಈ ಬಗ್ಗೆ ನೆಟ್ಟಿಗರು ಕೂಡಾ ನಾನಾ ರೀತಿಯಲ್ಲಿ ಕಾಮೆಂಟ್‌ಗಳನ್ನು  ಮಾಡುತ್ತಿದ್ದಾರೆ. 


( ಸೂಚನೆ :  ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮತ್ತು ನೀಡಿರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಳ್ಳಲಾಗಿದೆ. Zee ತಮಿಳು ನ್ಯೂಸ್ ಇವುಗಳನ್ನು ಯಾವುದೇ ರೀತಿಯಲ್ಲಿ ಅನುಮೋದಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ