ನವದೆಹಲಿ: ಕರೋನಾವೈರಸ್ (Coronavirus) ಸಾಂಕ್ರಾಮಿಕದ ಮಧ್ಯೆ ಯಾವುದೇ ರೀತಿಯ ಶಸ್ತ್ರಚಿಕಿತ್ಸೆಗೆ ಸೂಕ್ತವಲ್ಲ  ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ. ಮುಂದಿನ ಕೆಲ ದಿನಗಳವರೆಗೆ ಯಾರೂ ಸಹ ಶಸ್ತ್ರಚಿಕಿತ್ಸೆಗೆ ಒಳಗಾಗದಿರುವುದು ಉತ್ತಮ. ಯಾರಿಗೇ ಆದರೂ ಶಸ್ತ್ರಚಿಕಿತ್ಸೆ ಅಗತ್ಯವಿದ್ದಲ್ಲಿ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿವರೆಗೆ ಶಸ್ತ್ರಚಿಕಿತ್ಸೆಯನ್ನು ಮುಂದೂಡಿ ಎಂದು ಅಧ್ಯಯನವೊಂದು ಸಲಹೆ ನೀಡಿದೆ.


COMMERCIAL BREAK
SCROLL TO CONTINUE READING

ವಿಜ್ಞಾನಿಗಳು ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಈ ಸಮಯದಲ್ಲಿ ಶಸ್ತ್ರಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಗೆ ಒಳಗಾದವರಲ್ಲಿ ಹೆಚ್ಚಿನ ಜನರಿಗೆ ಪ್ರಾಣಾಪಾಯ ಇದೇ ಎಂದು ಕಂಡುಬಂದಿದೆ. 


ಬ್ರಿಟನ್‌ನ ಅತ್ಯಂತ ಪ್ರಸಿದ್ಧ ವೈದ್ಯಕೀಯ ಜರ್ನಲ್ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ ಶಸ್ತ್ರಚಿಕಿತ್ಸೆಯನ್ನು ಎಲ್ಲಿಯವರೆಗೂ ಮುಂದೂಡಬಹುದೋ ಅಲ್ಲಿಯವರೆಗೆ ಮುಂದೂಡುವಂತೆ ರೋಗಿಗಳಿಗೆ ಸಲಹೆ ನೀಡಿದೆ. ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳು ಕರೋನಾ ಸೋಂಕಿನಿಂದ ತಪ್ಪಿಸಿಕೊಳ್ಳುವುದು ಕಷ್ಟಕರವಾಗಿದೆ ಎಂದು ದಿ ಲ್ಯಾಸೆಂಟ್ ಅಧ್ಯಯನವು ಕಂಡುಹಿಡಿದಿದೆ.


ಅಧ್ಯಯನದ ಪ್ರಕಾರ ಶಸ್ತ್ರಚಿಕಿತ್ಸೆಗೆ ಒಳಗಾದವರಲ್ಲಿ 30 ದಿನಗಳಲ್ಲಿ 28 ಪ್ರತಿಶತ ಜನರು ಸಾವನ್ನಪ್ಪಿದ್ದಾರೆ. ಈ 28 ಪ್ರತಿಶತ ಜನರ ಮೌಲ್ಯಮಾಪನದ ನಂತರ ಅವರಲ್ಲಿ 80 ಪ್ರತಿಶತದಷ್ಟು ಜನರು ಉಸಿರಾಡಲು ತೊಂದರೆ ಹೊಂದಿದ್ದಾರೆಂದು ತಿಳಿದುಬಂದಿದೆ.


24 ದೇಶಗಳಲ್ಲಿ 235 ಆಸ್ಪತ್ರೆಗಳಲ್ಲಿ ಅಧ್ಯಯನ:
ಈ ಅಧ್ಯಯನವು ಶಸ್ತ್ರಚಿಕಿತ್ಸೆಗೆ 7 ದಿನಗಳ ಮೊದಲು ಅಥವಾ ಶಸ್ತ್ರಚಿಕಿತ್ಸೆಯ 30 ದಿನಗಳ ನಂತರ  ಕೋವಿಡ್ -19 (Covid-19)  ಪಾಸಿಟಿವ್ ಎಂದು ವರದಿಯಾದವರನ್ನು ಒಳಗೊಂಡಿತ್ತು. ಶಸ್ತ್ರಚಿಕಿತ್ಸೆಗೆ ಒಳಗಾಗಿ 30 ದಿನಗಳಲ್ಲಿ ಎಷ್ಟು ಸಾವುಗಳು ಸಂಭವಿಸಿವೆ ಎಂದು ಇದರಲ್ಲಿ ಪತ್ತೆ ಹಚ್ಚಲಾಗಿದೆ. ಜನವರಿ 1 ರಿಂದ ಮಾರ್ಚ್ 31, 2020 ರ ನಡುವೆ ಶಸ್ತ್ರಚಿಕಿತ್ಸೆಗೆ ಒಳಗಾದ 1128 ರೋಗಿಗಳ ಬಗ್ಗೆ ಅಧ್ಯಯನ ನಡೆಸಲಾಯಿತು. ಈ ಪೈಕಿ 835 ಅಂದರೆ 74 ಪ್ರತಿಶತದಷ್ಟು ಜನರಿಗೆ ಹಠಾತ್ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದರೆ 280 ರೋಗಿಗಳು ಅಂದರೆ 25 ಪ್ರತಿಶತದಷ್ಟು ಶಸ್ತ್ರಚಿಕಿತ್ಸೆಯನ್ನು ಮೊದಲೇ ಯೋಜಿಸಲಾಗಿತ್ತು. 294 ಅಂದರೆ, ಶೇಕಡಾ 26 ರಷ್ಟು ರೋಗಿಗಳು ಶಸ್ತ್ರಚಿಕಿತ್ಸೆಯ ನಂತರ ಕರೋನಾ ಸೋಂಕಿಗೆ ಒಳಗಾಗಿದ್ದಾರೆಂದು ವರದಿಯಾಗಿದೆ.


ಪ್ರಮುಖ ವಿಷಯಗಳು:
- ಒಟ್ಟು 1128 ರೋಗಿಗಳಲ್ಲಿ, 268 ರೋಗಿಗಳು, ಅಂದರೆ 24 ಪ್ರತಿಶತದಷ್ಟು ಜನರು ಶಸ್ತ್ರಚಿಕಿತ್ಸೆಯ 30 ದಿನಗಳಲ್ಲಿ ಸಾವನ್ನಪ್ಪಿದ್ದಾರೆ.
- 577 ಅಂದರೆ 51 ಪ್ರತಿಶತ ರೋಗಿಗಳಿಗೆ ಉಸಿರಾಟದ ತೊಂದರೆ ಇತ್ತು.
- ಈ 577 ರಲ್ಲಿ 219 ಅಂದರೆ 38 ಪ್ರತಿಶತ ರೋಗಿಗಳನ್ನು ಉಳಿಸಲು ಸಾಧ್ಯವಾಗಿಲ್ಲ.
- ಒಟ್ಟು ಸಾವುಗಳನ್ನು ನೋಡುವುದಾದರೆ 268 ಸಾವುಗಳಲ್ಲಿ 219 ಅಂದರೆ 82 ಪ್ರತಿಶತದಷ್ಟು ಸಾವುಗಳು ಉಸಿರಾಟದ ತೊಂದರೆಯಿಂದಾಗಿ ಸಂಭವಿಸಿದೆ.


ಈ ಅಧ್ಯಯನದಿಂದ ಪಡೆದ ಫಲಿತಾಂಶಗಳು ಗಮನಾರ್ಹವಾಗಿ ಶಸ್ತ್ರಚಿಕಿತ್ಸೆಯ ನಂತರ, ಅರ್ಧಕ್ಕಿಂತ ಹೆಚ್ಚು ಜನರಿಗೆ ಉಸಿರಾಟದ ಕಾಯಿಲೆಗಳು ಇದ್ದು, ಇದು ಮಾರಕವೆಂದು ಸಾಬೀತಾಗಿದೆ. ಅದಕ್ಕಾಗಿಯೇ ಅನಿವಾರ್ಯವಲ್ಲದ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಬೇಕು. 70 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಶಸ್ತ್ರಚಿಕಿತ್ಸೆಯಿಂದ ದೂರವಿರಬೇಕು, ವಿಶೇಷವಾಗಿ ಕರೋನಾ ಸಾಂಕ್ರಾಮಿಕ ಯುಗದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗದಿರುವುದು ಒಳ್ಳೆಯದು ಎನ್ನಲಾಗಿದೆ.