Viral Video: ಇಂದಿನ ಸಮಾಜದಲ್ಲಿ ಅನ್ನ ಹಾಕುವವರನ್ನೇ ಸಾಯಿಸುವ ಪ್ರಕರಣಗಳನ್ನು ನಿರಂತರವಾಗಿ ಕಾಣುತ್ತಿದ್ದೇವೆ. ಅಲ್ಲದೇ ಸಾಕಷ್ಟು ಕಷ್ಟಪಟ್ಟು ಸಾಕಿದ ತಂದೆ-ತಾಯಿಯರ ಆರೈಕೆ ಮಾಡದ ಅದೆಷ್ಟೋ ಮಾನವ ಮೃಗಗಳಿವೆ. ತಂದೆ ತಾಯಿಯ ಅಂತ್ಯಸಂಸ್ಕಾರಕ್ಕೂ ಬರದ ದುಷ್ಟರು ಇದ್ದಾರೆ. ಇಂತಹ ಸಮಾಜದಲ್ಲಿ ಅನ್ನ ಕೊಟ್ಟವನು ಸತ್ತು ಹೋಗಿದ್ದಕ್ಕೆ ಈ ಮಂಗನ ಹೃದಯ ಮಿಡಿದಿದೆ. ಶವದ ಬಳಿ ಬಂದು ಮುತ್ತಿಕ್ಕಿ ನಮನ ಸಲ್ಲಿಸಿದೆ.
ಇದನ್ನೂ ಓದಿ: Video Viral : ಸಿಂಹಗಳ ಜೊತೆ ಫುಟ್ಬಾಲ್ ಆಡುವ ವ್ಯಕ್ತಿ.. ನೋಡಿದ್ರೆ ರೊನಾಲ್ಡೊ ಕೂಡ ಶಾಕ್ ಆಗ್ತಾರೆ
ಇಂತಹದೊಂದು ಮನಕಲಕುವ ದೃಶ್ಯ ಕಂಡುಬಂದಿದ್ದು ಶ್ರೀಲಂಕಾದ ಪೂರ್ವ ಪ್ರಾಂತ್ಯದ ಬಟ್ಟಿಕಲೋವಾ ಜಿಲ್ಲೆಯ ಹಳ್ಳಿಯಲ್ಲಿ. ಈ ಗ್ರಾಮದ ಮನೆಯ ವ್ಯಕ್ತಿಯೊಬ್ಬರ ಜೊತೆ ಮಂಗವೊಂದು ಸ್ನೇಹಿದಿಂದ ಇತ್ತು. ಪ್ರತಿ ದಿನ ಮನೆಗೆ ಬಂದು ಕೊಟ್ಟ ತಿಂಡಿ ತಿನ್ನುತ್ತಿತ್ತು. ಆಮೇಲೆ ಆ ವ್ಯಕ್ತಿಯ ಜೊತೆ ಮೋಜು ಮಸ್ತಿ ಮಾಡಿ ಆಟವಾಡುತ್ತಿತ್ತು. ಹೀಗೆ ಕೋತಿ ಮತ್ತು ವ್ಯಕ್ತಿಯ ನಡುವೆ ಉತ್ತಮ ಆತ್ಮೀಯತೆ ರೂಪುಗೊಂಡಿತ್ತು. ದುರದೃಷ್ಟವಶಾತ್, ಆ ವ್ಯಕ್ತಿ ಅಕ್ಟೋಬರ್ 18 ರಂದು ನಿಧನರಾದರು. ಅವರ ಅಂತಿಮ ಸಂಸ್ಕಾರ ನಡೆಸಲು ಕುಟುಂಬಸ್ಥರು ಸಿದ್ಧರಾಗಿದ್ದರು.
A monkey paying tribute at the #funeral of its master in #Batticaloa.#truelove. pic.twitter.com/Yf3XjRYXwc
— Aslaw CC (@effay123) October 19, 2022
ಆಗ ಎಂದಿನಂತೆ ಕೋತಿ ಮನೆಗೆ ಬಂದು ನೋಡಿದಾಗ ಗೆಳೆಯ ಕಾಣಲಿಲ್ಲ. ಮೃತದೇಹದ ಸುತ್ತ ಜಮಾಯಿಸಿದ ಕುಟುಂಬಸ್ಥರು ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡುತ್ತಿರುವುದನ್ನು ಕಂಡಿತು. ಬಳಿಕ ಮೃತದೇಹದ ಬಳಿ ಹೋಗಿ ಆತ ಸತ್ತಿರುವುದು ತಿಳಿಯದೆ ಆಟವಾಡಲು ಎಬ್ಬಿಸಲು ಯತ್ನಿಸಿತು. ಎದ್ದೇಳದಿದ್ದಾಗ ಕಣ್ಣಲ್ಲಿ ನೀರು ತುಂಬಿಕೊಂಡು ಮುತ್ತಿಕ್ಕಿ ಗೌರವ ಸಲ್ಲಿಸಿತು. ಈ ಘಟನೆ ಅಲ್ಲಿದ್ದವರ ಹೃದಯವನ್ನು ಕಲಕಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ನೋಡಿದವರ ಕಣ್ಣಾಲೆಗಳು ಒದ್ದೆಯಾಗುತ್ತಿವೆ.
ಇದನ್ನೂ ಓದಿ: Puneeth Parva : ಈ ನಟಿಯ ಕೈ ಮೇಲಿದೆ ಅಪ್ಪು ಹೆಸರಿನ ಟ್ಯಾಟೂ.! ಇದಕ್ಕಿದೆ ವಿಶೇಷ ನಂಟು
ಮಂಗ ಮತ್ತು ಮಾನವನ ಈ ಸ್ನೇಹಕ್ಕೆ ಬೆಲೆ ಕಟ್ಟಲಾಗದು. ಅಗಲಿ ಹೋದ ಸ್ನೇಹಿತನನ್ನು ಮುತ್ತಿಕ್ಕಿ ಬೀಳ್ಕೊಟ್ಟ ಕೋತಿಯ ವಿಡಿಯೋ ನೆಟ್ಟಿಗರ ಮನಮುಟ್ಟುತ್ತಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.