Bride Groom Video: ಪ್ರತಿಯೊಬ್ಬರಿಗೂ ಅವರ ಜೀವನದಲ್ಲಿ ಮದುವೆಯ ದಿನ ಎಂಬುದು ತುಂಬಾ ಮುಖ್ಯವಾದದ್ದು. ಆದರೆ ಮದುವೆಯ ದಿನದಂದು ವಧು ತನ್ನ ಮಾಜಿ ಗೆಳೆಯನನ್ನು ನೆನೆದು ಹಾಡನ್ನು ಹಾಡಲು ಆರಂಭಿಸಿದಳು. ಇದನ್ನು ಕೇಳಿ ವರನ ಸ್ಥಿತಿ ಏನಾಗಬಹುದು. ಈ ಟ್ರೆಂಡಿಂಗ್ ವಿಡಿಯೋ ನೋಡಿ ನೀವೂ ತಲೆ ಕೆಡಿಸಿಕೊಳ್ಳುತ್ತೀರಿ.
ಮದುವೆಯಲ್ಲಿ ವಧು ಅಥವಾ ವರ ನೃತ್ಯ ಮಾಡುವುದು, ಹಾಡನ್ನು ಹೇಳುವ ವಿಡಿಯೋವನ್ನು ನೀವು ಹೆಚ್ಚಾಗಿ ಇಂಟರ್ನೆಟ್‌ನಲ್ಲಿ ನೋಡಿರಬಹುದು. ಆದರೆ ಈ ವಿಡಿಯೋದಲ್ಲಿ ವಧು ತನ್ನ ಪತಿಗಾಗಿ ಹಾಡು ಹೇಳದೇ ತನ್ನ ಮಾಜಿ ಪ್ರಿಯಕರನಿಗಾಗಿ ಹಾಡುತ್ತಿರುವುದನ್ನು ಕಾಣಬಹುದು. ವಧು ಕೂಡ ತನ್ನ ಪ್ರಿಯಕರನನ್ನು ನೆನೆದು ಅಳುತ್ತಾಳೆ. ಮೊದಲನೆಯದಾಗಿ ನೀವು ಈ ವೈರಲ್ ವಿಡಿಯೋ ನೋಡಲೇಬೇಕು.
ಇದನ್ನೂ ಓದಿ : ನಟ ಅನೀಶ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಅಭಿಷೇಕ್ ಶೆಟ್ಟಿ
ವರನ ಮುಂದೆ ವಧು ತನ್ನ ಮಾಜಿ ಪ್ರಿಯಕರನಿಗಾಗಿ ಹಾಡನ್ನು ಹಾಡಲು ಪ್ರಾರಂಭಿಸಿದಳು. ಹುಡುಗಿಗೆ ತನ್ನ ಪ್ರೇಮಿಯ ಹೆಸರನ್ನು ಕೇಳಿದಾಗ, ವಧು ತನ್ನ ಮಾಜಿ ಪ್ರಿಯಕರನ ಹೆಸರನ್ನು ಹೇಳುತ್ತಾಳೆ. ವಧುವಿನ ಈ ಕೃತ್ಯಕ್ಕೆ ವರನೂ ಬೆಚ್ಚಿಬಿದ್ದು ನೋಡುತ್ತಲೇ ಇರುತ್ತಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣ ಬಳಕೆದಾರರನ್ನು ರಂಜಿಸುತ್ತಿದೆ. ಈ ವಿಡಿಯೋವನ್ನು YouTube ನಲ್ಲಿ ಹಂಚಿಕೊಳ್ಳಲಾಗಿದೆ. ಕಾಮೆಂಟ್ ವಿಭಾಗದಲ್ಲಿ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ವಿಭಿನ್ನ ಮತ್ತು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಕೆಲವರು ವರನ ಬಗ್ಗೆ ಅನುಕಂಪ ತೋರಿದರೆ, ಕೆಲವರು ಹುಡುಗನ ಪರಿಸ್ಥಿತಿಯನ್ನು ಗೇಲಿ ಮಾಡಿದರು.
ಇದನ್ನೂ ಓದಿ : ಮಾಲೀಕನ ಜೀವ ಉಳಿಸಲು ಕೊನೆ ಕ್ಷಣದವರೆಗೂ ಹಾವಿನ ಜತೆ ಕಾದಾಡಿದ ಶ್ವಾನ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.