ಬ್ರಿಟಿಷ್ ಎಂಪೈರ್‌ಗೆ ಭಾರತೀಯ ದೊರೆ : ರಿಷಿ ಸುನಕ್‌ ಒಟ್ಟು ಆಸ್ತಿ ಎಷ್ಟು ಗೊತ್ತಾ..!

ಬ್ರಿಟನ್‌ ನೂತನ ಪ್ರಧಾನಿ ರಿಷಿ ಸುನಕ್ ಭಾರತೀಯ ಎಂಬುವುದು ಎಲ್ಲರಿಗೂ ತಿಳಿದ ವಿಚಾರ. ಅಲ್ಲದೆ, ವಿಶ್ವದ ಪ್ರಖ್ಯಾತ ಐಟಿ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ ಕಂಪನಿ ಫೌಂಡರ್ಸ್‌ನಲ್ಲಿ ಮುಖ್ಯರಾದ ನಾರಾಯಣ ಮೂರ್ತಿ ಅವರ ಅಳಿಯ ಕೂಡ. ಯಕೆ ಪ್ರಧಾನಿಯಾಗಿ ಆಯ್ಕೆಯಾದ ರಿಷಿ ಸುನಕ್ ಹಿನ್ನೆಲೆ ಹಾಗೂ ಅವರಿಗೆ ಭಾರತದೊಂದಿಗೆ ಇರುವ ಸಂಬಂಧ ಸೇರಿದಂತೆ ಆಸಕ್ತಿದಾಯಕ ಅಂಶಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು.

Written by - Krishna N K | Last Updated : Oct 25, 2022, 02:57 PM IST
  • ಬ್ರಿಟನ್‌ ನೂತನ ಪ್ರಧಾನಿ ರಿಷಿ ಸುನಕ್ ಭಾರತೀಯ ಎಂಬುವುದು ಎಲ್ಲರಿಗೂ ತಿಳಿದ ವಿಚಾರ
  • ವಿಶ್ವದ ಪ್ರಖ್ಯಾತ ಐಟಿ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ ಕಂಪನಿ ಫೌಂಡರ್ಸ್‌ನಲ್ಲಿ ಮುಖ್ಯರಾದ ನಾರಾಯಣ ಮೂರ್ತಿ ಅವರ ಅಳಿಯ ಕೂಡ
  • ಬ್ರಿಟನ್ ಸಂಸತ್ತಿನಲ್ಲಿ ಮೊದಲ ಬಾರಿಗೆ ಭಗವದ್ಗೀತೆಯನ್ನು ಮುಟ್ಟಿ ಪ್ರಮಾಣಸ್ವೀಕಾರ ಮಾಡಿದ ವ್ಯಕ್ತಿ ರಿಷಿ ಸುನಕ್‌
ಬ್ರಿಟಿಷ್ ಎಂಪೈರ್‌ಗೆ ಭಾರತೀಯ ದೊರೆ : ರಿಷಿ ಸುನಕ್‌ ಒಟ್ಟು ಆಸ್ತಿ ಎಷ್ಟು ಗೊತ್ತಾ..! title=

ಬೆಂಗಳೂರು : ಬ್ರಿಟನ್‌ ನೂತನ ಪ್ರಧಾನಿ ರಿಷಿ ಸುನಕ್ ಭಾರತೀಯ ಎಂಬುವುದು ಎಲ್ಲರಿಗೂ ತಿಳಿದ ವಿಚಾರ. ಅಲ್ಲದೆ, ವಿಶ್ವದ ಪ್ರಖ್ಯಾತ ಐಟಿ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ ಕಂಪನಿ ಫೌಂಡರ್ಸ್‌ನಲ್ಲಿ ಮುಖ್ಯರಾದ ನಾರಾಯಣ ಮೂರ್ತಿ ಅವರ ಅಳಿಯ ಕೂಡ. ಯಕೆ ಪ್ರಧಾನಿಯಾಗಿ ಆಯ್ಕೆಯಾದ ರಿಷಿ ಸುನಕ್ ಹಿನ್ನೆಲೆ ಹಾಗೂ ಅವರಿಗೆ ಭಾರತದೊಂದಿಗೆ ಇರುವ ಸಂಬಂಧ ಸೇರಿದಂತೆ ಆಸಕ್ತಿದಾಯಕ ಅಂಶಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು.

ಬ್ರಿಟನ್ ಸಂಸತ್ತಿನಲ್ಲಿ ಮೊದಲ ಬಾರಿಗೆ ಭಗವದ್ಗೀತೆಯನ್ನು ಮುಟ್ಟಿ ಪ್ರಮಾಣಸ್ವೀಕಾರ ಮಾಡಿದ ವ್ಯಕ್ತಿ ರಿಷಿ ಸುನಕ್‌. ರಿಷಿ ಸುನಕ್ ಪೋಷಕರು ಮೂಲತಃ ಭಾರತದವರು. ವೃತ್ತಿಯಿಂದ ಫಾರ್ಮಾಸಿಸ್ಟ್‌ಗಳಾಗಿದ್ದ ಅವರು 1960 ರಲ್ಲಿ ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ ವಲಸೆ ಹೋಗಿ ಅಲ್ಲಿಯೇ ವಾಸವಾಗಿದ್ದರು. ಅಲ್ಲದೆ, ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಮಗಳು ಅಕ್ಷತ ಮೂರ್ತಿಯನ್ನು ಮದುವೆ ಮಾಡಿಕೊಂಡರು. ಸದ್ಯ ರಿಷಿ ಅವರಿಗೆ ಕೃಷ್ಣ, ಅನೌಷ್ಕ ಎಂಬ ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿ: WhatsApp down : ವಾಟ್ಸಪ್‌ಗೂ ತಟ್ಟಿತು ಗ್ರಹಣ ದೋಷ.. ಸೇವೆಗಳು ಸ್ಥಗಿತ..!

ರಿಷಿ ಸುನಕ್ ಅವರಿಗೆ ಭಾರತ.. ಭಾರತ ದೇಶದ ಸಂಪ್ರದಾಯಗಳು ಅಂದ್ರೆ ತುಂಬಾ ಗೌರವ. ದೀಪಾವಳಿ ಸೇರಿದಂತೆ ಎಲ್ಲಾ ಭಾರತೀಯ ಹಬ್ಬಗಳನ್ನು ಸೆಲಬ್ರೇಟ್ ಮಾಡ್ತಾರೆ. ಅಲ್ಲದೆ, ಭಾರತದೇಶದ ಸಂಸ್ಕೃತಿ, ಸಂಪ್ರದಾಯಗಳ ಕುರಿತು ತಮಗೆ ತಮ್ಮ ಹೆತ್ತವರು ಹೇಳುತ್ತಿರುತ್ತಾರೆ ಎಂದು ರಿಷಿ ಅವರು ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ಹಲವು ಭಾರಿ ತಮ್ಮ ಮಾವ ಹಾಗೂ ಅತ್ತೆಯವರನ್ನು ನೋಡಲು ಹೆಂಡತಿ ಮತ್ತು ಮಕ್ಕಳ ಜೊತೆ ಭಾರತಕ್ಕೆ ಬಂದು ಹೋಗಿದ್ದಾರೆ.

ಸ್ಟಾನ್‌ಫೋರ್ಡ್ ಯೂನಿವರ್ಸಿಟಿಯಲ್ಲಿ ಗ್ರ್ಯಾಯೆಶನ್ ಪೂರ್ಣಗೊಳಿಸಿದ ರಿಶಿ ಸುನಕ್. ಇನ್ವೆಸ್ಟ್‌ಮೆಂಟ್ ಬ್ಯಾಂಕಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ರಿಶಿ ಸುನಕ್ ನೆಟ್ ವರ್ತ್ ಮೌಲ್ಯ 700 ಮಿಲಿಯನ್ ಪೌಂಡ್ಸ್. ಬ್ರಿಟನ್‌ ಅವರಿಗೆ ದುಬಾರಿ ಬಾಂಗ್ಲೆಗಳು, ಎಸ್ಟೇಟ್ಸ್ ಸೇರಿದಂತೆ ಇತರ ಆಸ್ತಿಗಳು ಇವೆ ಎಂದು ಹೇಳಲಾಗಿದೆ. ಸದ್ಯ ಬ್ರಿಟನ್‌ ಪಿಎಂ ಆಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News