Time Travel Video: ಯಾರಾದರೂ ನಿಮ್ಮ ಮುಂದೆ ವೇಗವಾಗಿ ನಡೆದುಕೊಂಡು ಹೋಗುತ್ತಿದ್ದು ಮತ್ತು ಇದ್ದಕ್ಕಿದ್ದಂತೆ ಸಂಪೂರ್ಣವಾಗಿ ಸ್ತಬ್ಧ ಅಥವಾ ವಿಗ್ರಹದಂತೆ ನಿಂತುಬಿಟ್ಟರೆ ನಿಮ್ಮ ರಿಯಾಕ್ಷನ್ ಹೇಗಿರುತ್ತದೆ. ಖಂಡಿತವಾಗಿಯೂ ನೀವೂ ಕೂಡ ಬೆಚ್ಚಿಬೀಳುವಿರಿ. ಮಹಿಳೆಗೆ ಸಂಬಂಧಿಸಿದ ಇಂತಹ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಸ್ತೆಯಲ್ಲಿ ನಡೆಯುವಾಗ ಥಟ್ಟನೆ ಆಕೆ ಸ್ತಬ್ಧ ಅಥವಾ ಮೂರ್ತಿಯಾಗುವುದನ್ನು ನೀವು ನೋಡಬಹುದು. ಆಕೆಯ ದೇಹದಲ್ಲಿ ಯಾವುದೇ ಚಲನೆ ಇಲ್ಲ. ಆದಾಗ್ಯೂ, ಕೆಲ ಕ್ಷಣದ ಬಳಿಕ ಆಕೆ ಪುನಃ ನಡೆದಾದಳು ಶುರು ಮಾಡುತ್ತಾಳೆ. ಜನರು ಈ ವೀಡಿಯೊವನ್ನು ನೋಡಿ ಶಾಕ್ ಆಗಿದ್ದಾರೆ ಮತ್ತು ಅದನ್ನು ಟೈಮ್ ಟ್ರಾವೆಲ್‌ಗೆ ಲಿಂಕ್ ಮಾಡುತ್ತಿದ್ದಾರೆ. ಈ ಅಚ್ಚರಿಯ ದೃಶ್ಯ ಮುಖ್ಯಾಂಶಗಳಲ್ಲಿದೆ.

COMMERCIAL BREAK
SCROLL TO CONTINUE READING

ಇದ್ದಕ್ಕಿದ್ದಂತೆ ಸ್ತಬ್ಧಳಾದ ಮಹಿಳೆ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ರಸ್ತೆಬದಿಯ ಫುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿರುವುದನ್ನು ನೀವು ಗಮನಿಸಬಹುದು. ನಡೆಯುವಾಗ, ಅವಳಿಗೆ ಏನಾಗುತ್ತದೆ ಗೊತ್ತಿಲ್ಲ, ಅವಳು ಇದ್ದಕ್ಕಿದ್ದಂತೆ ಕೆಲ ಕ್ಷಣ ಆಕೆ ಸ್ತಬ್ಧಗೊಳ್ಳುತ್ತಾಳೆ. ಆಕೆಯ ದೇಹದಲ್ಲಿನ ಚಲನೆಯೂ ನಿಂತುಹೋಗುತ್ತದೆ. ಅವಳು ವಿಗ್ರಹದಂತೆ ಒಂದೇ ಸ್ಥಳದಲ್ಲಿ ನಿಲ್ಲುತ್ತಾಳೆ. ಆ ಸಂದರ್ಭದಲ್ಲಿ ಅಲ್ಲಿ ಸಾಕಷ್ಟು  ಗಾಳಿ ಬೀಸುತ್ತಿದೆ. ಆದರೆ ಮಹಿಳೆಯ ಕೂದಲುಗಳು ಕೂಡ ಅಲ್ಲಾಡುವುದನ್ನು ನಿಲ್ಲಿಸಿವೆ ಎಂದು ಜನರು ಹೇಳುತ್ತಿದ್ದಾರೆ. ಸ್ವಲ್ಪ ಸಮಯದ ನಂತರ, ಮಹಿಳೆ ಮತ್ತೆ ಚಲನೆ ಆರಂಭಿಸುವುದನ್ನು ನೀವು ನೋಡಬಹುದು ಮತ್ತು ಪುನಃ ಮೊದಲಿನ ವೇಗದಲ್ಲಿ ನಡೆಯಲು ಶುರುಮಾಡುತ್ತಾಳೆ. ವಿಡಿಯೋ ನೋಡಿದ ಬಹುತೇಕ ನೆಟ್ಟಿಗರು ಇದೀಗ  ಶಾಕ್ ಆಗಿದ್ದಾರೆ.


ಇದನ್ನೂ ಓದಿ-ಅಯ್ಯೋ ದೇವರೇ! ವಿವಾಹಕ್ಕೂ ಮುನ್ನ ಅಲ್ಲಿನ ಯುವಕರು ತಮ್ಮ ಗಂಡಸ್ತನ ಸಾಬೀತುಪಡಿಸಬೇಕಂತೆ! ಪರೀಕ್ಷೆ ಏನು ಗೊತ್ತಾ?


ನೀವೂ ನಿಬ್ಬೆರಗಾಗುವುದು ಗ್ಯಾರಂಟಿ
ಜನರು ಈ ವಿಶಿಷ್ಟ ವೀಡಿಯೊವನ್ನು ಟೈಮ್ ಟ್ರ್ಯಾವಲ್ ನೊಂದಿಗೆ ಹೋಲಿಸಿ ನೋಡುತ್ತಿದ್ದಾರೆ. @knowyourmeme ಹೆಸರಿನ ಟ್ವಿಟರ್ ಹ್ಯಾಂಡಲ್‌ನಿಂದ ಇದನ್ನು ಅಪ್‌ಲೋಡ್ ಮಾಡಲಾಗಿದೆ. ಇದರೊಂದಿಗೆ, "ಮಹಿಳೆ ಯಾವ ಕಾರಣಕ್ಕಾಗಿ ಏಕಾಏಕಿ ಸ್ತಬ್ಧ ಳಾದಳು ಎಂಬುದನ್ನು ತಿಳಿದುಕೊಳ್ಳಲು ಇದೀಗ ಇಂಟರ್ನೆಟ್ ವೈರಲ್ ವೀಡಿಯೊದ ಆಳಕ್ಕೆ ಇಳಿಯಲು ಯತ್ನಿಸುತ್ತಿದೆ' ಎಂಬ ಶೀರ್ಷಿಕೆ ಬರೆಯಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಮತ್ತೊಬ್ಬ ಬಳಕೆದಾರರು 'ಇಂತಹ ವಿಚಿತ್ರ ಘಟನೆಗಳನ್ನು ನೋಡಿ ನಾವು ಒಂದು ಕ್ಷಣ ಫ್ರೀಜ್ ಆಗುತ್ತೇವೆ' ಎಂದು ಬರೆದಿದ್ದಾರೆ. 


ಇದನ್ನೂ ಓದಿ-ಮದ್ಯಕ್ಕಿಂತಲೂ ಹೆಚ್ಚು ಕಿಕ್ಕ್ ಕೊಡುತ್ತೇ ಈ ಕೆಂಪು ಜೇನು, ವಿಶ್ವಾದ್ಯಂತ ಇದಕ್ಕಿದೆ ಭಾರಿ ಡಿಮ್ಯಾಂಡ್, ಕೇವಲ ಇಲ್ಲಿ ಮಾತ್ರ ಸಿಗುತ್ತೆ!


Twitter ನಲ್ಲಿ ಈ ವೀಡಿಯೊವನ್ನು ವೀಕ್ಷಿಸಿ
ಇನ್ನೊಂದೆಡೆ ವಿಡಿಯೋಗೆ ಪ್ರತಿಕ್ರಿಯಿಸಿರುವ ಮೂರನೇ ಬಳಕೆದಾರರು 'ಇದು ಕೇವಲ ಕ್ಯಾಮೆರಾದ ಟ್ರಿಕ್' ಎಂದು ಹೇಳಿದ್ದಾರೆ . ಈ ವೀಡಿಯೊದಲ್ಲಿ ವಿಭಿನ್ನ ರೀತಿಯ ಪ್ರತಿಕ್ರಿಯೆಗಳು ನಿರಂತರವಾಗಿ ಬರುತ್ತಿವೆ. ವಿಡಿಯೋಗೆ ಸಾವಿರಾರು ವೀಕ್ಷಣೆಗಳು ಬಂದಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.