ನವದೆಹಲಿ: ಕಾಡಿನ ಮಧ್ಯದಲ್ಲಿರುವ ನೀರಿನ ಗುಂಡಿಯಲ್ಲಿ ಆನೆಗಳು ಚೆಲ್ಲಾಟವಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅರಣ್ಯ ಇಲಾಖೆಯಿಂದ ನಿರ್ಮಿಸಿರುವ ಜಲಸಂಗ್ರಹಾಲಯದಲ್ಲಿ ಮರಿ ಜೊತೆಗೆ ಆನೆಗಳು ಮೈ ತಂಪು ಮಾಡಿಕೊಂಡಿವೆ.


COMMERCIAL BREAK
SCROLL TO CONTINUE READING

ಈ ವಿಡಿಯೋವನ್ನು ಐಎಫ್‍ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಎಲ್ಲರ ಗಮನ ಸೆಳೆದಿದ್ದು ಮುದ್ದಾದ ಮರಿ ಆನೆ. ಹೊಂಡದಲ್ಲಿ ಕೆಲವೊತ್ತು ನೀರಿನ ಜೊತೆ ಚೆಲ್ಲಾಟವಾಡಿರುವ ಮರಿ ಆನೆಯನ್ನು ಕಂಡು ನೆಟಿಜನ್ಸ್‍ಗಳು ಖುಷಿ ಪಟ್ಟಿದ್ದಾರೆ.  


ಇದನ್ನೂ ಓದಿ: Video viral : ಪೆಟ್ರೋಲ್‌ ಬಂಕ್‌ನಲ್ಲಿ ಹೀಗೆ ಮಾಡಿದಳು ಯುವತಿ! ದಂಗಾದ ಯುವಕ!


ವಿಡಿಯೋದಲ್ಲಿ ಆನೆಗಳ ಗುಂಪು ನೀರಿನಲ್ಲಿ ಮೈ ತಂಪು ಮಾಡಿಕೊಂಡಿವೆ. ತಮ್ಮ ಸೋಂಡಿಲ ಮೂಲಕ ನೀರು ಕುಡಿಯುವ ಆನೆಗಳು ಕೆಲವೊತ್ತು ವಿಶ್ರಮಿಸಿವೆ. ಬಿಸಿಲ ತಾಪಮಾನ ಇದ್ದಿದ್ದರಿಂದ ತಮ್ಮ ದೇಹಕ್ಕೆ ನೀರು ಸಿಂಪಡಿಸಿಕೊಂಡಿವೆ. ಇದರ ನಡುವೆ ಮರಿಯಾನೆ ನೀರಿನೊಳಗೆ ಹೋಗಿ ಚೆಲ್ಲಾಟವಾಡಿದೆ.    


‘ಈ ಮರಿ ಆನೆ ಕೆಲವು ಅತ್ಯುತ್ತಮ ಕ್ಷಣಗಳನ್ನು ಕಳೆದಿದೆ. ಬಿಸಿಲ ಬೇಗೆಯ ಒಣಭೂಮಿಯಲ್ಲಿ ಈ ಆನೆಗಳು ಸಿಕ್ಕಿರುವ ಆ ನೀರು ಒಂದು ರೀತಿ ಜೀವನಾಡಿ. ಅರಣ್ಯ ಇಲಾಖೆಯಿಂದ ನಿರ್ಮಿಸಿರುವ ನೀರಿನ ಹೊಂಡದಿಂದ ಆನೆಗಳ ದಾಹ ತೀರಿದೆ’ ಅಂತಾ ಐಎಫ್‍ಎಸ್ ಅಧಿಕಾರಿ ಖುಷಿ ಹಂಚಿಕೊಂಡಿದ್ದಾರೆ.  


Viral Video : ಫೈರ್‌ ಸ್ಟಂಟ್‌ ಮಾಡಲು ಹೋಗಿ ಮುಖ ಸುಟ್ಟುಕೊಂಡ ವ್ಯಕ್ತಿ! 


ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ವನ್ಯಜೀವಿಗಳ ಜೀವನಕ್ರಮ ಕಂಡು ಅನೇಕರು ಖುಷಿಪಟ್ಟಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮುದ್ದಾದ ಮರಿ ಆನೆಯ ಚೆಲ್ಲಾಟ ನೋಡಿ ಅನೇಕರು ಖುಷಿಯಿಂದ ಕಾಮೆಂಟ್ ಮಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.