ಲಾಹೋರ್: ಆನ್‌ಲೈನ್ ಗೇಮ್ PUBG ಪ್ರಭಾವದಿಂದ 14 ವರ್ಷದ ಬಾಲಕನೊಬ್ಬ ತನ್ನ ತಾಯಿ ಮತ್ತು ಇಬ್ಬರು ಅಪ್ರಾಪ್ತ ಸಹೋದರಿಯರನ್ನು ಒಳಗೊಂಡಂತೆ ತನ್ನ ಇಡೀ ಕುಟುಂಬವನ್ನೇ ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ಪಾಕಿಸ್ತಾನ(Pakistan)ದ ಪಂಜಾಬ್ ಪ್ರಾಂತ್ಯದ ರಾಜಧಾನಿಯಲ್ಲಿ ಪೊಲೀಸರು ನಾಲ್ವರು ಶವಗಳನ್ನು ಪತ್ತೆ ಹಚ್ಚಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.  


COMMERCIAL BREAK
SCROLL TO CONTINUE READING

ಕಳೆದ ವಾರ ಲಾಹೋರ್‌(Lahore)ನ ಕಹ್ನಾ ಪ್ರದೇಶದಲ್ಲಿ 45 ವರ್ಷದ ಆರೋಗ್ಯ ಕಾರ್ಯಕರ್ತೆ ನಹೀದ್ ಮುಬಾರಕ್, ಅವರ 22 ವರ್ಷದ ಮಗ ತೈಮೂರ್ ಮತ್ತು 17 ಮತ್ತು 11 ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ಶವವಾಗಿ ಪತ್ತೆಯಾಗಿದ್ದರು. ನಹೀದ್ ಅವರ 14 ವರ್ಷದ ಪುತ್ರ ಮಾತ್ರ ಬದುಕಿದ್ದ. ಆತನೇ ಕೊಲೆಗಾರನೆಂದು ಪೊಲೀಸರ ಪ್ರಕಟಣೆ ತಿಳಿಸಿದೆ.  


ಜನಪ್ರಿಯ ಆಟವಾಗಿರುವ PUBG (PlayerUnknown's Battlegrounds)ಗೇಮ್ ನ ವ್ಯಸನಿಯಾಗಿದ್ದ ಬಾಲಕ ಅನೇಕ ಬಾರಿ ಪೋಷಕರಿಂದ ಟೀಕೆಗೊಳಗಾಗಿದ್ದ. ಹಿಂಸೆಯನ್ನು ಪ್ರಚೋದಿಸುವ ಅಪಾಯಕಾರಿ ಗೇಮ್ ನ ಬಗ್ಗೆ ಪೋಷಕರು ಆಗಾಗ ಯುವಕನಿಗೆ ಪೋಷಕರು ಎಚ್ಚರಿಕೆ ನೀಡುತ್ತಿದ್ದರು. ಆದರೆ ಬಾಲಕ ಮಾತ್ರ ನಿರಂತರವಾಗಿ ಗೇಮ್ ಆಡುತ್ತಿದ್ದ. PUBG ಆನ್‌ಲೈನ್ ಆಟದ ವ್ಯಸನಿಯಾಗಿದ್ದ ಈತ ಅದರ ಪ್ರಭಾವದಿಂದ ತನ್ನ ತಾಯಿ ಮತ್ತು ಸಹೋದರ, ಸಹೋದರಿಯರನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: The Gate Of Hell: ಈ ದೇವಾಲಯಕ್ಕೆ ‘ನರಕದ ದ್ವಾರ’ ಎನ್ನುತ್ತಾರೆ, ಯಾರು ಹೋದರೂ ಸಾಯುತ್ತಾರಂತೆ!


ತನ್ನ ದಿನದ ಹೆಚ್ಚಿನ ಸಮಯವನ್ನು ಆನ್‌ಲೈನ್ ಆಟ(PUBG Mobile Game)ದಲ್ಲಿಯೇ ಕಳೆಯುತ್ತಿದ್ದ ಬಾಲಕನಲ್ಲಿ ಮಾನಸಿಕ ಸಮಸ್ಯೆ ಉಂಟಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ನಹೀದ್ ವಿಚ್ಛೇಧಿತ ಮಹಿಳೆಯಾಗಿದ್ದು, ಅಧ್ಯಯನದ ಕಡೆಗೆ ಹೆಚ್ಚಿನ ಗಮನ ನೀಡದೆ PUBG ಆಟವನ್ನಾಡುತ್ತಾ ಸಮಯ ವ್ಯರ್ಥಮಾಡುತ್ತಿದ್ದ ಮಗನನ್ನು ಆಗಾಗ ಗದರುತ್ತಿದ್ದರು. ಘಟನೆ ನಡೆದ ದಿನ ಕೂಡ ಮಗನಿಗೆ ಅವರು ಗದರಿದ್ದರಂತೆ. ಬಳಿಕ ಕಬೋರ್ಡ್‌ನಿಂದ ತಾಯಿಯ ಪಿಸ್ತೂಲ್ ಅನ್ನು ಕೈಗೆತ್ತಿಕೊಂಡಿದ್ದ ಬಾಲಕ ನಿದ್ರಿಸುತ್ತಿದ್ದ ವೇಳೆಯಲ್ಲಿ ಆಕೆಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ತನ್ನ ಸಹೋದರ-ಸಹೋದರಿಯರನ್ನೂ ಗುಂಡಿಕ್ಕಿ ಕೊಲೆ ಮಾಡಿದ್ದಾನೆ.


ಮರುದಿನ ಅಕ್ಕಪಕ್ಕದ ಮನೆಯವರು ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾಲಕ ತಾನು ಮನೆಯ ಮೇಲಿನ ಮಹಡಿಯಲ್ಲಿದ್ದೆ ಮತ್ತು ತನ್ನ ಕುಟುಂಬದವರನ್ನು ಯಾರು ಕೊಂದಿದ್ದಾರೆಂದು ತನಗೆ ಗೊತ್ತಿಲ್ಲವೆಂದು ಪೊಲೀಸರ ಬಳಿ ಹೇಳಿದ್ದ. ಬಳಿಕ ತಾನೇ ಗುಂಡು ಹಾರಿಸಿ(PUBG Violence) ಕೊಂದಿರುವುದಾಗಿ ತಿಳಿಸಿದ್ದಾನೆ.


ಕುಟುಂಬದ ರಕ್ಷಣೆಗಾಗಿ ಪಿಸ್ತೂಲ್ ಖರೀದಿಸಿದ್ದರು!


ಪರವಾನಗಿ ಪಡೆದ ಪಿಸ್ತೂಲ್ ಅನ್ನು ನಹೀದ್ ಅವರು ತನ್ನ ಕುಟುಂಬದ ರಕ್ಷಣೆಗಾಗಿ ಖರೀಸಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ವರಿಗೆ ಗುಂಡಿಕ್ಕಿ ಕೊಂದ(PUBG Crime)ಬಳಿಕ ಬಾಲಕ ಅದನ್ನು ಚರಂಡಿಗೆ ಎಸೆದಿದ್ದಾನಂತೆ. ಸದ್ಯ ಬಾಲಕನ ರಕ್ತಸಿಕ್ತ ಬಟ್ಟೆಯನ್ನು ಮಾತ್ರ ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿರುವ ಪೊಲೀಸರು ಚರಂಡಿಯಲ್ಲಿ ಬಿದ್ದಿರುವ ಪಿಸ್ತೂಲ್ ಅನ್ನು ಇನ್ನೂ ವಶಕ್ಕೆ ತೆಗೆದುಕೊಂಡಿಲ್ಲವೆಂದು ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.   


ಇದನ್ನೂ ಓದಿ: ಕರೋನಾದ ಮುಂದಿನ ರೂಪಾಂತರವು ಓಮಿಕ್ರಾನ್‌ಗಿಂತ ಹೆಚ್ಚು ಅಪಾಯಕಾರಿ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.