Viral Video: ಪ್ರತಿದಿನವೂ ಬ್ಯಾಟ್ನಿಂದ ಪತ್ನಿಯ ಹಲ್ಲೆ, ಕೋರ್ಟ್ ಮೆಟ್ಟಿಲೇರಿದ ಹೆಡ್‍ಮಾಸ್ಟರ್!
ಆಸ್ತಿಗಾಗಿ ತನ್ನ ಹೆಂಡತಿ ತನ್ನನ್ನು ಪ್ರತಿನಿತ್ಯವೂ ಹಿಂಸಿಸುತ್ತಿದ್ದಾಳೆ. ಆಕೆಯಿಂದ ನನಗೆ ಭದ್ರತೆ ನೀಡಬೇಕೆಂದು ಹೆಡ್‍ಮಾಸ್ಟರ್ ಒಬ್ಬರು ಫ್ಯಾಮಿಲಿ ಕೋರ್ಟ್‍ಗೆ ಸಿಸಿಟಿವಿ ದೃಶ್ಯಾವಳಿ ಸಮೇತ ದೂರು ನೀಡಿದ್ದಾರೆ.
ಜೈಪುರ: ಕೌಟುಂಬಿಕ ಹಿಂಸಾಚಾರದ ವಿಚಿತ್ರ ಪ್ರಕರಣದಲ್ಲಿ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಶಾಲಾ ಪ್ರಾಂಶುಪಾಲರೊಬ್ಬರು ತಮ್ಮ ಪತ್ನಿಯ ದೈಹಿಕ ಮತ್ತು ಮಾನಸಿಕ ಕಿರುಕುಳದಿಂದ ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಪ್ರತಿನಿತ್ಯವೂ ಹೆಂಡತಿ ನನ್ನನ್ನು ಹೊಡೆಯುತ್ತಾಳೆ. ಆಕೆಯ ದೈಹಿಕ ಮತ್ತು ಮಾನಸಿಕ ಕಿರುಕುಳದಿಂದ ನಾನು ಬೇಸತ್ತು ಹೋಗಿದ್ದೇನೆ. ಹೀಗಾಗಿ ನನಗೆ ಭದ್ರತೆ ನೀಡಬೇಕೆಂದು ಕೋರಿ ಸಿಸಿಟಿವಿ ದೃಶ್ಯಾವಳಿಯ ಸಮೇತ ಸರ್ಕಾರಿ ಶಾಲೆಯ ಹೆಡ್‍ಮಾಸ್ಟರ್ ಅಜಿತ್ ಸಿಂಗ್ ಎಂಬುವರು ಕೌಟುಂಬಿಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Viral Image: ಬರೋಬ್ಬರಿ 11 ಲಕ್ಷ ಖರ್ಚು ಮಾಡಿ ನಾಯಿಯಂತಾದ ವ್ಯಕ್ತಿ!
ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಅಜಿತ್ ಸಿಂಗ್ ಕೋರ್ಟ್‍ಗೆ ನೀಡಿದ್ದಾರೆ. ಕೈಯಲ್ಲಿ ಬ್ಯಾಟ್ ಹಿಡದುಕೊಂಡ ಮಹಿಳೆ ಅಟ್ಟಾಡಿಸಿಕೊಂಡು ಬಂದು ಹೊಡೆಯುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಹೊಡೆಯಬೇಡವೆಂದು ಪರಿಪರಿಯಾಗಿ ಬೇಡಿಕೊಂಡರೂ ಸಹ ಬಿಡದ ಆ ಮಹಿಳೆ ಮನಬಂದಂತೆ ಗಂಡನನ್ನು ಥಳಿಸಿದ್ದಾಳೆ.
ಇದನ್ನೂ ಓದಿ: ʼWife For Saleʼ ಎಂದು ಜಾಹೀರಾತು ನೀಡಿದ ಪತಿ: ಟೂರ್‌ಗೆ ಹೋಗಿದ್ದ ಪತ್ನಿಗೆ ಶಾಕ್!
ಗಂಡನ ಹೆಸರಿನಲ್ಲಿರು ವ ಫ್ಲ್ಯಾಟ್ಗಾಗಿ ಹೆಂಡತಿ ಈ ರೀತಿ ದೈಹಿಕ ಮತ್ತು ಮಾನಸಿಕ ಹಿಂದೆ ನೀಡುತ್ತಿದ್ದಾಳೆಂಬುದು ತಿಳಿದುಬಂದಿದೆ. ನನ್ನ ಹೆಸರಿನಲ್ಲಿರುವ ಮನೆಯನ್ನು ತನ್ನ ಹೆಸರಿಗೆ ಬರೆಸಿಕೊಡು ಎಂದು ಹೆಂಡತಿ ದಿನವೂ ಜಗಳವಾಡುತ್ತಾಳೆ. ಅಮೆರಿಕದಲ್ಲಿರುವ ಆತನ ಅಣ್ಣನ ಬೆಂಬಲದಿಂದ ನನ್ನ ಮೇಲೆ ದಿನವೂ ಹಲ್ಲೆ ನಡೆಸುತ್ತಾಳೆ ಎಂದು ಪತಿ ಅಜಿತ್ ಸಿಂಗ್ ಹೇಳಿಕೊಂಡಿದ್ದಾರೆ. ಸದ್ಯ ದೂರು ನೀಡಿರುವ ಶಿಕ್ಷಕರಿಗೆ ಭದ್ರತೆ ನೀಡುವಂತೆ ಪೊಲೀಸರಿಗೆ ಕೋರ್ಟ್ ಆದೇಶಿಸಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.