ನವದೆಹಲಿ: ಮದುವೆ ದಿನ ಸ್ನೇಹಿತರು ನೀಡುವ ಗಿಫ್ಟ್ ಗಳಿಂದ ಕೆಲವೊಮ್ಮೆ ಮುಜುಗರದ ಸನ್ನಿವೇಶ ಸೃಷ್ಟಿಯಾಗುತ್ತದೆ. ಇಂತಹ ಅನೇಕ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸರ್ಪೈಸ್ ಗಿಫ್ಟ್ ಎಂದು ನೀಡುವ ಉಡುಗೊರೆಗಳನ್ನು ಕಂಡು ವಧು-ವರ ಶಾಕ್ ಆಗಿರುತ್ತಾರೆ. ಕೆಲವೊಂದು ಸರಿ ಬಿದ್ದು ಬಿದ್ದು ಹೊಟ್ಟೆ ಹುಣ್ಣಾಗಬೇಕು ಆ ರೀತಿಯ ಗಿಫ್ಟ್ ಗಳನ್ನು ಸ್ನೇಹಿತರು ನೀಡಿರುತ್ತಾರೆ. ಅದೇ ರೀತಿಯ ತಮಾಷೆಯ ವಿಡಿಯೋವೊಂದು ಸದ್ಯ ಸಖತ್ ಸೌಂಡ್ ಮಾಡುತ್ತಿದೆ.  


COMMERCIAL BREAK
SCROLL TO CONTINUE READING

ಸ್ನೇಹಿತರು ನೀಡಿದ ಗಿಫ್ಟ್ ಗೆ ನಾಚಿನೀರಾದ ವಧು-ವರ


ತಮ್ಮ ಸ್ನೇಹಿತನ ಮದುವೆಗೆ ಆಗಮಿಸಿದ್ದ ಕೆಲವರು ಭರ್ಜರಿ ಮೋಜು-ಮಸ್ತಿ ಮಾಡಿದ್ದಾರೆ. ವೇದಿಕೆ ಮೇಲೆ ತೆರಳಿ ಶುಭ ಹಾರೈಸಿದ ಗೆಳೆಯರು ನೀಡಿದ ಗಿಫ್ಟ್ ಕಂಡ ವರ ನಾಚಿನೀರಾಗಿದ್ದಾನೆ. ಇದನ್ನು ಕಂಡ ವಧು ಸಹ ನಕ್ಕು ನಕ್ಕು ಸುಸ್ತಾಗಿದ್ದಾಳೆ. ಅತಿಥಿಗಳ ಮುಂದೆಯೇ ವಿಚಿತ್ರ ಉಡುಗೊರೆ ಪಡೆದ ವರ ಒಂದುಕ್ಷಣ ಅವಾಕ್ಕಾಗಿದ್ದಾನೆ.


ಇದನ್ನೂ ಓದಿ: Viral Video: ಮೊಸಳೆಯನ್ನು ಕೊಂದು ಹಾಕಿದ ದೈತ್ಯ ಹಾವು.. ಭಯಾನಕ ಕಾದಾಟ ಕ್ಯಾಮೆರಾ ಕಣ್ಣಲ್ಲಿ ಸೆರೆ


ಗಿಫ್ಟ್ ಏನು ನೀಡಿದ್ದರು..?



ವೈರಲ್ ಆಗಿರುವ ವಿಡಿಯೋದಲ್ಲಿ ವೇದಿಕೆ ಮೇಲೆ ಕುಳಿತಿದ್ದ ವಧು-ವರನಿಗೆ ಸ್ನೇಹಿತರು ಗಿಫ್ಟ್ ನೀಡುತ್ತಾರೆ. ಪ್ಲಾಸ್ಟಿಕ್ ಕವರ್‍ನಲ್ಲಿ ಸುತ್ತಿ ಗಿಫ್ಟ್ ನೀಡುತ್ತಾರೆ. ಅದನ್ನು ಬಿಚ್ಚುತ್ತಿರುವಾಗಿ ಎಲ್ಲಾ ಸ್ನೇಹಿತರು ಜೋರಾಗಿ ನಗುತ್ತಾರೆ. ವರ ಪ್ಲಾಸ್ಟಿಕ್ ಕವರ್ ಬಿಚ್ಚಿ ಗಿಫ್ಟ್ ನೋಡುತ್ತಿದ್ದಂತೆಯೇ ನಾಚಿಕೆಯಾಗಿ ಅದನ್ನು ಮುಚ್ಚಲು ಪ್ರಯತ್ನಿಸಿದ್ದಾನೆ. ಈ ವೇಳೆ ಕವರ್‍ನಿಂದ ಗಿಫ್ಟ್ ತೆಗೆಯುವಂತೆ ವರನ ಸ್ನೇಹಿತರು ಆತನಿಗೆ ಒತ್ತಾಯಿಸಿದ್ದಾರೆ. ಆದರೆ, ವರ ಮಾತ್ರ ಅದನ್ನು ಹೊರತೆಗೆಯದೆ ನಗುನಗುತ್ತಾ ತನ್ನಬಳಿಯೇ ಬಚ್ಚಿಟ್ಟುಕೊಳ್ಳುತ್ತಾನೆ. ಈ ವೇಳೆ ಪಕ್ಕದಲ್ಲಿಯೇ ಇದ್ದ ವಧು ಮುಸಿ ಮುಸಿ ನಗುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು.


ವರ ಪ್ಯಾಕೆಟ್‍ನಿಂದ ಗಿಫ್ಟ್ ತೆಗೆಯುವುದನ್ನೇ ಕಾಯುತ್ತಿದ್ದ ಸ್ನೇಹಿತರು ಜೋರಾಗಿ ನಗುತ್ತಾ ವೇದಿಕೆಯಲ್ಲಿ ಕುಣಿದು ಕುಪ್ಪಳಿಸುತ್ತಾರೆ. ಈ ವೇಳೆ ವಧುವಿಗೆ ಆಶ್ಚರ್ಯವಾಗಿದೆ. ಕೆಲವೇ ಸೆಕೆಂಡ್ ಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. kichus_abi ಹೆಸರಿನ Instagram ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಇದುವರೆಗೆ 5 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, ಸಾವಿರಾರು ಮಂದಿ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.  


ಇದನ್ನೂ ಓದಿ: Viral Video: ಬೇರೆ ಮಹಿಳೆಯೊಂದಿಗೆ ಮಾತಿನಲ್ಲಿ ನಿರತ ವರ, ಹಿಂದಿನಿಂದ ಬಂದು ಹಣೆಗೆ ಸಿಂಧೂರ ಹಚ್ಚಿ ವಧುವನ್ನು ಕರೆದುಕೊಂಡು ಹೋದ ಬೇರೊಬ್ಬ ಯುವಕ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.