ನವದೆಹಲಿ: ಬಹುತೇಕರು ಟಾಯ್ಲೆಟ್ ಬಳಸುವಾಗ ಫೋನ್‌ಗಳಲ್ಲಿ ಗೇಮ್ ಆಡುವುದು ಅಥವಾ ವಿಡಿಯೋಗಳನ್ನು ನೋಡುವ ಅಭ್ಯಾಸ ಹೊಂದಿರುತ್ತಾರೆ. ಇಂತಹ ಅಭ್ಯಾಸಗಳು ಕೆಲವೊಮ್ಮೆ ನಮ್ಮನ್ನು ತೊಂದರೆಗೆ ಸಿಲುಕಿಸುತ್ತವೆ. ಅಷ್ಟೇ ಅಲ್ಲ ಇಂತಹ ಅಭ್ಯಾಸಗಳಿಂದ ಸ್ವಲ್ಪ ಎಚ್ಚರ ತಪ್ಪಿದರೂ ದೊಡ್ಡ ಅನಾಹುತವೇ ಸಂಭವಿಸುತ್ತವೆ. ಇದಕ್ಕೆ ನಿದರ್ಶನವೇ ಈ ವ್ಯಕ್ತಿ ಮಾಡಿಕೊಂಡಿರುವ ಎಡವಟ್ಟು.


COMMERCIAL BREAK
SCROLL TO CONTINUE READING

ಹೌದು, ಶೌಚಾಲಯದಲ್ಲಿ ಕುಳಿತು ಮೊಬೈಲ್ ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದ ಮಲೇಷಿಯಾದ ವ್ಯಕ್ತಿಯೊಬ್ಬ ಭಾರೀ ಬೆಲೆ ತೆತ್ತಿದ್ದಾನೆ. 28 ವರ್ಷದ ಸಬ್ರಿ ತಜಲಿ ಎಂಬಾತ ಶೌಚಾಲಯಕ್ಕೆ ತೆರಳಿ ವಿಡಿಯೋ ಗೇಮ್ ಆಡುತ್ತಾ ಕುಳಿತುಕೊಂಡಿದ್ದಾರೆ. ಟಾಯ್ಲೆಟ್ ಸೀಟ್ ಮೇಲೆ ಕುಳಿತ ಆತ ಮೈಮರೆತು ವಿಡಿಯೋ ಗೇಮ್ ಆಡುತ್ತಿದ್ದಾಗ ಹಿಂಬದಿಯಿಂದ ಹಾವೊಂದು ದಾಳಿ ನಡೆಸಿದೆ.  


ಇದನ್ನೂ ಓದಿ: Viral Image: ಬರೋಬ್ಬರಿ 11 ಲಕ್ಷ ಖರ್ಚು ಮಾಡಿ ನಾಯಿಯಂತಾದ ವ್ಯಕ್ತಿ!


ಸೆಲಯಂಟ್ ನಿವಾಸಿಯೊಬ್ಬರು ಟಾಯ್ಲೆಟ್‌ನಿಂದ ಹೊರಬರುತ್ತಿರುವ ಹಾವಿನ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾವು ಅಟ್ಯಾಕ್ ಮಾಡುತ್ತಲೇ ಬೆಚ್ಚಿಬಿದ್ದ ತಜಲಿ ಶೌಚಾಲಯದಿಂದ ಹೊರಗೆ ಓಡಿಬಂದಿದ್ದಾರೆ. ಕೂಡಲೇ ಅವರು ಹಾವನ್ನು ಹಿಡಿಯುವ ರಕ್ಷಣಾ ತಂಡಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಬಂದ ಉರಗ ತಜ್ಞರು ಹಾವನ್ನು ಹಿಡಿದು ರಕ್ಷಿಸಿದ್ದಾರೆ. ಹಾವಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.   


ʼWife For Saleʼ ಎಂದು ಜಾಹೀರಾತು ನೀಡಿದ ಪತಿ: ಟೂರ್‌ಗೆ ಹೋಗಿದ್ದ ಪತ್ನಿಗೆ ಶಾಕ್‌!


ದಾಳಿ ಮಾಡಿದ ಹಾವು ವಿಷಕಾರಿಯಲ್ಲ


ವರದಿಗಳ ಪ್ರಕಾರ ಸಬ್ರಿ ತಜಲಿ ಮೇಲೆ ದಾಳಿ ನಡೆಸಿದ ಹಾವು ವಿಷಕಾರಿಯಲ್ಲವೆಂದು ತಿಳಿದುಬಂದಿದೆ. ಸರಿಯಾದ ಸಮಯಕ್ಕೆ ಬಂದ ಉರಗ ತಜ್ಞರು ಜೀವಂತವಾಗಿ ಹಾವು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಬಳಿಕ ನನಗೆ ಶೌಚಾಲಯಕ್ಕೆ ಹೋಗಲು ಹೆದರಿಕೆಯಾಗುತ್ತಿದೆ. ಹಾವಿನ ದಾಳಿಯಿಂದ ನನಗೆ ತುಂಬಾ ಹೆದರಿಕೆಯಾಗಿದೆ. ಕಳೆದ 2 ವಾರಗಳಿಂದ ನಾನು ಶೌಚಾಲಯ ಬಳಸುವುದನ್ನೇ ತಪ್ಪಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.   


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.