ಕಾಬುಲ್: ಕೇವಲ 24 ಗಂಟೆ ಅವಧಿಯಲ್ಲಿ 262 ತಾಲಿಬಾನ್ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ತಿಳಿಸಿದೆ. ಅಫಘಾನ್ ಪಡೆಗಳ ಕಾರ್ಯಾಚರಣೆಯಲ್ಲಿ 176 ತಾಲಿಬಾನ್ ಭಯೋತ್ಪಾದಕರು ಗಾಯಗೊಂಡಿದ್ದು, 21 ಐಇಡಿ(IED) ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಸಚಿವಾಲಯ ಟ್ವೀಟ್ ಮೂಲಕ ಮಾಹಿತಿ ನೀಡಿದೆ.   


COMMERCIAL BREAK
SCROLL TO CONTINUE READING

ತಾಲಿಬಾನ್ ಭಯೋತ್ಪಾದಕರ ನಗರಗಳ ಆಕ್ರಮಣ ತಡೆಯುವ ಪ್ರಯತ್ನವಾಗಿ ಅಫ್ಘಾನಿಸ್ತಾನ ಸರ್ಕಾರವು(Afghanistan Govt) ದೇಶದ ಬಹುತೇಕ ಎಲ್ಲೆಡೆ ಕರ್ಫ್ಯೂ ವಿಧಿಸಿದೆ ಎಂದು ವರದಿಯಾಗಿದೆ. ರಾಜಧಾನಿ ಕಾಬೂಲ್ ಮತ್ತು ಇತರ 2 ಪ್ರಾಂತ್ಯಗಳನ್ನು ಹೊರತುಪಡಿಸಿ ರಾತ್ರಿ 10 ರಿಂದ ಬೆಳಗ್ಗೆ 4 ಗಂಟೆವರೆಗೆ ಯಾವುದೇ ಸಂಚಾರಕ್ಕೆ ಅನುಮತಿ ಇರುವುದಿಲ್ಲವೆಂದು ತಿಳಿಸಲಾಗಿದೆ. ಕಳೆದ 2 ತಿಂಗಳಲ್ಲಿ ಅಂತಾರಾಷ್ಟ್ರೀಯ ಪಡೆಗಳು ದೇಶದಿಂದ ಹಿಂದೆ ಸರಿದಿರುವುದರಿಂದ ತಾಲಿಬಾನ್ ಮತ್ತು ಅಫಘಾನ್ ಸರ್ಕಾರಿ ಪಡೆಗಳ ನಡುವಿನ ಹೋರಾಟ ಉಲ್ಬಣಗೊಂಡಿದೆ ಎಂದು ವರದಿಯಾಗಿದೆ.


ಇದನ್ನೂ ಓದಿ: Coronavirus Origin Investigation: ಕೊರೋನಾದ ಉತ್ಪತ್ತಿಯ ಕುರಿತಾದ ತನಿಖೆಯಲ್ಲಿ WHOಗೆ ಸಹಕರಿಸುವಂತೆ ಚೀನಾಗೆ ಸೂಚಿಸಿದ UN


ಉಗ್ರಗಾಮಿ ಗುಂಪು(Terrorist Groups) ಎಲ್ಲಾ ಭೂಪ್ರದೇಶದ ಅರ್ಧದಷ್ಟು ಭಾಗವನ್ನು ವಶಪಡಿಸಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಅಮೆರಿಕ ಪಡೆಯ ವಾಪಸಾತಿ, ಗಡಿ ನುಸುಳುವಿಕೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಇತರ ಪ್ರದೇಶಗಳನ್ನು ಹಿಮ್ಮೆಟ್ಟಿಸಿದ ಹಿನ್ನೆಲೆ ಇದು ಮತ್ತಷ್ಟು ಹೆಚ್ಚಾಗಿದೆ. ಸುಮಾರು 20 ವರ್ಷಗಳ ಹಿಂದೆ ಅಮೆರಿಕ ಆಕ್ರಮಣ ಅಧಿಕಾರದಿಂದ ಹೊರಹಾಕಲ್ಪಟ್ಟ ಮೂಲಭೂತವಾದಿ ಇಸ್ಲಾಮಿಸ್ಟ್ ಉಗ್ರ ಸಂಘಟನೆ ತಾಲಿಬಾನ್, ಸರಬರಾಜು ಮಾರ್ಗಗಳನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿರುವುದರಿಂದ ಪ್ರಮುಖ ರಸ್ತೆಗಳನ್ನು ಸಹ ವಶಪಡಿಸಿಕೊಂಡಿದೆ. ಉಗ್ರ ಸಂಘಟನೆ ಸದಸ್ಯರು ಪ್ರಮುಖ ನಗರಗಳನ್ನು ಬಂದ್ ಮಾಡುತ್ತಿದ್ದಾರೆ, ಆದರೆ ಇದುವರೆಗೆ ಒಂದನ್ನೂ ಸೆರೆಹಿಡಿಯಲು ಸಾಧ್ಯವಾಗಿಲ್ಲ.


‘ಹಿಂಸಾಚಾರ ನಿಗ್ರಹಿಸಲು ಮತ್ತು ತಾಲಿಬಾನ್(Taliban) ಉಗ್ರ ಚಟುವಟಿಕೆಗಳನ್ನು ಮಿತಿಗೊಳಿಸಲು 31 ಪ್ರಾಂತ್ಯಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಕಾಬೂಲ್, ಪಂಜ್‌ಶೀರ್ ಮತ್ತು ನಂಗರ್‌ಹಾರ್‌ಗೆ ವಿನಾಯಿತಿ ನೀಡಲಾಗಿದೆ’ ಎಂದು ಆಂತರಿಕ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ತಾಲಿಬಾನ್ ತನ್ನ ಉಗ್ರಚಟುವಟಿಕೆಗಳನ್ನು ಮುಂದುವರೆಸಿದಂತೆ, ಕಂದಹಾರ್ ನಗರದ ಹೊರವಲಯದಲ್ಲಿ ಈ ವಾರ ಘರ್ಷಣೆಗಳು ತೀವ್ರವಾಗಿವೆ.


Swiss Bankನಲ್ಲಿ ಭಾರತೀಯರು ಹೊಂದಿರುವ ಕಪ್ಪು ಹಣ ಎಷ್ಟು? ನಿಜಾಂಶ ಹೊರಹಾಕಿದ ಸರ್ಕಾರ


ಇದಕ್ಕೆ ಪ್ರತಿಯಾಗಿ ಅಮೆರಿಕ(America) ಈ ಪ್ರದೇಶದಲ್ಲಿರುವ ಉಗ್ರಗಾಮಿ ಸ್ಥಳಗಳ ಮೇಲೆ ಗುರುವಾರ ವೈಮಾನಿಕ ದಾಳಿ ನಡೆಸಿತ್ತು. ಆದರೆ ಆಗಸ್ಟ್ 31 ರಂದು ಅಫ್ಘಾನಿಸ್ತಾನದಲ್ಲಿ ಅಮೆರಿಕ ಕಾರ್ಯಾಚರಣೆಗಳು ಅಧಿಕೃತವಾಗಿ ಕೊನೆಗೊಳ್ಳಲಿದ್ದು, ಮುಂದಿನ ತಿಂಗಳುಗಳ ಬಗ್ಗೆ ಆತಂಕ ಎದುರಾಗಿದೆ. ಅಮೆರಿಕ ನೇತೃತ್ವದ ಪಡೆಗಳು ಅಕ್ಟೋಬರ್ 2001ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅನ್ನು ಅಧಿಕಾರದಿಂದ  ಉಚ್ಛಾಟಿಸಿತ್ತು. ಈ ಭಯೋತ್ಪಾಕದ ಗುಂಪು ಒಸಾಮಾ ಬಿನ್ ಲಾಡೆನ್ ಮತ್ತು ಸೆಪ್ಟೆಂಬರ್ 11ರ ಅಮೆರಿಕ ಮೇಲಿನ ದಾಳಿಗೆ ಸಂಬಂಧಿಸಿದ ಇತರ ಅಲ್-ಖೈದಾ ವ್ಯಕ್ತಿಗಳಿಗೆ ಆಶ್ರಯಿಸುತ್ತಿತ್ತು ಎನ್ನಲಾಗಿದೆ.


ಅಫ್ಘಾನಿಸ್ತಾನವು ಮತ್ತೆ ವಿದೇಶಿ ಜಿಹಾದಿಗಳಿಗೆ ಪಶ್ಚಿಮದ ವಿರುದ್ಧ ಸಂಚು ರೂಪಿಸಲು ನೆಲೆಯಾಗಲು ಸಾಧ್ಯವಿಲ್ಲ ಎಂದು ಅಮೆರಿಕದ ಪಡೆಗಳು ಖಚಿತಪಡಿಸಿವೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್(Joe Biden) ಕೂಡ ಇದನ್ನು ಸಮರ್ಥಿಸಿಕೊಂಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಅಮೆರಿಕ ಸೈನ್ಯವು ಸದ್ದಿಲ್ಲದೆ ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಣೆಯ ಕೇಂದ್ರವಾಗಿದ್ದ ವಿಸ್ತಾರ ನೆಲೆಯಾಗಿರುವ ಬಾಗ್ರಾಮ್ ವಾಯುನೆಲದಿಂದ ನಿರ್ಗಮಿಸಿತು. ಈ ಹಿಂದೆ ಇದೇ ಪ್ರದೇಶದಲ್ಲಿ ಅಮೆರಿಕ ಸೈನ್ಯದ ಹತ್ತಾರು ಸೈನಿಕರು ಬೀಡುಬಿಟ್ಟಿದ್ದರು. 6  ತಿಂಗಳೊಳಗೆ ತಾಲಿಬಾನ್ ದೇಶದ ಮೇಲಿನ ನಿಯಂತ್ರಣವನ್ನು ತನ್ನ ವಶಕ್ಕೆ ತೆಗೆದುಕೊಳ್ಳಬಹುದೆಂದು ಅಮೆರಿಕದ ಕೆಲ ಗುಪ್ತಚರ ವಿಶ್ಲೇಷಕರು ಆತಂಕ ವ್ಯಕ್ತಪಡಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ