ನವದೆಹಲಿ: ಪ್ರಾಣಿಗಳು ಹೆಚ್ಚಾಗಿ ತಮ್ಮ ಆವಾಸಸ್ಥಾನಗಳಲ್ಲಿ ಉಳಿಯಲು ಇಷ್ಟಪಡುತ್ತವೆ. ಆದರೆ ಕೆಲವೊಮ್ಮೆ ಕಾಡುಪ್ರಾಣಿಗಳು ಆಹಾರ ಅರಸಿ ನಾಡಿಗೆ ಆಗಮಿಸುತ್ತವೆ. ಇತ್ತೀಚೆಗೆ ವನ್ಯಜೀವಿ ಮತ್ತು ಮಾನವ ಸಂಘರ್ಷ ಹೆಚ್ಚಾಗಿದೆ. ಕಾಡು ಕಡಿದು ಕಾಂಕ್ರೀಟ್ ಕಾಡು ನಿರ್ಮಿಸುತ್ತಿರುವ ಮನುಷ್ಯನ ಅತಿಯಾಸೆಯಿಂದ ಪ್ರಾಣಿಗಳ ಜೀವಕ್ಕೆ ಕುತ್ತು ಬರುತ್ತಿದೆ.


COMMERCIAL BREAK
SCROLL TO CONTINUE READING

ಆಹಾರ ಅರಸಿ ನಾಡಿಗೆ ಬರುವ ಕಾಡುಪ್ರಾಣಿಗಳು ಮನುಷ್ಯರ ಮೇಲೆ ದಾಳಿ ನಡೆಸುತ್ತವೆ. ಕಾಡಂಚಿನ ಪ್ರದೇಶಗಳಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗುತ್ತಿವೆ. ವಸತಿ ಪ್ರದೇಶಗಳಿಗೆ ನುಗ್ಗುವ ಪ್ರಾಣಿಗಳ ದಾಳಿಯಿಂದ ಜನರ ಜೀವಕ್ಕೆ ಅಪಾಯ ಎದುರಾಗುತ್ತದೆ. ಅವುಗಳನ್ನು ಹಿಡಿಯುವ ವೇಳೆ ಪ್ರಾಣಿಗಳ ಜೀವಕ್ಕೂ ಅಪಾಯವುಂಟಾಗುತ್ತದೆ. ಇಂತಹ ವಿಡಿಯೋಗಳು ದಿನನಿತ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಸಾಂಬಾರ್ ಜಿಂಕೆಯ ವಿಡಿಯೋ ಇದೀಗ ಸಖತ್ ಸೌಂಡ್ ಮಾಡುತ್ತಿದೆ.


ಇದನ್ನೂ ಓದಿ: Anaconda Video : ಇಷ್ಟು ದೊಡ್ಡ ಹಾವನ್ನು ನೀವು ಜೀವನದಲ್ಲೇ ನೋಡಿರಲು ಸಾಧ್ಯವಿಲ್ಲ!


ಹೌದು, ಆಹಾರ ಅರಸಿ ನಾಡಿಗೆ ಬಂದ ಸಾಂಬಾರ್ ಜಿಂಕೆಯೊಂದು ಟೀ ಅಂಗಡಿಗೆ ಬಂದು ಚಹಾ ಸವಿದಿದೆ. ಜಿಂಕೆ ಕಂಡ ಜನರು ಖುಷಿಯಿಂದಲೇ ಅಕದಕ್ಎ ಉಪಹಾರ ನೀಡಿ ಉಪಚರಿಸಿದ್ದಾರೆ. ಈ ಜಿಂಕೆಯ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಡಾ.ಸಾಮ್ರಾಟ್ ಗೌಡ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ಈ ವಿಡಿಯೋದಲ್ಲಿ ಸಾಂಬಾರ್ ಜಿಂಕೆಯೊಂದು ಟೀ ಸ್ಟಾಲ್ ಮುಂದೆ ನಿಂತು ಅಲ್ಲಿನ ಆಹಾರ ಪದಾರ್ಥಗಳನ್ನು ನೋಡುತ್ತಿದೆ. ಈ ವೇಳೆ ಒಬ್ಬ ವ್ಯಕ್ತಿ ಆಹಾರ ಪದಾರ್ಥಗಳನ್ನು ಹಿಡಿದುಕೊಂಡು ಸಂಭಾರ್‌ಗೆ ತನ್ನ ಕಡೆಗೆ ಬರುವಂತೆ ಸನ್ನೆ ಮಾಡುತ್ತಾನೆ. ಇದನ್ನು ಅರ್ಥಮಾಡಿಕೊಳ್ಳುವ ಜಿಂಕೆಯು ಅವನತ್ತ ಹೋಗುತ್ತದೆ. ನಂತರ ಆ ವ್ಯಕ್ತಿ ಜಿಂಕೆಗೆ ಪ್ರೀತಿಯಿಂದ ಆಹಾರ ನೀಡುತ್ತಾನೆ. ಜಿಂಕೆ ಟೀ ಅಂಗಡಿಗೆ ಆಗಮಿಸಿ ಆಹಾರ ಸೇವಿಸಿ, ಚಹಾ ಸಹ ಕುಡಿದಿದೆ. ಅನೇಕರು ಈ ದೃಶ್ಯವನ್ನು ಕಣ್ತುಂಬಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ.


Dangerous Stunt: ಪತ್ನಿಯನ್ನು ಬೈಕ್ ಮೇಲೆ ಕೂರಿಸಿ ಅಪಾಯಕಾರಿ ಸ್ಟಂಟ್ ಗಿಳಿದ ಭೂಪ... ವಿಡಿಯೋ ನೋಡಿ


ಇನ್ನು ಜಿಂಕೆ ಟೀ ಸ್ಟಾಲ್‍ಗೆ ಆಗಮಿಸಿರುವ ವಿಡಿಯೋವನ್ನು ಸಾವಿರಾರು ಜನರು ವೀಕ್ಷಿಸಿದ್ದು, ಮೆಚ್ಚಿಕೊಂಡಿದ್ದಾರೆ. ಕಾಡು ಪ್ರಾಣಿಗಳನ್ನು ನಾವು ಉಳಿಸಬೇಕು. ಇದಕ್ಕಾಗಿ ನಾವೆಲ್ಲರೂ ಅರಣ್ಯ ಉಳಿಸಲು ಕೈಜೋಡಿಸಬೇಕು ಅಂತಾ ಪರಿಸರ ಪ್ರೇಮ ಮೆರೆದಿದ್ದಾರೆ. ಜನವಸತಿ ಪ್ರದೇಶಗಳಿಗೆ ಬರುವ ಪ್ರಾಣಿಗಳಿಗೆ ಹಿಂಸೆ ಮಾಡದೆ ಅವುಗಳನ್ನು ಪ್ರೀತಿಯಿಂದ ಕಾಣಬೇಕೆಂದು ಹಲವರು ಕಾಮೆಂಟ್ ಮಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.