ನವದೆಹಲಿ: ‘ಪ್ರೀತಿಗೆ ಯಾವುದೇ ಗಡಿ, ಕಾರಣ, ವಯಸ್ಸು ಮತ್ತು ಅಂತರವೂ ಇಲ್ಲ’ ಎನ್ನುವುದಕ್ಕೆ ಈ ಜೋಡಿ ಸಾಕ್ಷಿಯಾಗುತ್ತಿದೆ. ‘ಪ್ರೀತಿ ಕುರುಡು’ ಅಂತಾರಲ್ಲ ಅದೇ ರೀತಿ ಇಲ್ಲೊಂದು ಜೋಡಿ ತಮ್ಮ ಪ್ರೀತಿಯ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹವಾ ಸೃಷ್ಟಿಸುತ್ತಿದೆ.


COMMERCIAL BREAK
SCROLL TO CONTINUE READING

ಹೌದು, 19ರ ಹದಿಹರೆಯದ ಯುವಕನೊಬ್ಬ 56 ವರ್ಷದ ಮಹಿಳೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮದುವೆಗೂ ಸಹ ಸಿದ್ಧತೆ ನಡೆದಿದೆ. ಯುವಕ ಮತ್ತು ಅಜ್ಜಿ ತಮ್ಮ 37 ವರ್ಷಗಳ ವಯಸ್ಸಿನ ಅಂತರದ ನಡುವೆಯೂ ಥೈಲ್ಯಾಂಡ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವರ ಪ್ರೀತಿಯ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ.  


ಇದನ್ನೂ ಓದಿ: ಬ್ರಿಟಿಷ್ ಎಂಪೈರ್‌ಗೆ ಭಾರತೀಯ ದೊರೆ : ರಿಷಿ ಸುನಕ್‌ ಒಟ್ಟು ಆಸ್ತಿ ಎಷ್ಟು ಗೊತ್ತಾ..!


19 ವರ್ಷದ ವುತಿಚಾಯ್ ಹಾಗೂ 56 ವರ್ಷದ ಜನ್ಲಾ ನಮುಂಗ್ರಾಕ್ ಮದುವೆಯಾಗುತ್ತಿದ್ದಾರೆ. ವುತಿಚಾಯ್ 10 ವರ್ಷದವರಿದ್ದಾಗ ಜನ್ಲಾ ನಮುಂಗ್ರಾಕ್ ಪರಿಚಯವಾಗಿತ್ತು. ಆಗ ಜನ್ಲಾಗೆ 46 ವರ್ಷ ವಯಸ್ಸಾಗಿತ್ತಂತೆ. ಜನ್ಲಾ ಮತ್ತು ವುತಿಚಾಯ್‌ ನೆರೆಹೊರೆಯವರು ಎನ್ನಲಾಗಿದೆ. ಜನ್ಲಾ ಹೌಸ್‌ ಕೀಪಿಂಗ್‌ ಕೆಲಸ ಮಾಡುತ್ತಿದ್ದಾಗ ವುತಿಚಾಯ್‌ ಸಹಾಯ ಕೇಳಿದ್ದಳಂತೆ. ಬಳಿಕ ಇಬ್ಬರು ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡು ಕೆಲಸ ಮಾಡುತ್ತಿದ್ದಾಗಲೇ ಪ್ರೀತಿಸಲು ಸುರು ಮಾಡಿದ್ದಾರೆ.


World's Dirtiest Man: ವಿಶ್ವದ ಅತ್ಯಂತ ಕೊಳಕು ಮನುಷ್ಯ ಇನ್ನಿಲ್ಲ..!


‘ಜನ್ಲಾ ಗುಡಿಸಲು ಮನೆಯಲ್ಲಿ ವಾಸಿಸುತ್ತಿದ್ದಾಳೆ. ಅವಳಿಗೆ ಉತ್ತಮ ಜೀವನ ನೀಡಬೇಕು ಅಂತಾ ನಾನು ಯೋಚಿಸುತ್ತಿದ್ದೇನೆ. ಅವಳು ಕಠಿಣ ಪರಿಶ್ರಮಿ ಮಹಿಳೆ ಮತ್ತು ಪ್ರಾಮಾಣಿಕಳು. ಹೀಗಾಗಿ ಅವಳು ನನಗೆ ಇಷ್ಟವಾದಳು. ಪರಸ್ಪರ ಒಪ್ಪಿಕೊಂಡೇ ನಾವು ಮದುವೆಯಾಗಲು ಸಿದ್ಧತೆ ನಡೆಸುತ್ತಿದ್ದೇವೆ’ ಅಂತಾ ವುತಿಚಾಯ್ ಹೇಳಿದ್ದಾನೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ