ಮಹಿಳೆಯನ್ನು ಕೊಂದ ಟಗರಿಗೆ ಮೂರು ವರ್ಷ ಸೆರೆವಾಸ!

ಆಫ್ರಿಕಾದ ದಕ್ಷಿಣ ಸುಡಾನ್‌ನ ರುಂಬೆಕ್ ಪೂರ್ವದಲ್ಲಿನ ಅಕುಯೆಲ್ ಯೋಲ್ ಎಂಬಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರ ಮೇಲೆ ಟಗರು ದಾಳಿ ಮಾಡಿದ್ದು, ಆಕೆ ಸಾವನ್ನಪ್ಪಿದ್ದಳು. ಆದರೆ ಇದೀಗ ಕೊಲೆ ಆರೋಪ ಹೊತ್ತಿರುವ ಟಗರಿಗೆ ಅಲ್ಲಿನ ನ್ಯಾಯಾಲಯ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.  45 ವರ್ಷ ವಯಸ್ಸಿನ ಮಹಿಳೆಯೊಬ್ಬರು ಟಗರು ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದರು. 

Written by - Bhavishya Shetty | Last Updated : May 24, 2022, 04:02 PM IST
  • ಮಹಿಳೆಯ ಮೇಲೆ ದಾಳಿ ನಡೆಸಿ ಕೊಂದಿದ್ದ ಟಗರು
  • ಟಗರುಗೆ ಮೂರು ವರ್ಷ ಜೈಲು ಶಿಕ್ಷೆ
  • ವಿಚಿತ್ರ ತೀರ್ಪು ನೀಡಿದ ಅಲ್ಲಿನ ನ್ಯಾಯಾಲಯ
ಮಹಿಳೆಯನ್ನು ಕೊಂದ ಟಗರಿಗೆ ಮೂರು ವರ್ಷ ಸೆರೆವಾಸ!  title=
Sheep arrest

ಪ್ರಪಂಚದಲ್ಲಿ ಕೊಲೆ ಮಾಡಿದರೆ ಅಥವಾ ಏನಾದರೂ ತಪ್ಪು ಎಸಗಿದರೆ ನ್ಯಾಯಾಲಯದ ಪ್ರಕಾರ ಅವರನ್ನು ಜೈಲಿಗೆ ಹಾಕುತ್ತಾರೆ, ಇಲ್ಲವೇ ಶಿಕ್ಷೆಯನ್ನು ನೀಡುತ್ತಾರೆ. ಇಲ್ಲಿ ಮನುಷ್ಯರು ಮಾಡಿದ ತಪ್ಪಿಗೆ ಮನುಷ್ಯರೇ ಶಿಕ್ಷೆ ಅನುಭವಿಸೋದು ಸಾಮಾನ್ಯ ವಿಚಾರ. ಆದರೆ ಇಲ್ಲೊಂದು ವಿಲಕ್ಷಣ ಪ್ರಕರಣದಲ್ಲಿ ಟಗರು ಜೈಲು ಪಾಲಾಗಿರುವ ಘಟನೆ ನಡೆದಿದೆ. 

ಇದನ್ನು ಓದಿ: ಟೋಕಿಯೋದಲ್ಲಿ ಪಿಎಂ ಮೋದಿ-ಯುಎಸ್‌ ಅಧ್ಯಕ್ಷ ಬೈಡನ್ ದ್ವಿಪಕ್ಷೀಯ ಮಾತುಕತೆ

ಆಫ್ರಿಕಾದ ದಕ್ಷಿಣ ಸುಡಾನ್‌ನ ರುಂಬೆಕ್ ಪೂರ್ವದಲ್ಲಿನ ಅಕುಯೆಲ್ ಯೋಲ್ ಎಂಬಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರ ಮೇಲೆ ಟಗರು ದಾಳಿ ಮಾಡಿದ್ದು, ಆಕೆ ಸಾವನ್ನಪ್ಪಿದ್ದಳು. ಆದರೆ ಇದೀಗ ಕೊಲೆ ಆರೋಪ ಹೊತ್ತಿರುವ ಟಗರಿಗೆ ಅಲ್ಲಿನ ನ್ಯಾಯಾಲಯ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.  45 ವರ್ಷ ವಯಸ್ಸಿನ ಮಹಿಳೆಯೊಬ್ಬರು ಟಗರು ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದರು. 

ಇದನ್ನು ಓದಿ: ಆಸ್ಟ್ರೇಲಿಯಾ ನೂತನ ಪ್ರಧಾನಿ ಭೇಟಿ ಮಾಡಿದ ಪಿಎಂ ಮೋದಿ: ಭಾರತವನ್ನು ಕೊಂಡಾಡಿದ ಅಲ್ಬನೀಸ್

ಮಾಲೆಂಗ್ ಆಗೋಕ್ ಪಾಯಂನ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿದ ಟಗರನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿದ್ದರು. ಮುಂದಿನ ಮೂರು ವರ್ಷಗಳವರೆಗೆ ದಕ್ಷಿಣ ಸುಡಾನ್‌ನ ಲೇಕ್ಸ್ ಸ್ಟೇಟ್‌ನಲ್ಲಿರುವ ಅಡ್ಯುಯೆಲ್ ಕೌಂಟಿಯ ಪ್ರಧಾನ ಕಚೇರಿಯ ಮಿಲಿಟರಿ ಶಿಬಿರದಲ್ಲಿ ಟಗರಿಗೆ ಜೈಲುವಾಸ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೆ, ಟಗರಿನ ಮಾಲೀಕ ಸಂತ್ರಸ್ತೆಯ ಕುಟುಂಬಕ್ಕೆ ಐದು ಹಸುಗಳ ಜೊತೆಗೆ ಪರಿಹಾರ ಧನವನ್ನು ನೀಡಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News